Varanasi Horror: 19 ವರ್ಷದ ಯುವತಿ ಮೇಲೆ 7 ದಿನ 23 ಮಂದಿ ಸತತ ಅತ್ಯಾಚಾರ; ರಕ್ಷಣೆಗೆ ಬಂದವರು, Instagram ಸ್ನೇಹಿತರಿಂದಲೇ ಕ್ರೌರ್ಯ!

ಆರೋಪಿಗಳು ಆಕೆಯನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದಾರೆ. ಆಘಾತಕಾರಿ ಅಂಶವೆಂದರೆ ಆಕೆಯನ್ನು ರಕ್ಷಿಸುತ್ತೇವೆ ಎಂದು ಮುಂದೆ ಬಂದವರೇ ಪದೇ ಪದೇ ಆಕೆಯ ಮೇಲೆ ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ.
Varanasi Gang rape
ಸಾಂದರ್ಭಿಕ ಚಿತ್ರ
Updated on

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭೀಕರ ಮ್ಯಾರಥಾನ್ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, 19 ವರ್ಷದ ಯುವತಿಯನ್ನು 7 ದಿನಗಳ ಕಾಲ 23 ಮಂದಿ ನಿರಂತರ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಆಕೆಯನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದಾರೆ. ಆಘಾತಕಾರಿ ಅಂಶವೆಂದರೆ ಆಕೆಯ ರಕ್ಷಿಸುತ್ತೇವೆ ಎಂದು ಮುಂದೆ ಬಂದವರೇ ಪದೇ ಪದೇ ಆಕೆಯ ಮೇಲೆ ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ.

ಇದೀಗ ಯುವತಿಯ ದೂರಿನ ಮೇರೆಗೆ ಪೊಲೀಸರು ಈ ವರೆಗೂ 9 ಆರೋಪಿಗಳನ್ನು ಬಂಧಿಸಿದ್ದು, ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮಾರ್ಚ್‌ 29ರಂದು ಮನೆಯಿಂದ ಕಾಣೆಯಾದ 19 ವರ್ಷದ ಯುವತಿಯ ಮೇಲೆ 7 ದಿನಗಳ ಕಾಲ 23 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈ ಕೃತ್ಯ ನಡೆದಿದ್ದು, 19 ವರ್ಷದ ಯುವತಿಗೆ ಡ್ರಗ್ಸ್‌ ನೀಡಿ ಒಂದು ವಾರ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ವಾರಣಾಸಿ ಮೂಲದ 19 ವರ್ಷದ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈತನಕ 9 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Varanasi Gang rape
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಕೇರಳದ ಮದರಸಾ ಶಿಕ್ಷಕನಿಗೆ 187 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!

ಏನಿದು ಘಟನೆ?

ಪಾಂಡೇಪುರ ಲಾಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿರುವ ಸಂತ್ರಸ್ತೆ ಮಾರ್ಚ್ 29 ರಂದು ನಾಪತ್ತೆಯಾಗಿದ್ದರು. ನಂತರ ಏಪ್ರಿಲ್ 4 ರಂದು ಆಕೆ ಮನೆಗೆ ಮರಳಿದ್ದು, ಈ ವೇಳೆ ಆಕೆ ತನ್ನ ಮೇಲೆ 7 ದಿನಗಳ ಕಾಲ 23 ಮಂದಿ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

ತಾನು ಮನೆಯಿಂದ ಕಾಣೆಯಾದ ವಾರದಲ್ಲಿ 23 ಪುರುಷರು ತನ್ನನ್ನು ಬಂಧಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ಪೋಷಕರಿಗೆ ಹೇಳಿದ್ದಾಳೆ. ಈ ವೇಳೆ ಪೋಷಕರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನೀಡಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ಆಘಾತಕಾರಿ ಸಂಗತಿಯೆಂದರೆ, ಹಲವಾರು ಆರೋಪಿಗಳು ಸಂತ್ರಸ್ಥೆಗೆ ಅಪರಿಚಿತರೇ ಆಗಿದ್ದರು. ಆಕೆಯ ಹಳೆಯ ಸಹಪಾಠಿಗಳು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಂವಹನ ನಡೆಸಿದ್ದ ವ್ಯಕ್ತಿಗಳಾಗಿದ್ದರು ಎನ್ನಲಾಗಿದೆ.

