Muslim Woman Converted to Hindu Religion, Marries Class 12 Student In UP
ಶಿವ ಮತ್ತು ಶಿವಾನಿ

12ನೇ ತರಗತಿ ವಿದ್ಯಾರ್ಥಿಯ ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರವಾದ 3 ಮಕ್ಕಳ ತಾಯಿ Shabnam!

ಶಿವಾನಿ ಎಂಬ ಮಹಿಳೆಯನ್ನು ಈ ಹಿಂದೆ ಶಬ್ನಮ್ ಎಂದು ಕರೆಯಲಾಗುತ್ತಿತ್ತು. ಆಕೆಯ ಪೋಷಕರು ಈಗ ಜೀವಂತವಾಗಿಲ್ಲ. ಆಕೆ ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದರು.
Published on

ಅಮ್ರೋಹ: ಉತ್ತರ ಪ್ರದೇಶದಲ್ಲಿ ಮತ್ತೊಂದು ಅಂತರ್ ಧರ್ಮೀಯ ವಿವಾಹವಾಗಿದ್ದು, 30 ವರ್ಷದ ಮುಸ್ಲಿಂ ಮಹಿಳೆಯೊಬ್ಬರು 12ನೇ ತರಗತಿ ವಿದ್ಯಾರ್ಥಿಯ ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ.

ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಸ್ಥಳೀಯ ದೇಗುಲದಲ್ಲಿ 2 ಮಕ್ಕಳ ತಾಯಿ ಶಬನಂ ಮತ್ತು 12ನೇ ತರಗತಿಯ ವಿದ್ಯಾರ್ಥಿ 18 ವರ್ಷದ ಯುವಕ ಶಿವ ಎಂಬಾತನನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಶಬನಂ ಪೋಷಕರು ಮತ್ತು ಗ್ರಾಮದ ಹಿರಿಯರು ಒಪ್ಪಿಗೆ ಸೂಚಿಸಿ ಮದುವೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮದುವೆಗೂ ಮುನ್ನ ಮತಾಂತರ

ಇನ್ನು ಈ ಮದುವೆಗೂ ಮುನ್ನ ಮುಸ್ಲಿಂ ಮತಕ್ಕೆ ಸೇರಿದ್ದ ಶಬನಂರನ್ನು ಸ್ಥಳೀಯ ಅರ್ಚಕರು ಹಿಂದೂ ಧರ್ಮಕ್ಕೆ ಬರ ಮಾಡಿಕೊಂಡಿದ್ದಾರೆ. ಬಳಿಕ ಆಕೆಗೆ ಶಿವಾನಿ ಎಂದು ಮರು ನಾಮಕರಣ ಮಾಡಿ ಬಳಿಕ ಮದುವೆ ಮಾಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಸನ್‌ಪುರ ವೃತ್ತ ಅಧಿಕಾರಿ ದೀಪ್ ಕುಮಾರ್ ಪಂತ್ ಅವರು, ಅವರ ಪ್ರಕಾರ, ಶಿವಾನಿ ಎಂಬ ಮಹಿಳೆಯನ್ನು ಈ ಹಿಂದೆ ಶಬ್ನಮ್ ಎಂದು ಕರೆಯಲಾಗುತ್ತಿತ್ತು. ಆಕೆಯ ಪೋಷಕರು ಈಗ ಜೀವಂತವಾಗಿಲ್ಲ. ಆಕೆ ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದರು. ಇಬ್ಬರಿಂದಲೂ ವಿಚ್ಚೇದನ ಪಡೆದಿದ್ದಾರೆ ಎಂದು ಹೇಳಿದರು.

ಅಂತೆಯೇ ಪೊಲೀಸರು ಪ್ರಸ್ತುತ ವಿವಾಹದ ಸುತ್ತಲಿನ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ, ಆದರೆ ಇಲ್ಲಿಯವರೆಗೆ ಯಾವುದೇ ಕಾನೂನು ದೂರುಗಳು ದಾಖಲಾಗಿಲ್ಲ ಎಂದು ಹೇಳಿದರು.

