'ಸರ್ವಾಧಿಕಾರ ಮತ್ತು ಸನಾತನದ ಸರಪಳಿ ಮುರಿಯುವ ಏಕೈಕ ಆಯುಧ ಶಿಕ್ಷಣ': ಕಮಲ್ ಹಾಸನ್; Video

ಚೆನ್ನೈನಲ್ಲಿ ನಡೆದ ಅಗರಂ ಫೌಂಡೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದ ಅಗತ್ಯತೆಯ ಬಗ್ಗೆ ಬಲವಾದ ಹೇಳಿಕೆಗಳನ್ನು ನೀಡಿದರು.
"Education only weapon that can break chains of dictatorship and Sanatan," says Rajya Sabha MP Kamal Haasan
ರಾಜ್ಯಸಭಾ ಸದಸ್ಯ ಕಮಲ್ ಹಾಸನ್
Updated on

ಚೆನ್ನೈ: ಸರ್ವಾಧಿಕಾರ ಮತ್ತು ಸನಾತನದ ಸರಪಳಿಗಳನ್ನು ಮುರಿಯುವ ಏಕೈಕ ಅಸ್ತ್ರ ಶಿಕ್ಷಣ ಎಂದು ನಟ ಮತ್ತು ಮಕ್ಕಳ್ ನೀಧಿ ಮೈಯ್ಯಂ (ಎಂಎನ್ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಭಾನುವಾರ ಹೇಳಿದರು.

ಚೆನ್ನೈನಲ್ಲಿ ನಡೆದ ಅಗರಂ ಫೌಂಡೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದ ಅಗತ್ಯತೆಯ ಬಗ್ಗೆ ಬಲವಾದ ಹೇಳಿಕೆಗಳನ್ನು ನೀಡಿದರು.

'ಬೇರೆ ಯಾವುದನ್ನೂ ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ಬದಲಿಗೆ ಶಿಕ್ಷಣವನ್ನು ಮಾತ್ರ ತೆಗೆದುಕೊಳ್ಳಿ. ಶಿಕ್ಷಣ ಇಲ್ಲದೆ ನಾವು ಗೆಲ್ಲಲು ಸಾಧ್ಯವಿಲ್ಲ. ಏಕೆಂದರೆ, ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಾದ ತಿಳುವಳಿಕೆಯನ್ನು ಹೊಂದಿರುವುದಿಲ್ಲ. ನೀವು ಜ್ಞಾನವನ್ನು ಹೊಂದಿದ್ದರೂ ಸಹ, ಬಹುಮತ ಹೊಂದಿರುವ ಮೂರ್ಖರು ನಿಮ್ಮನ್ನು ಸೋಲಿಸಬಹುದು. ಆಗ ಜ್ಞಾನವು ಸೋತಂತೆ ಕಾಣುತ್ತದೆ ಮಾತ್ರ ಆದರೆ ಸೋಲುವುದಿಲ್ಲ. ಅದಕ್ಕಾಗಿಯೇ ನಾವು ಶಿಕ್ಷಣವನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಬೇಕು. ಏಕೆಂದರೆ, ಅದು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಗೆಲುವು ಮತ್ತು ಪ್ರಗತಿ ಸಾಧಿಸಲು ಇರುವ ಏಕೈಕ ಮಾರ್ಗವಾಗಿದೆ' ಎಂದು ಕಮಲ್ ಹಾಸನ್ ಹೇಳಿದರು.

ಅಗರಂ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದ ರಾಜ್ಯಸಭಾ ಸದಸ್ಯರು, 'ನಿಜವಾದ ಶಿಕ್ಷಣ ಮತ್ತು ಬೇಷರತ್ತಾದ ಪ್ರೀತಿ ಸಿಗುವುದು ಕಷ್ಟ. ನಮ್ಮ ತಾಯಂದಿರನ್ನು ಹೊರತುಪಡಿಸಿ, ಅಗರಂ ಪ್ರತಿಷ್ಠಾನದಂತಹ ಸಂಸ್ಥೆಗಳು ಮಾತ್ರ ಈ ಕಾಯಕದಲ್ಲಿ ತೊಡಗಿವೆ' ಎಂದು ಹೇಳಿದರು.