ಪೊಲೀಸ್ ತನಿಖೆ, 9 ಮಂದಿ ಬಂಧನ

ಸಂತ್ರಸ್ತ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲಾ ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 70(1) (ಸಾಮೂಹಿಕ ಅತ್ಯಾಚಾರ), 74 (ಮಾನಸಿಕ ದೌರ್ಜನ್ಯ), 123 (ವಿಷ ಅಥವಾ ಹಾನಿಕಾರಕ ವಸ್ತು ನೀಡುವುದು), 126(2) (ಚಲನೆಗೆ ಅಡ್ಡಿಪಡಿಸುವುದು), 127(2) (ಅಕ್ರಮ ಬಂಧನ), ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ವರುಣಾ ವಲಯದ ಡಿಸಿಪಿ ಚಂದ್ರಕಾಂತ್ ಮಿನಾ ಅವರು, ಸಂತ್ರಸ್ತೆಯ ತಾಯಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆರಂಭಿಕ ತನಿಖೆಯ ನಂತರ ಮಾಹಿತಿ ನೀಡಿದ ಎಸಿಪಿ ಕ್ಯಾಂಟ್ ವಿದುಷ್ ಸಕ್ಸೇನಾ ಅವರು, ‘ಈವರೆಗೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ಕಾನೂನು ಸಂಬಂಧಿತ ಮಾತುಕತೆಗಳು ನಡೆಯುತ್ತಿವೆ. ಇತರ ಆರೋಪಿಗಳನ್ನು ಬಂಧಿಸುವಲ್ಲಿ ಅನೇಕ ತಂಡಗಳನ್ನು ರಚಿಸಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮಾರ್ಚ್ 29 ರಂದು ಕೆಫೆಯಲ್ಲಿ ಸ್ನೇಹಿತನಿಂದಲೇ ಅತ್ಯಾಚಾರ

ಯುವತಿ ಪೋಷಕರು ನೀಡಿರುವ ದೂರಿನ ಅನ್ವಯ ಮಾರ್ಚ್ 29 ರಂದು ಕೆಫೆಯೊಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು ಎನ್ನಲಾಗಿದೆ. ಲಾಲ್‌ಪುರ-ಪಾಂಡೆಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಸಂತ್ರಸ್ತೆಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ತನ್ನ ಮಗಳು ಮಾರ್ಚ್ 29 ರಂದು ತನ್ನ ಸ್ನೇಹಿತನ ಮನೆಗೆ ಹೋಗಿದ್ದಳು. ಅಲ್ಲಿಂದ ಹಿಂತಿರುಗುವಾಗ, ದಾರಿಯಲ್ಲಿ ಅವಳು ತನ್ನ ಪರಿಚಯಸ್ಥ ಸ್ನೇಹಿತ ರಾಜ್ ವಿಶ್ವಕರ್ಮನನ್ನು ಭೇಟಿಯಾದಳು, ಅವನು ಆಕೆಯನ್ನು ಲಂಕಾದಲ್ಲಿರುವ ತನ್ನ ಕೆಫೆಗೆ ಕರೆದೊಯ್ದನು. ಅಲ್ಲಿ ಅವನು ಇಡೀ ರಾತ್ರಿ ಆಕೆಯ ಮೇಲೆ ಅತ್ಯಾಚಾರ ಮಾಡಿದನು. ಮರುದಿನ, ಸಂತ್ರಸ್ಥ ಯುವತಿ ಹೇಗೋ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು.

