ಸುಂಕ ಸಮರ: ಬಯಸದೇ ಬಂದ ಭಾಗ್ಯ; ಆಟಿಕೆಗಳ ರಫ್ತು ಕೇಂದ್ರವಾಗಲು ಭಾರತಕ್ಕೆ ಒಳ್ಳೆಯ ಅವಕಾಶ!

ಅಮೆರಿಕ ಇತ್ತೀಚೆಗೆ ಚೀನಾದಿಂದ ಆಟಿಕೆ ಆಮದಿನ ಮೇಲೆ ಶೇ. 145 ರಷ್ಟು ಕಡಿದಾದ ಸುಂಕವನ್ನು ವಿಧಿಸಿದ್ದು, ಇದು ಜಾಗತಿಕ ಆಟಿಕೆ ವ್ಯಾಪಾರದಲ್ಲಿ ಬಹಳಹ್ಟು ಬದಲಾವಣೆ ಉಂಟು ಮಾಡಲಿದೆ.
ಸುಂಕ ಸಮರ: ಬಯಸದೇ ಬಂದ ಭಾಗ್ಯ; ಆಟಿಕೆಗಳ ರಫ್ತು ಕೇಂದ್ರವಾಗಲು ಭಾರತಕ್ಕೆ ಒಳ್ಳೆಯ ಅವಕಾಶ!
Updated on

ನವದೆಹಲಿ: ಅಮೆರಿಕ-ಚೀನಾ ಸುಂಕ ಸಮರ ತೀವ್ರಗೊಳ್ಳುತ್ತಿದ್ದಂತೆ, ಭಾರತ ಆಟಿಕೆಗಳ ಪ್ರಮುಖ ರಫ್ತು ಕೇಂದ್ರವಾಗಲು "ಸುವರ್ಣ ಅವಕಾಶ" ಎಂದು ಉದ್ಯಮದ ತಜ್ಞರು ಹೇಳಿದ್ದಾರೆ.

ಅಮೆರಿಕ ಇತ್ತೀಚೆಗೆ ಚೀನಾದಿಂದ ಆಟಿಕೆ ಆಮದಿನ ಮೇಲೆ ಶೇ. 145 ರಷ್ಟು ಕಡಿದಾದ ಸುಂಕವನ್ನು ವಿಧಿಸಿದ್ದು, ಇದು ಜಾಗತಿಕ ಆಟಿಕೆ ವ್ಯಾಪಾರದಲ್ಲಿ ಬಹಳಹ್ಟು ಬದಲಾವಣೆ ಉಂಟು ಮಾಡಲಿದೆ.

ಈ ಹಿಂದೆ ಅಮೆರಿಕದ ಆಟಿಕೆ ಆಮದಿನ ಸುಮಾರು ಶೇ.77 ರಷ್ಟನ್ನು ಹೊಂದಿದ್ದ ಚೀನಾ, ಹೆಚ್ಚಿನ ಸುಂಕದಿಂದಾಗಿ ರಫ್ತಿನಲ್ಲಿ ಗಮನಾರ್ಹ ಕುಸಿತವನ್ನು ಕಾಣುವ ನಿರೀಕ್ಷೆಯಿದೆ, ಇದು ಪರ್ಯಾಯ ಪೂರೈಕೆದಾರರಿಗೆ ಅವಕಾಶವನ್ನು ತೆರೆಯುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತದ ಆಟಿಕೆ ಸಂಘದ ಅಧ್ಯಕ್ಷ ಅಕ್ಷಯ್ ಬಿಂಜ್ರಾಜ್ಕಾ, ಈ ನಿರ್ವಾತವನ್ನು ತುಂಬಲು ಭಾರತ ಉತ್ತಮ ಸ್ಥಾನದಲ್ಲಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.

