ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೆಲಸ ಕಳೆದುಕೊಂಡ ಶಿಕ್ಷಕರ ಬೆಂಬಲಕ್ಕೆ ನಿಲ್ಲುತ್ತೇವೆ, ಅವರ ಘನತೆ ಪುನಃಸ್ಥಾಪಿಸಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತೇವೆ: ಮಮತಾ ಬ್ಯಾನರ್ಜಿ

ಬಾಧಿತ ಶಿಕ್ಷಕರು ಮತ್ತು ಸಿಬ್ಬಂದಿ ತಮ್ಮ ತಮ್ಮ ಶಾಲೆಗಳಿಗೆ ಮರಳಬೇಕು ಮತ್ತು 'ಸ್ವಯಂಪ್ರೇರಣೆಯಿಂದ' ಕರ್ತವ್ಯವನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.
Published on

ಕೋಲ್ಕತ್ತಾ: ಸುಪ್ರೀಂ ಕೋರ್ಟ್ ಆದೇಶದ ನಂತರ ಉದ್ಯೋಗ ಕಳೆದುಕೊಂಡ ಅರ್ಹ ಶಿಕ್ಷಕರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಭರವಸೆ ನೀಡಿದ್ದಾರೆ. ಅವರು ನಿರುದ್ಯೋಗಿಗಳಾಗಿ ಉಳಿಯದಂತೆ ಅಥವಾ ಸೇವೆಯಲ್ಲಿ ವಿರಾಮ ಪಡೆಯದಂತೆ ತಮ್ಮ ಸರ್ಕಾರ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತದೆ. ಎಂದು ಅವರು ಹೇಳಿದ್ದಾರೆ.

ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಯೋಗ ಕಳೆದುಕೊಂಡವರ ಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ, ಬಾಧಿತ ಶಿಕ್ಷಕರು ಮತ್ತು ಸಿಬ್ಬಂದಿ ತಮ್ಮ ತಮ್ಮ ಶಾಲೆಗಳಿಗೆ ಮರಳಬೇಕು ಮತ್ತು 'ಸ್ವಯಂಪ್ರೇರಣೆಯಿಂದ' ಕರ್ತವ್ಯವನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.

ಪಶ್ಚಿಮ ಬಂಗಾಳದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿನ 25,753 ಶಿಕ್ಷಕರು ಮತ್ತು ಇತರ ಸಿಬ್ಬಂದಿ ನೇಮಕವನ್ನು ಅಸಿಂಧುಗೊಳಿಸಿ ಸುಪ್ರೀಂ ಕೋರ್ಟ್ ಗುರುವಾರ (ಏಪ್ರಿಲ್ 3) ತೀರ್ಪು ನೀಡಿತ್ತು. 'ಇಡೀ ನೇಮಕಾತಿ ಪ್ರಕ್ರಿಯೆ ದುರ್ಬಲವಾಗಿದ್ದು, ದೋಷಪೂರಿತವಾಗಿದೆ' ಎಂದು ನ್ಯಾಯಾಲಯ ತಿಳಿಸಿತ್ತು. ಪಶ್ಚಿಮ ಬಂಗಾಳ ಸಿಬ್ಬಂದಿ ನೇಮಕಾತಿ ಆಯೋಗ (SSC) 2016 ರಲ್ಲಿ 24,640 ಹುದ್ದೆಗಳಿಗಾಗಿ ನೇಮಕಾತಿ ಪರೀಕ್ಷೆ ನಡೆಸಿತ್ತು. ಪರೀಕ್ಷೆಗೆ ಹಾಜರಾಗಿದ್ದ 23 ಲಕ್ಷ ಅಭ್ಯರ್ಥಿಗಳ ಪೈಕಿ 25,753 ಮಂದಿಗೆ ನೇಮಕಾತಿ ಪತ್ರ ನೀಡಲಾಗಿತ್ತು.

