A man was found dead, stuffed in a drum on a rooftop in Khairthal Tijara district of Rajasthan. (X-@IndiaObserverX)
ಮನೆಯ ಛಾವಣಿ ಮೇಲೆ ಡ್ರಮ್‌ನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ರಾಜಸ್ಥಾನ: ಮನೆಯ ಛಾವಣಿ ಮೇಲೆ ಡ್ರಮ್‌ನಲ್ಲಿ ವ್ಯಕ್ತಿಯ ಶವ ಪತ್ತೆ; ಹೆಂಡತಿ, ಮೂವರು ಮಕ್ಕಳು ನಾಪತ್ತೆ!

ಕೆಟ್ಟ ವಾಸನೆ ಬರುತ್ತಿರುವ ಕುರಿತು ಅಕ್ಕಪಕ್ಕದ ಮನೆಯವರು ದೂರು ನೀಡಿದ ನಂತರ, ಶವ ಪತ್ತೆಯಾಗಿದ್ದು, ಗಂಟಲಿನ ಭಾಗದಲ್ಲಿ ಹರಿತವಾದ ಆಯುಧದಿಂದ ಹೊಡೆದಿರುವ ಗಾಯ ಕಂಡುಬಂದಿದೆ.
Published on

ಜೈಪುರ: ರಾಜಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯ ಮನೆಯ ಛಾವಣಿ ಮೇಲೆ ಡ್ರಮ್‌ನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಅವರ ಪತ್ನಿ, ಮೂವರು ಮಕ್ಕಳು ಮತ್ತು ಮನೆ ಮಾಲೀಕರ ಮಗ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಮೂಲದ ಹಂಸ್ರಾಮ್ ಅಲಿಯಾಸ್ ಸೂರಜ್ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಕಿಶನ್‌ಗಢಬಾಸ್‌ನ ಆದರ್ಶ ಕಾಲೋನಿಯಲ್ಲಿ ವಾಸಿಸುತ್ತಿದ್ದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಸಿಂಗ್ ನಿರ್ವಾನ್ ಭಾನುವಾರ ತಿಳಿಸಿದ್ದಾರೆ.

ಕೆಟ್ಟ ವಾಸನೆ ಬರುತ್ತಿರುವ ಕುರಿತು ಅಕ್ಕಪಕ್ಕದ ಮನೆಯವರು ದೂರು ನೀಡಿದ ನಂತರ, ಶವ ಪತ್ತೆಯಾಗಿದ್ದು, ಗಂಟಲಿನ ಭಾಗದಲ್ಲಿ ಹರಿತವಾದ ಆಯುಧದಿಂದ ಹೊಡೆದಿರುವ ಗಾಯ ಕಂಡುಬಂದಿದೆ.

'ದೇಹದ ಕೊಳೆಯುವಿಕೆಯನ್ನು ವೇಗಗೊಳಿಸಲು ಅದರ ಮೇಲೆ ಉಪ್ಪು ಹಾಕಲಾಗಿತ್ತು' ಎಂದು ನಿರ್ವಾನ್ ಹೇಳಿದರು.

ಹಂಸ್ರಾಮ್ ಕಳೆದ ಒಂದೂವರೆ ತಿಂಗಳಿನಿಂದ ಟೆರೇಸ್ ಮೇಲಿನ ಕೊಠಡಿಯೊಂದರಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು ಮತ್ತು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಸುನೀತಾ, ಮೂವರು ಮಕ್ಕಳು ಮತ್ತು ಮನೆ ಮಾಲೀಕರ ಮಗ ಜಿತೇಂದ್ರ ಶನಿವಾರದಿಂದ ಕಾಣೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

A man was found dead, stuffed in a drum on a rooftop in Khairthal Tijara district of Rajasthan. (X-@IndiaObserverX)
'ಆಗ ಫ್ರಿಡ್ಜ್... ಈಗ ಡ್ರಮ್..': ಲವರ್ ಜೊತೆ ಸೇರಿ ಗಂಡನ ಕೊಲೆಗೈದ ಪತ್ನಿ.. ದೇಹ 15 ತುಂಡು, ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸೀಲ್; ಪ್ರಕರಣ ಬಯಲಾಗಿದ್ದೇ ರೋಚಕ!

ಮೃತ ವ್ಯಕ್ತಿ ಮದ್ಯದ ಚಟ ಹೊಂದಿದ್ದನು ಮತ್ತು ಆಗಾಗ್ಗೆ ಜಿತೇಂದ್ರ ಜೊತೆ ಮದ್ಯಪಾನ ಮಾಡುತ್ತಿದ್ದನು. ಶನಿವಾರ ಸಂಜೆಯಿಂದ, ಜಿತೇಂದ್ರ ಮತ್ತು ಹಂಸ್ರಾಮ್ ಅವರ ಕುಟುಂಬ ಪತ್ತೆಯಾಗಿಲ್ಲ ಎಂದು ಡಿಎಸ್ಪಿ ಹೇಳಿದರು.

ಕಾಣೆಯಾದವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com