"ಸುಮಾರು USD 41.7 ಶತಕೋಟಿ ಮೌಲ್ಯದ ಯುಎಸ್ ಆಟಿಕೆ ಮಾರುಕಟ್ಟೆಯು ಭಾರತೀಯ ತಯಾರಕರಿಗೆ ಬೃಹತ್ ಅವಕಾಶವನ್ನು ನೀಡುತ್ತದೆ" ಎಂದು ಅಕ್ಷಯ್ ಬಿಂಜ್ರಾಜ್ಕಾ ಹೇಳಿದ್ದಾರೆ. ಭಾರತೀಯ ಉತ್ಪನ್ನಗಳು ಈಗ ಗುಣಮಟ್ಟ ಮತ್ತು ಬೆಲೆ ಎರಡರಲ್ಲೂ ಚೀನಾದ ಕೊಡುಗೆಗಳೊಂದಿಗೆ ಸ್ಪರ್ಧಿಸಬಹುದು ಎಂದು ಅವರು ಹೇಳಿದ್ದಾರೆ.

ಭಾರತದ ಆಟಿಕೆ ರಫ್ತು 2014-15ರಲ್ಲಿ 40 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಂದ 2023-24ರಲ್ಲಿ ಅಂದಾಜು 152 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಸ್ಥಿರವಾದ ಏರಿಕೆಯನ್ನು ಕಂಡಿದೆ.

ಸುಂಕ ಸಮರ: ಬಯಸದೇ ಬಂದ ಭಾಗ್ಯ; ಆಟಿಕೆಗಳ ರಫ್ತು ಕೇಂದ್ರವಾಗಲು ಭಾರತಕ್ಕೆ ಒಳ್ಳೆಯ ಅವಕಾಶ!
Tariff War: ಅಮೆರಿಕಕ್ಕೂ ನಷ್ಟ ಗ್ಯಾರಂಟಿ! ಹೀಗಿದ್ದೂ ಅವರೇಕೆ ಈ ಯುದ್ಧ ಮಾಡುತ್ತಿದ್ದಾರೆ? (ಹಣಕ್ಲಾಸು)

ಗಮನಾರ್ಹವಾಗಿ, ಭಾರತ ಆಮದುಗಳ ಮೇಲೆ ಕಟ್ಟುನಿಟ್ಟಾದ ನಿಯಂತ್ರಣ ನಿಯಮಗಳನ್ನು ವಿಧಿಸಿದ ನಂತರ ಚೀನಾದಿಂದ ಭಾರತಕ್ಕೆ ಆಟಿಕೆ ಆಮದುಗಳು ಆರ್ಥಿಕ ವರ್ಷ 2020 ರಲ್ಲಿ 235 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಂದ ಆರ್ಥಿಕ ವರ್ಷ 2024 ರಲ್ಲಿ ಕೇವಲ 41 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಇಳಿದಿವೆ.

"ಒಂದು ಕಾಲದಲ್ಲಿ ಆಮದು-ಅವಲಂಬಿತವಾಗಿದ್ದ ಭಾರತೀಯ ಆಟಿಕೆ ವಲಯ ಈಗ ಸ್ಥಳೀಯ ತಯಾರಕರು ದೇಶೀಯ ಬೇಡಿಕೆಯನ್ನು ಪೂರೈಸಲು ಮತ್ತು ಜಾಗತಿಕ ಮಾರುಕಟ್ಟೆಗಳನ್ನು ಗುರಿಯಾಗಿಟ್ಟುಕೊಂಡು ರೂಪಾಂತರಗೊಳ್ಳುತ್ತಿದೆ" ಎಂದು ಭಾರತ್ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಟಾಯ್ ಉಪಸಮಿತಿಯ ಅಧ್ಯಕ್ಷರೂ ಆಗಿರುವ ಬಿಂಜ್ರಾಜ್ಕಾ ಹೇಳಿದರು.

ನೀತಿ ಬಿಗಿಗೊಳಿಸುವಿಕೆಯ ಹೊರತಾಗಿಯೂ, "ಅಗ್ಗದ, ಅನಿಯಂತ್ರಿತ ಚೀನೀ ಆಟಿಕೆಗಳು ಭಾರತೀಯ ಮಾರುಕಟ್ಟೆಯನ್ನು ತುಂಬುತ್ತಲೇ ಇರುತ್ತವೆ ಮತ್ತು US ಸುಂಕಗಳ ನಂತರ ತೀವ್ರಗೊಳ್ಳಬಹುದು" ಎಂದು ಅವರು ಎಚ್ಚರಿಸಿದರು, ಇದು ದೇಶೀಯ ಸಾಮರ್ಥ್ಯ ಮತ್ತು ಲಾಭದಾಯಕತೆಗೆ ಹಾನಿ ಮಾಡುತ್ತದೆ.

ಬಂದರುಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗಳನ್ನು ಜಾರಿಗೊಳಿಸಲು ಅವರು ಕೇಂದ್ರವನ್ನು ಒತ್ತಾಯಿಸಿದರು ಮತ್ತು ಕಳಪೆ ಗುಣಮಟ್ಟದ ಆಟಿಕೆಗಳ ಪ್ರವೇಶವನ್ನು ತಡೆಯಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಗೆ ಕರೆ ನೀಡಿದರು.

ಸುಂಕ ಸಮರ: ಬಯಸದೇ ಬಂದ ಭಾಗ್ಯ; ಆಟಿಕೆಗಳ ರಫ್ತು ಕೇಂದ್ರವಾಗಲು ಭಾರತಕ್ಕೆ ಒಳ್ಳೆಯ ಅವಕಾಶ!
ಚೀನಾದ ಎಲೆಕ್ಟ್ರಾನಿಕ್ ಡಿವೈಸ್ ಸೇರಿದಂತೆ ಸ್ಮಾರ್ಟ್ ಫೋನ್, ಕಂಪ್ಯೂಟರ್ ಗಳಿಗೆ ಸುಂಕ ವಿನಾಯಿತಿ: ಟ್ರಂಪ್ ಆಡಳಿತ ಘೋಷಣೆ!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಬಿಂಜ್ರಾಜ್ಕಾ ಮನವಿ ಮಾಡಿದ್ದಾರೆ. ಅವರ ಪ್ರಕಾರ, ರಾಜ್ಯದ ಆಟಿಕೆ ಉದ್ಯಮಕ್ಕೆ ಬೆಂಬಲ ನೀಡುವಂತೆ ಅವರು ಮನವಿ ಮಾಡಿದರು. ಈ ನಿಟ್ಟಿನಲ್ಲಿ, ಬಹುಕಾಲದ ಬೇಡಿಕೆಯಂತೆ, ಒಂದು ಸಮರ್ಪಿತ ಕ್ಲಸ್ಟರ್ ನ್ನು ಅಭಿವೃದ್ಧಿಪಡಿಸುವ ಮೂಲಕ ರಾಜ್ಯದ ಆಟಿಕೆ ಉತ್ಪಾದನಾ ಕೇಂದ್ರವಾಗಲು ಪಶ್ಚಿಮ ಬಂಗಾಳ ಎಲ್ಲಾ ಅಂಶಗಳನ್ನು ಹೊಂದಿದೆ. ಕಾರ್ಯತಂತ್ರದ ಸ್ಥಳ, ಬಂದರು ಪ್ರವೇಶ, ಉತ್ತಮ ಲಾಜಿಸ್ಟಿಕ್ಸ್, ಕಚ್ಚಾ ವಸ್ತುಗಳು ಮತ್ತು ಕಾರ್ಮಿಕ ಶಕ್ತಿ. ಆದರೆ ರಾಜ್ಯದಿಂದ ಅಂತಿಮ ಪ್ರೋತ್ಸಾಹ ಇನ್ನೂ ಸಿಕ್ಕಿಲ್ಲ.

ಪ್ರಮುಖ MSME ಉದ್ಯೋಗದಾತ ಆಟಿಕೆ ವಲಯ ಪಶ್ಚಿಮ ಬಂಗಾಳದಲ್ಲಿ ಹೂಡಿಕೆ ಮತ್ತು ಉದ್ಯೋಗಗಳನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಎಂದು ಅವರು ಒತ್ತಿ ಹೇಳಿದರು. "ಭಾರತ ಜಾಗತಿಕ ಆಟಿಕೆ ಪೂರೈಕೆದಾರರಾದರೆ, ಬಂಗಾಳವು ಆ ಆಂದೋಲನವನ್ನು ಮುನ್ನಡೆಸಬೇಕು" ಎಂದು ಬಿಂಜ್ರಾಜ್ಕಾ ಪ್ರತಿಪಾದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com