'ಎರಡು ತಿಂಗಳೊಳಗೆ ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ನೀವು ನಿಮ್ಮ ಶಾಲೆಗಳಿಗೆ ಹಿಂತಿರುಗಬಹುದು ಮತ್ತು ಸ್ವಯಂಪ್ರೇರಣೆಯಿಂದ ಬೋಧನೆಯನ್ನು ಪುನರಾರಂಭಿಸಬಹುದು. ನಿಮಗೆ ಇನ್ನೂ ಯಾವುದೇ ವಜಾ ಪತ್ರವನ್ನು ನೀಡದ ಕಾರಣ ನೀವು ಇನ್ನೂ ಸೇವೆಯಲ್ಲಿದ್ದೀರಿ. ಯಾವುದೇ ಅರ್ಹ ಅಭ್ಯರ್ಥಿ ಕೆಲಸ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಕರ್ತವ್ಯ. ಅರ್ಹ ಅಭ್ಯರ್ಥಿಗಳು ಸೇವೆಯಲ್ಲಿ ಯಾವುದೇ ವಿರಾಮವನ್ನು ಎದುರಿಸದಂತೆ ನೋಡಿಕೊಳ್ಳಲು ನಾವು ಯೋಜನೆಗಳನ್ನು ಸಿದ್ಧಪಡಿಸಿದ್ದೇವೆ. ಯಾರೊಬ್ಬರೂ ನಿರುದ್ಯೋಗಿಗಳಾಗಿ ಉಳಿಯಲು ನಾವು ಬಿಡುವುದಿಲ್ಲ' ಎಂದು ಸಾವಿರಾರು ಬಾಧಿತ ಶಿಕ್ಷಕರು ಹಾಜರಿದ್ದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಹೇಳಿದರು.

ಮಮತಾ ಬ್ಯಾನರ್ಜಿ
ಬಂಗಾಳ ಸರ್ಕಾರಕ್ಕೆ Supreme Court ಶಾಕ್: 25,000 ಶಿಕ್ಷಕರ ವಜಾ; Mamata Banerjee ಸರ್ಕಾರಕ್ಕೆ ತೀವ್ರ ಮುಖಭಂಗ!

'ಅನ್ಯಾಯವಾಗಿ ಕೆಲಸ ಕಳೆದುಕೊಂಡವರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ಇತರರು ಏನು ಯೋಚಿಸುತ್ತಾರೆ ಎಂಬುದು ನನಗೆ ಮುಖ್ಯವಲ್ಲ. ನಿಮ್ಮ ಘನತೆಯನ್ನು ಪುನಃಸ್ಥಾಪಿಸಲು ನಾನು ಎಲ್ಲವನ್ನೂ ಮಾಡುತ್ತೇನೆ. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತದೆ. ಪರಿಸ್ಥಿತಿಯನ್ನು ಅತ್ಯಂತ ಕಾಳಜಿ ಮತ್ತು ನ್ಯಾಯಯುತವಾಗಿ ನಿಭಾಯಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ' ಎಂದು ಹೇಳಿದರು.

ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತಮ್ಮ ಸರ್ಕಾರವು ಪರಿಶೀಲನಾ ಅರ್ಜಿ ಸಲ್ಲಿಸಲಿದೆ ಮತ್ತು ಏಪ್ರಿಲ್ 3ರ ತೀರ್ಪಿನ ಬಗ್ಗೆ ಸಂಬಂಧಪಟ್ಟ ಪೀಠದಿಂದ 'ಸ್ಪಷ್ಟೀಕರಣ ಪಡೆಯಲಿದೆ. ಮೊದಲ ಹಂತದಲ್ಲಿ, ನಾವು ಅರ್ಹ ಅಭ್ಯರ್ಥಿಗಳ ವಿವರಗಳನ್ನು ಪರಿಶೀಲಿಸುತ್ತೇವೆ ಮತ್ತು ಅವರು ಕಳೆದುಕೊಂಡ ಉದ್ಯೋಗಗಳನ್ನು ಮರಳಿ ನೀಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.

