ಅಡಾಲ್ಫ್ ಹಿಟ್ಲರ್ ನಂತರ ಈಗ ನೆತನ್ಯಾಹು ಬಹುದೊಡ್ಡ ಭಯೋತ್ಪಾದಕ: ಮಾಜಿ ಸಿಎಂ ಮೆಹಬೂಬಾ ಮುಫ್ತಿ

ಪ್ಯಾಲೇಸ್ಟಿನ್ ನಲ್ಲಿ ಹತ್ಯಾಕಾಂಡ ನಡೆಸಿದಂತೆ ಇದೀಗ ಲೆಬನಾನ್ ನಲ್ಲೂ ಜನರನ್ನು ಕೊಲ್ಲುತ್ತಿದ್ದಾರೆ. ಇದಕ್ಕೆ ಬರೀ ಖಂಡನೆ ಮಾತ್ರ ಸಾಕಾಗುವುದಿಲ್ಲ ಎಂದು ಮೆಹಬೂಬಾ ಮುಪ್ತಿ ಹೇಳಿದ್ದಾರೆ.
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿPTI
Updated on

ಶ್ರೀನಗರ: ಯಹೂದಿ ನಾಯಕ ಪ್ಯಾಲೆಸ್ತೀನ್ ಮತ್ತು ಲೆಬನಾನ್ ಅನ್ನು 'ಗ್ಯಾಸ್ ಚೇಂಬರ್'ಗಳನ್ನಾಗಿ ಮಾಡಿರುವುದರಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು 'ಅಡಾಲ್ಫ್ ಹಿಟ್ಲರ್ ನಂತರದ ಅತಿದೊಡ್ಡ ಭಯೋತ್ಪಾದಕ' ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಮೊನ್ನೆಯಷ್ಟೆ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದ ಮುಪ್ತಿ ಲೆಬನಾನ್ ಮತ್ತು ಪ್ಯಾಲೆಸ್ಟೈನ್ ಜನರಿಗೆ ಬೆಂಬಲ ನೀಡಲು ತನ್ನ ಚುನಾವಣಾ ಪ್ರಚಾರವನ್ನು ಒಂದು ದಿನದ ಮಟ್ಟಿಗೆ ರದ್ದುಗೊಳಿಸಿದ್ದರು. ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನೆತನ್ಯಾಹು ವಿರುದ್ಧ ತೀರ್ಪು ನೀಡಿದೆ. ಪ್ಯಾಲೇಸ್ಟಿನ್ ನಲ್ಲಿ ಹತ್ಯಾಕಾಂಡ ನಡೆಸಿದಂತೆ ಇದೀಗ ಲೆಬನಾನ್ ನಲ್ಲೂ ಜನರನ್ನು ಕೊಲ್ಲುತ್ತಿದ್ದಾರೆ. ಇದಕ್ಕೆ ಬರೀ ಖಂಡನೆ ಮಾತ್ರ ಸಾಕಾಗುವುದಿಲ್ಲ ಎಂದು ಮೆಹಬೂಬಾ ಮುಪ್ತಿ ಹೇಳಿದ್ದಾರೆ.

ನೆತನ್ಯಾಹುವನ್ನು ಹಿಟ್ಲರ್ ನಂತರದ ಅತಿದೊಡ್ಡ ಭಯೋತ್ಪಾದಕ ಎಂದು ಕರೆದ ಮಾಜಿ ಮುಖ್ಯಮಂತ್ರಿ, ಹಿಟ್ಲರ್ ಜನರನ್ನು ಕೊಲ್ಲಲು ಗ್ಯಾಸ್ ಚೇಂಬರ್‌ಗಳನ್ನು ಸ್ಥಾಪಿಸಿದ್ದನು. ಆದರೆ ನೆತನ್ಯಾಹು ಪ್ಯಾಲೆಸ್ಟೈನ್ ಮತ್ತು ಲೆಬನಾನ್ ಅನ್ನು ಗ್ಯಾಸ್ ಚೇಂಬರ್‌ಗಳಾಗಿ ಪರಿವರ್ತಿಸಿದ್ದಾರೆ. ಅಲ್ಲಿ ಅವರು ಸಾವಿರಾರು ಜನರನ್ನು ಕೊಲ್ಲುತ್ತಿದ್ದಾರೆ ಎಂದು ಆರೋಪಿಸಿದರು.

ನೆತನ್ಯಾಹು ಆಡಳಿತದೊಂದಿಗೆ ಸಂಬಂಧ ಹೊಂದುವ ಕೇಂದ್ರ ಸರ್ಕಾರದ ನಿರ್ಧಾರ ತಪ್ಪು. ನಾವು ಮಹಾತ್ಮ ಗಾಂಧಿಯವರ ಕಾಲದಿಂದಲೂ ಪ್ಯಾಲೆಸ್ತೀನ್ ಪರವಾಗಿ ನಿಂತಿದ್ದೇವೆ. ಆಡಳಿತದೊಂದಿಗೆ ಸಂಬಂಧವನ್ನು ಹೊಂದಿದ್ದು ಮತ್ತು ಜನರನ್ನು ಕೊಲ್ಲಲು ಬಳಸುತ್ತಿರುವ ಶಸ್ತ್ರಾಸ್ತ್ರಗಳು ಮತ್ತು ಡ್ರೋನ್‌ಗಳನ್ನು ಪೂರೈಸುವುದು ತಪ್ಪು ನಿರ್ಧಾರ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

ಮೆಹಬೂಬಾ ಮುಫ್ತಿ
ಯೆಮೆನ್ ಹೌತಿ ಬಂಡುಕೋರ ನೆಲೆಗಳ ಮೇಲೂ ಇಸ್ರೇಲ್ ವಾಯುದಾಳಿ; ಏಕಕಾಲದಲ್ಲಿ 4 ಶತ್ರುಗಳೊಂದಿಗೆ ಯುದ್ಧ!

ಹತ್ಯೆಗೀಡಾದ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಹುತಾತ್ಮ ಎಂದು ಕರೆದಿರುವುದಕ್ಕೆ ಬಿಜೆಪಿ ಟೀಕಿಸಿದೆ. ಕೇಸರಿ ಪಕ್ಷವು ಹತ್ಯೆಯ ವಿರುದ್ಧ ನೀಡುತ್ತಿರುವ ಅಭಿಪ್ರಾಯಗಳನ್ನು ನೋಡಬೇಕು. ಪ್ಯಾಲೆಸ್ತೀನ್ ಜನರಿಗಾಗಿ ನಸ್ರಲ್ಲಾ ನಡೆಸಿದ ಸುದೀರ್ಘ ಹೋರಾಟದ ಬಗ್ಗೆ ಅವರಿಗೆ (ಬಿಜೆಪಿ) ಏನು ಗೊತ್ತು? ಕಾಶ್ಮೀರ, ಲಖನೌ ಮತ್ತು ದೇಶದ ಇತರ ಭಾಗಗಳಲ್ಲಿ ಎಷ್ಟು ಜನರು ಹುತಾತ್ಮ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂಬುದನ್ನು ಅವರು ನೋಡಬೇಕು. ಅವರ ಆಲೋಚನೆ ಎಷ್ಟು ತಪ್ಪಾಗಿದೆ ಎಂದು ತಿಳಿಯುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com