ನೆರವು ನೀಡುತ್ತೇನೆ ಎಂದವರಿಂದಲೇ ಅತ್ಯಾಚಾರ

ಬಳಿಕ ಆಕೆ ಸಮೀರ್‌ ಎಂಬಾತನನ್ನು ಭೇಟಿಯಾಗಿದ್ದಾಳೆ. ಆತ ಆಕೆಯನ್ನು ಮನೆಗೆ ಬಿಡುವುದಾಗಿ ಹೇಳಿ ಬೈಕ್ ನಲ್ಲಿ ಕೂರಿಸಿಕೊಂಡು ಹೆದ್ದಾರಿಗೆ ಕರೆದೊಯ್ದನು. ಆತ ಕೂಡ ಹೆದ್ದಾರಿಯ ನಿರ್ಜನಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ವೆಸಗಿ ನಾಡೇಸರ್ ಬಳಿ ಬಿಟ್ಟು ಹೋಗಿದ್ದಾನೆ. ಮಾರ್ಚ್ 31 ರಂದು ಆಯುಷ್ ಎಂಬಾತ ತನ್ನ ಸ್ನೇಹಿತರಾದ ಸೊಹೈಲ್, ಡ್ಯಾನಿಶ್, ಅನ್ಮೋಲ್, ಸಾಜಿದ್ ಮತ್ತು ಜಾಹಿದ್ ಅವರೊಂದಿಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಸಂತ್ರಸ್ಥೆ ಕಾಣಿಸಿದ್ದಾಳೆ. ಈ ವೇಳೆ ಆತ ಆಕೆಯನ್ನು ಮಾತನಾಡಿಸಿದಾಗ ಆಕೆ ನಡೆದ ವಿಚಾರ ಹೇಳಿಕೊಂಡಿದ್ದಾಳೆ. ಆತ ಕೂಡ ಆಕೆಗೆ ಸಹಾಯ ಮಾಡುವುದಾಗಿ ಹೇಳಿ ಮಾಲ್ದಹಿಯಾದ ಅನ್ಮೋಲ್ಸ್ ಕಾಂಟಿನೆಂಟಲ್ ಕೆಫೆಗೆ ಕರೆದೊಯ್ದು ಆಕೆ ಕುಡಿಯಲು ಮಾದಕ ವಸ್ತು ಮಿಕ್ಸ್ ಮಾಡಿದ ಪಾನೀಯ ನೀಡಿದ್ದಾನೆ.

ಅದನ್ನು ಕುಡಿದ ಸಂತ್ರಸ್ಥೆ ಪ್ರಜ್ಞಾಹೀನಳಾದ ಬಳಿಕ ಎಲ್ಲರೂ ಆಕೆಯನ್ನು ಕೆಫೆಯಲ್ಲಿರುವ ಕೋಣೆಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ. ಈವೇಳೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿ ಬೇಡಿಕೊಂಡರೂ ಕೇಳದ ಕಾಮಪಿಪಾಸುಗಳು ಆಕೆಯನ್ನು ಹುರಿದು ಮುಕ್ಕಿದ್ದಾರೆ. ಮಾರನೆಯ ದಿನ ಅಂದರೆ ಏಪ್ರಿಲ್ 1ರಂದು ಸಂತ್ರಸ್ಥೆ ಕೆಫೆಯಿಂದಲೂ ತಪ್ಪಿಸಿಕೊಂಡಿದ್ದು, ಈ ವೇಳೆ ಅಲ್ಲಿದ್ದ ಸಾಜಿದ್ ಎಂಬಾತ ನೆರವು ನೀಡುವ ನೆಪಲ್ಲಿ ಹುಡುಗಿಯರ ಹಾಸ್ಟೆಲ್ ಗೆ ಕರೆದೊಯ್ಯುತ್ತೇನೆ ಎಂದು ಹೇಳಿ ಹೊಟೆಲ್ ಗೆ ಕರೆದೊಯ್ದಿದ್ದಾನೆ. ಅಲ್ಲಿ ಅದಾಗಲೇ ಆತನ ಮೂವರು ಸ್ನೇಹಿತರು ಇದ್ದ ರೂಮಿಗೆ ಕರೆದೊಯ್ದು ಅಲ್ಲಿ ಬಾಡಿ ಮಸಾಜ್ ಮಾಡುವಂತೆ ಒತ್ತಾಯಿಸಿದ್ದಾನೆ.

