ಮಧ್ಯ ಪ್ರದೇಶ: ಎನ್‌ಕೌಂಟರ್‌ನಲ್ಲಿ ಇಬ್ಬರು ಶಸ್ತ್ರಸಜ್ಜಿತ ಮಹಿಳಾ ನಕ್ಸಲರ ಹತ್ಯೆ

ಹತ್ಯೆಗೀಡಾದ ಛತ್ತೀಸ್‌ಗಢ ಮೂಲದ ಈ ಮಹಿಳಾ ನಕ್ಸಲರ ತಲೆಗೆ ತಲಾ 14 ಲಕ್ಷ ರೂ. ಬಹುಮಾನ. ಅಂದರೆ ಒಟ್ಟಾರೆ 28 ಲಕ್ಷ ರೂ. ಬಹುಮಾನ ಹೊಂದಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಭೋಪಾಲ್: ಮಧ್ಯಪ್ರದೇಶ ಪೊಲೀಸರು ಬುಧವಾರ ಬೆಳಗ್ಗೆ ನಡೆಸಿದ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ, ರಾಜ್ಯ ಪೊಲೀಸರು ಮಾಂಡ್ಲಾ ಜಿಲ್ಲೆಯ ಕಾಡಿನಲ್ಲಿ ಇಬ್ಬರು ಶಸ್ತ್ರಸಜ್ಜಿತ ಮತ್ತು ವಾಂಟೆಡ್ ಮಹಿಳಾ ನಕ್ಸಲರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಕಾರ್ಯಾಚರಣೆಯನ್ನು ದೃಢಪಡಿಸಿದ ಮಧ್ಯಪ್ರದೇಶ ವಿಶೇಷ ಡಿಜಿ(ನಕ್ಸಲ್ ವಿರೋಧಿ) ಪಂಕಜ್ ಶ್ರೀವಾಸ್ತವ ಅವರು, ಹತ್ಯೆಗೀಡಾದ ಛತ್ತೀಸ್‌ಗಢ ಮೂಲದ ಈ ಮಹಿಳಾ ನಕ್ಸಲರ ತಲೆಗೆ ತಲಾ 14 ಲಕ್ಷ ರೂ. ಬಹುಮಾನ. ಅಂದರೆ ಒಟ್ಟಾರೆಯಾಗಿ 28 ಲಕ್ಷ ರೂ. ಬಹುಮಾನವನ್ನು ಹೊಂದಿದ್ದರು ಎಂದು ಟಿಎನ್‌ಐಇಗೆ ತಿಳಿಸಿದ್ದಾರೆ.

ಮಮತಾ ಮತ್ತು ಪ್ರಮೀಳಾ ಎಂದು ಗುರುತಿಸಲಾದ ಮಹಿಳಾ ಮಾವೋವಾದಿ ಜೋಡಿಯು ಛತ್ತೀಸ್‌ಗಢ ಮೂಲದವರಾಗಿದ್ದು, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಬಾಲಘಾಟ್, ಮಾಂಡ್ಲಾ ಮತ್ತು ಕವರ್ಧಾ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಎಡಪಂಥೀಯ ಉಗ್ರಗಾಮಿಗಳು(ಎಲ್‌ಡಬ್ಲ್ಯೂಇಗಳು) ಕನ್ಹಾ-ಭೋರಾಮ್‌ದೇವ್ ವಿಭಾಗದ ಭಾಗವಾಗಿದ್ದರು ಎಂದು ಅವರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಛತ್ತೀಸ್‌ಗಢ: ಬಿಜಾಪುರದಲ್ಲಿ ಎನ್‌ಕೌಂಟರ್‌; 31 ನಕ್ಸಲರ ಹತ್ಯೆ, ಇಬ್ಬರು ಪೊಲೀಸರು ಹುತಾತ್ಮ

ಎನ್‌ಕೌಂಟರ್‌ ಸ್ಥಳದಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ವೈರ್‌ಲೆಸ್ ಸೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com