'ಎರಡನೇ ಹಂತದಲ್ಲಿ, ಕಳಂಕಿತ ಅಭ್ಯರ್ಥಿಗಳೆಂದು ಕರೆಯಲ್ಪಡುವ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತೇವೆ. ಅವರನ್ನು 'ಅನರ್ಹರು' ಎಂದು ಏಕೆ ಬ್ರಾಂಡ್ ಮಾಡಲಾಯಿತು, ಅವರನ್ನು ಕಳಂಕಿತರು ಎನ್ನಲು ಕಾರಣಗಳು ಮತ್ತು ಅವರು ತಪ್ಪಿತಸ್ಥರೆಂದು ಹೇಳಲು ಹೇಗೆ ತನಿಖೆ ನಡೆಸಲಾಯಿತು ಎಂಬುದನ್ನು ನಾವು ಆಳವಾಗಿ ಪರಿಶೀಲಿಸುತ್ತೇವೆ. ನಾನು ಅವರೊಂದಿಗೆ ಪ್ರತ್ಯೇಕ ಸಭೆ ನಡೆಸುತ್ತೇನೆ. ಸರ್ಕಾರ ಮಾಡುವ ಕೆಲಸದ ಮೇಲೆ ನಂಬಿಕೆ ಇಡಿ. "ಅರ್ಹ" ಮತ್ತು "ಕಳಂಕಿತ" ಅಭ್ಯರ್ಥಿಗಳ ನಡುವೆ ಯಾವುದೇ ಮುಖಾಮುಖಿ ಇರಬಾರದು' ಎಂದು ಸಿಎಂ ಹೇಳಿದರು.

ಮಮತಾ ಬ್ಯಾನರ್ಜಿ
ಸುಪ್ರೀಂ ಕೋರ್ಟ್ ತೀರ್ಪು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಆದರೆ...: ಪಶ್ಚಿಮ ಬಂಗಾಳ ಸಿಎಂ ಮಮತಾ

'ನನಗೆ ಸಂಬಂಧವೇ ಇಲ್ಲದ ವಿಚಾರದಲ್ಲಿ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ಉದ್ಯೋಗ ಕಳೆದುಕೊಂಡವರ ಪರವಾಗಿ ನಿಂತಿದ್ದಕ್ಕಾಗಿ ಯಾರಾದರೂ ನನ್ನನ್ನು ದಂಡಿಸಲು ಬಯಸಿದರೆ, ನಾನು ಜೈಲಿಗೆ ಹೋಗಲು ಸಹ ಸಿದ್ಧವಾಗಿದ್ದೇನೆ' ಎಂದು ಬ್ಯಾನರ್ಜಿ ಪ್ರತಿಪಾದಿಸಿದರು.

'ಮುಖವಾಡ ತೊಟ್ಟಿರುವ ಜನರು ಈಗ ಸುಳ್ಳು ಮಾಹಿತಿಯೊಂದಿಗೆ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಮುರಿಯುವ ಪಿತೂರಿ ಮಾಡಲಾಗುತ್ತಿದೆ. ಕೆಲವು ಜನರು ಕೊಳಕು ಆಟ ಆಡುತ್ತಿದ್ದಾರೆ' ಎಂದು ಅವರು ವಿರೋಧ ಪಕ್ಷವಾದ ಬಿಜೆಪಿ ಮತ್ತು ಸಿಪಿಐ(ಎಂ) ಅನ್ನು ಉಲ್ಲೇಖಿಸುತ್ತಾ ಹೇಳಿದರು.

'ನಾನು ಯಾರಿಂದಲೂ, ಸಿಪಿಐ(ಎಂ) ನಿಂದಲೂ ಸಹ, ಉದ್ದೇಶಪೂರ್ವಕವಾಗಿ ಯಾವುದೇ ಕೆಲಸವನ್ನು ಕಸಿದುಕೊಂಡಿಲ್ಲ. ಏಕೆಂದರೆ, ಆಗ ನನ್ನ ಘೋಷಣೆ 'ಸೇಡು ಬೇಡ, ಬದಲಾವಣೆ ಮಾತ್ರ' ಎಂದಾಗಿತ್ತು. ಆದರೂ, ಬಿಕಾಶ್ ರಂಜನ್ ಭಟ್ಟಾಚಾರ್ಯರಂತಹ ಪಕ್ಷದ ವಕೀಲರು ಇಷ್ಟೊಂದು ಜನರು ಉದ್ಯೋಗ ಕಳೆದುಕೊಳ್ಳುವುದನ್ನು ನೋಡಲು ನ್ಯಾಯಾಲಯದ ಮೊರೆ ಹೋದರು. ಅವರು ಉತ್ತರಿಸಬೇಕು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com