ಈ ವೇಳೆ ಮೂರು ಮಂದಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದು, ಈ ವೇಳೆ ಸಂತ್ರಸ್ಥೆ ಕೂಗಿ ಕೊಂಡಾಗ ಆಕೆಯನ್ನು ರೂಮಿನಿಂದ ಹಲ್ಲೆ ಮಾಡಿ ಹೊರಗೆ ಹಾಕಿದ್ದಾರೆ. ಅಲ್ಲಿಂದ ಹೊರಟ ನಂತರ, ಹುಡುಗಿ ದಾರಿಯಲ್ಲಿ ಇಮ್ರಾನ್ ಎಂಬ ಯುವಕನನ್ನು ಭೇಟಿಯಾಗಿದ್ದು, ಆತ ಕೂಡ ಬೈಕ್ ನಲ್ಲಿ ಬಿಡುವುದಾಗಿ ಹೇಳಿದ್ದಾನೆ. ಆದರೆ ಆತನ ಮಾತು ನಂಬದ ಸಂತ್ರಸ್ಥೆ ಬೈಕ್ ಏರಲು ನಿರಾಕರಿಸಿದಾಗ ಆತ ಬಲವಂತವಾಗಿ ಬೈಕ್ ನಲ್ಲಿ ಕೂರಿಸಿಕೊಂಡು ಮಾರ್ಗ ಮಧ್ಯೆ ಆಕೆಗೆ ಮಾದಕ ವಸ್ತು ನೀಡಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಆತನಿಂದಲೂ ತಪ್ಪಿಸಿಕೊಂಡು ಬಂದ ನನಗೆ ಸಾಜಿದ್ ಜೈಬ್ ಎಂಬಾತ ಸಿಕ್ಕ. ಆತ ಸಹಾಯ ಮಾಡುತ್ತೇನೆ ಎಂದು ಹೇಳಿ ತನ್ನ ಇಬ್ಬರು ಸ್ನೇಹಿತರನ್ನು ಕರೆಸಿಕೊಂಡು ನನ್ನನು ಔರಂಗಾಬಾದ್‌ನ ಗೋದಾಮಿಗೆ ಕರೆದೊಯ್ದ ಅಲ್ಲಿ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರವೆಸಗಿದ ಎಂದು ಸಂತ್ರಸ್ಥೆ ದೂರಿನಲ್ಲಿ ತಿಳಿಸಿದ್ದಾರೆ.

Varanasi Gang rape
ಮದುವೆಗೆ 9 ದಿನ ಬಾಕಿ ಇರುವಾಗಲೇ ಭಾವಿ ಅಳಿಯನ ಜೊತೆ ವಧುವಿನ ತಾಯಿ ಪರಾರಿ!

ಸಾಜಿದ್ ತನ್ನ ಸ್ನೇಹಿತ ಅಮನ್ ಮತ್ತು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂತ್ರಸ್ಛೆಯನ್ನು ಒಂದು ಕೋಣೆಗೆ ಕರೆದೊಯ್ದನು. ಅಲ್ಲಿ ಸಾಜಿದ್‌ನ ಇಬ್ಬರೂ ಸ್ನೇಹಿತರು ಸೇರಿ ಆ ಸಂತ್ರಸ್ಥೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅತ್ಯಾಚಾರ ವೆಸಗಿದರು. ಬಳಿಕ ಅವರು ಆಕೆಯನ್ನು ಅಜ್ಞಾತ ಸ್ಥಳದಲ್ಲಿ ಬಿಟ್ಟು ಹೋದರು. ಹೇಗೋ ಅವರ ಹಿಡಿತದಿಂದ ತಪ್ಪಿಸಿಕೊಂಡ ಸಂತ್ರಸ್ಥೆ ಸಿಗ್ರಾ ಐಪಿ ಮಾಲ್ ತಲುಪಿದಳು, ಅಲ್ಲಿ ಅವಳು ಹೇಗೋ ರಾತ್ರಿ ಕಳೆದಳು. ಮಾರ್ಚ್ 2 ರಂದು, ರಾಜ್ ಖಾನ್ ಎಂಬ ಹುಡುಗ ತನ್ನ ಸ್ನೇಹಿತನೊಂದಿಗೆ ಮಾಲ್ ಬಳಿ ಬಂದಿದ್ದ.