'ಸಿನಿಮಾದಲ್ಲಿ, ನಮ್ಮ ಪ್ರದರ್ಶನಗಳಿಗಾಗಿ ನಾವು ಮನ್ನಣೆಯನ್ನು ಪಡೆಯುತ್ತೇವೆ. ಆದರೆ ಸಾಮಾಜಿಕ ಕಾರ್ಯದಲ್ಲಿ, ನಮಗೆ ಮುಳ್ಳಿನ ಕಿರೀಟವನ್ನು ನೀಡಲಾಗುತ್ತದೆ. ಆ ಕಿರೀಟವನ್ನು ಸ್ವೀಕರಿಸಲು ಬಲವಾದ ಹೃದಯ ಬೇಕು. ಬೇರೆ ಯಾರೂ ನಮಗಾಗಿ ಇದನ್ನು ಮಾಡುವುದಿಲ್ಲ, ನಾವೇ ಅದನ್ನು ಮಾಡಬೇಕು' ಎಂದು ಅವರು ಹೇಳಿದರು.

2017 ರಿಂದ ನೀಟ್ ಅನುಷ್ಠಾನವು ಅನೇಕ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ ಹೇಗೆ ಸೀಮಿತ ಅವಕಾಶಗಳನ್ನು ನೀಡಿದೆ ಎಂಬುದನ್ನು ಗಮನಸೆಳೆದರು. 'ಅಗರಂ ಫೌಂಡೇಶನ್ ಕೂಡ ತನ್ನ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಕಾನೂನು ಅನುಮತಿಸದ ಕಾರಣ ವಿದ್ಯಾರ್ಥಿಗಳಿಗೆ ಒಂದು ಹಂತಕ್ಕಿಂತ ಹೆಚ್ಚು ಸಹಾಯ ಮಾಡಲು ಸಾಧ್ಯವಿಲ್ಲ. ಕಾನೂನನ್ನು ಬದಲಾಯಿಸಲು, ನಮಗೆ ಶಕ್ತಿ ಬೇಕು ಮತ್ತು ಆ ಶಕ್ತಿ ಶಿಕ್ಷಣದಿಂದ ಮಾತ್ರ ಬರಬಹುದು' ಎಂದು ಅವರು ಹೇಳಿದರು.

"Education only weapon that can break chains of dictatorship and Sanatan," says Rajya Sabha MP Kamal Haasan
ರಾಜ್ಯಸಭಾ ಸದಸ್ಯರಾಗಿ ತಮಿಳಿನಲ್ಲೇ ಪ್ರಮಾಣವಚನ ಸ್ವೀಕರಿಸಿದ ನಟ ಕಮಲ್ ಹಾಸನ್!

'ನಿನ್ನೆ, ನಾನು ಮುಖ್ಯಮಂತ್ರಿಗಳಿಗೆ (ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್) ಎನ್‌ಜಿಒಗಳು ಹಣವನ್ನು ಕೇಳುತ್ತಿಲ್ಲ- ಅವರು ಕೆಲಸ ಮಾಡಲು ಅನುಮತಿ ಮಾತ್ರ ಕೇಳುತ್ತಿದ್ದಾರೆ ಎಂದು ಹೇಳಿದೆ. ಆ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ನನಗೆ ಭರವಸೆ ನೀಡಿದರು. ಈ ಉದ್ದೇಶದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ' ಎಂದು ಅವರು ಹೇಳಿದರು.

'ನಾಯಕತ್ವ ಎಂದರೆ ಅಧಿಕಾರದಲ್ಲಿ ಉಳಿಯುವುದರ ಬಗ್ಗೆ ಅಲ್ಲ, ಬದಲಾವಣೆ ತರುವುದರ ಬಗ್ಗೆ. ಇದನ್ನು ಅರ್ಥಮಾಡಿಕೊಳ್ಳಲು ನನಗೆ 70 ವರ್ಷಗಳು ಬೇಕಾಯಿತು' ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com