
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತದ ರಕ್ಷಣಾ ಉತ್ಪಾದನೆ ಗರಿಷ್ಠ ಮಟ್ಟಕ್ಕೇರಿದ್ದು, ಒಂದೇ ವರ್ಷದಲ್ಲಿ 1.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಹೌದು.. 2024-25ನೇ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ಉತ್ಪಾದನೆಯು ಸಾರ್ವಕಾಲಿಕ ಗರಿಷ್ಠ ಮಟ್ಟ ಅಂದರೆ ಬರೊಬ್ಬರಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್, '2024-25ರಲ್ಲಿ ಭಾರತದ ವಾರ್ಷಿಕ ರಕ್ಷಣಾ ಉತ್ಪಾದನೆಯು ಸಾರ್ವಕಾಲಿಕ ಗರಿಷ್ಠ ರೂ. 1,50,590 ಕೋಟಿ ತಲುಪಿದೆ.
ಇದು ಹಿಂದಿನ ಹಣಕಾಸು ವರ್ಷದ ಒಟ್ಟು ರೂ. 1.27 ಲಕ್ಷ ಕೋಟಿಗಿಂತ ಸುಮಾರು ಶೇ. 18 ರಷ್ಟು ಬೆಳವಣಿಗೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತದ ರಕ್ಷಣಾ ಉತ್ಪಾದನೆಯು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಹೇಳಿದರು.
ಅಂತೆಯೇ 'ವಾರ್ಷಿಕ ರಕ್ಷಣಾ ಉತ್ಪಾದನೆಯು 2024-25ರ ಹಣಕಾಸು ವರ್ಷದಲ್ಲಿ ರೂ. 1,50,590 ಕೋಟಿಗೆ ಏರಿದೆ. ಈ ಸಂಖ್ಯೆಗಳು ಹಿಂದಿನ ಹಣಕಾಸು ವರ್ಷದ ರೂ. 1.27 ಲಕ್ಷ ಕೋಟಿ ಉತ್ಪಾದನೆಗಿಂತ ಶೇ. 18 ರಷ್ಟು ಬಲವಾದ ಬೆಳವಣಿಗೆಯನ್ನು ಸೂಚಿಸುತ್ತವೆ.
2019-20 ರಿಂದ ಶೇ. 90 ರಷ್ಟು ಹೆಚ್ಚಳವಾಗಿದೆ, ಆಗ ಈ ಸಂಖ್ಯೆ ರೂ. 79,071 ಕೋಟಿ ಆಗಿತ್ತು" ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಉತ್ಪಾದನಾ ಇಲಾಖೆ ಮತ್ತು ರಕ್ಷಣಾ ಸಾರ್ವಜನಿಕ ವಲಯದ ಘಟಕಗಳು ಮತ್ತು ಖಾಸಗಿ ಉದ್ಯಮ ಸೇರಿದಂತೆ ಎಲ್ಲಾ ಪಾಲುದಾರರ "ಸಾಮೂಹಿಕ ಪ್ರಯತ್ನಗಳನ್ನು" ಶ್ಲಾಘಿಸಿದರು. ಅಲ್ಲದೆ "ಹೆಗ್ಗುರುತು" ಎಂದು ಕರೆದದ್ದನ್ನು ಸಾಧಿಸುವಲ್ಲಿ ಇದು ಸ್ಪಷ್ಟ ಸೂಚಕವಾಗಿದೆ.
ಈ ಮೇಲ್ಮುಖ ಪಥವು ಭಾರತದ ರಕ್ಷಣಾ ಕೈಗಾರಿಕಾ ನೆಲೆಯನ್ನು ಬಲಪಡಿಸುತ್ತಿದೆ ಎಂಬುದರ ಸ್ಪಷ್ಟ ಸೂಚಕವಾಗಿದೆ" ಎಂದು ಅವರು ಹೇಳಿದರು.
Advertisement