ಆತ ಕೂಡ ಸಂತ್ರಸ್ಥೆಯನ್ನು ಹುಕುಲ್‌ಗಂಜ್ ಬಾಗವಾನಾಲಾದಲ್ಲಿರುವ ಮನೆಯ ಟೆರೆಸ್ ಮೇಲೆ ಕರೆದೊಯ್ದನು. ರಾಜ್ ಖಾನ್ ಮಾದಕ ದ್ರವ್ಯಗಳನ್ನು ಬೆರೆಸಿ ತಿನ್ನಿಸಿದ ನಂತರ ಆಕೆಗೆ ಮದ್ಯಕುಡಿಸಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಅಸ್ಸಿ ಘಾಟ್‌ನಲ್ಲಿ ಬಿಡಲಾಯಿತು. ಮರುದಿನ ಹುಡುಗಿ ತನ್ನ ಸ್ನೇಹಿತನ ಮನೆಗೆ ಹೋಗಿ ಕುಡಿದ ಮತ್ತಿನಲ್ಲಿ ಅಲ್ಲೇ ಮಲಗಿದ್ದಳು. ಸಂಜೆ, ಅವಳು ತನ್ನ ಸ್ನೇಹಿತನ ಮನೆಯಿಂದ ಹೊರಬಂದಾಗ, ಡ್ಯಾನಿಶ್‌ನನ್ನು ಭೇಟಿಯಾದಳು, ಆತ ಕೂಡ ತನ್ನ ಸ್ನೇಹಿತನೊಂದಿಗೆ ಸೇರಿ ಸಂತ್ರಸ್ಛೆಯನ್ನು ಒಂದು ಕೋಣೆಗೆ ಕರೆದೊಯ್ದು.

ಅಲ್ಲಿ ಅದಾಗಲೇ ಸೊಹೈಲ್, ಶೋಯೆಬ್ ಮತ್ತು ಇನ್ನೊಬ್ಬ ವ್ಯಕ್ತಿ ಇದ್ದರು. ಎಲ್ಲರೂ ಸೇರೆ ಮತ್ತೆ ಸಂತ್ರಸ್ಥೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಬಳಿಕ ಆಕೆಯನ್ನು ಚೌಕಾಘಾಟ್ ಬಳಿ ಬಿಡಲಾಗಿತ್ತು. ಅಲ್ಲಿಂದ ಹೇಗೋ ಏಪ್ರಿಲ್ 4 ರಂದು ಮನೆಗೆ ತಲುಪಿದ ಸಂತ್ರಸ್ಥೆ ತನ್ನ ಕುಟುಂಬ ಸದಸ್ಯರಿಗೆ ತನಗಾದ ಅವಸ್ಥೆಯನ್ನು ವಿವರಿಸಿದ್ದಾಳೆ. ಮಾರನೆಯ ದಿನ ಪೋಷಕರು ದೂರು ನೀಡಿದ್ದಾರೆ.

ಒಟ್ಟಾರೆ ಇದೀಗ ಸಂತ್ರಸ್ಥೆ ಒಟ್ಟು 23 ಮಂದಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿದ್ದು, ಈ ಪೈಕಿ 12 ಮಂದಿಯ ಹೆಸರನ್ನು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದು 11 ಮಂದಿ ಅನಾಮಿಕರ ವಿರುದ್ಧವೂ ದೂರು ನೀಡಿದ್ದಾಳೆ. ಸಂತ್ರಸ್ಥೆ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಹಲವಾರು ಹೋಟೆಲ್‌ಗಳು ಮತ್ತು ಹುಕ್ಕಾ ಬಾರ್‌ಗಳ ಮೇಲೆ ದಾಳಿ ನಡೆಸಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com