Muslim Woman Converted to Hindu Religion, Marries Class 12 Student In UP
Varanasi Horror: 19 ವರ್ಷದ ಯುವತಿ ಮೇಲೆ 7 ದಿನ 23 ಮಂದಿ ಸತತ ಅತ್ಯಾಚಾರ; ರಕ್ಷಣೆಗೆ ಬಂದವರು, Instagram ಸ್ನೇಹಿತರಿಂದಲೇ ಕ್ರೌರ್ಯ!

3 ಮದುವೆ-ಇಬ್ಬರು ಮಕ್ಕಳು

ಇನ್ನು ಶಿವಾನಿ (ಶಬನಂ) ಮೊದಲು ಮೀರತ್‌ನಲ್ಲಿ ಒಬ್ಬ ವ್ಯಕ್ತಿಯನ್ನು ವಿವಾಹವಾಗಿದ್ದರು. ಆದರೆ ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ನಂತರ ಅವರು 2011 ರಲ್ಲಿ ರಸ್ತೆ ಅಪಘಾತದಲ್ಲಿ ಅಂಗವಿಕಲರಾಗಿದ್ದ ಸೈದನ್ವಾಲಿ ಗ್ರಾಮದ ನಿವಾಸಿ ತೌಫಿಕ್ ಎಂಬುವವರನ್ನು ವಿವಾಹವಾಗಿದ್ದರು.

ಇತ್ತೀಚೆಗೆ, ಶಬನಂ 12 ನೇ ತರಗತಿಯಲ್ಲಿ ಓದುತ್ತಿದ್ದ ಸುಮಾರು 18 ವರ್ಷ ವಯಸ್ಸಿನ ಹುಡುಗ ಶಿವ ಎಂಬಾತನೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಬಳಿಕ ಈ ವಿಚಾರ ಎಲ್ಲರಿಗೂ ತಿಳಿಯುತ್ತಲೇ ಆಕೆ ಕಳೆದ ವಾರ ಶುಕ್ರವಾರ ತನ್ನ 2ನೇ ಗಂಡ ತೌಫಿಕ್‌ನಿಂದ ವಿಚ್ಛೇದನ ಪಡೆದರು. ಬಳಿಕ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಶಿವಾನಿ ಎಂಬ ಹೆಸರನ್ನು ಮರುನಾಮಪಕರಣ ಮಾಡಿಕೊಂಡು ಪ್ರಿಯಕರ ಶಿವನನ್ನು ಮದುವೆಯಾಗಿದ್ದಾರೆ.

'ಅವರು ಸಂತೋಷವಾಗಿದ್ದರೆ ಸಾಕು': ಶಿವನ ಪೋಷಕರು!

ಇನ್ನು ವರ ಶಿವನ ತಂದೆ, ಸೈದನ್ವಾಲಿ ನಿವಾಸಿ ದತಾರಾಮ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ತಮ್ಮ ಮಗನ ನಿರ್ಧಾರವನ್ನು ಬೆಂಬಲಿಸುವುದಾಗಿ ಮತ್ತು ದಂಪತಿಗಳು ಸಂತೋಷವಾಗಿದ್ದರೆ ಕುಟುಂಬವು ಸಂತೋಷವಾಗಿರುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಇಬ್ಬರೂ ಶಾಂತಿಯುತವಾಗಿ ಒಟ್ಟಿಗೆ ಬದುಕುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ಅವರು ಹೇಳಿದರು.

ಅಂದಹಾಗೆ ಉತ್ತರ ಪ್ರದೇಶವು ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿರುವ ರಾಜ್ಯವಾಗಿದ್ದು, ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಮತಾಂತರ ನಿಷೇಧ ಕಾಯ್ದೆ, 2021 ಬಲವಂತ, ವಂಚನೆ ಅಥವಾ ಯಾವುದೇ ಇತರ ವಂಚನೆಯ ಮೂಲಕ ಧಾರ್ಮಿಕ ಮತಾಂತರವನ್ನು ನಿಷೇಧಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com