
ತಿರುವನಂತಪುರಂ: ಮಲಯಾಂಳಂ ಚಿತ್ರರಂಗದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಶಾಸಕರೊಬ್ಬರು ತನಗೆ ಲೈಂಗಿಕ ಸಂದೇಶ ಕಳುಹಿಸಿದ್ದಾರೆ ಎಂದು ಖ್ಯಾತ ನಟಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಮಲಯಾಳಂ ನಟಿ ರಿನಿ ಜಾರ್ಜ್ ಅವರು ಪ್ರಮುಖ ರಾಜಕೀಯ ಪಕ್ಷದ ಯುವ ನಾಯಕಯೊಬ್ಬರು ಕಳೆದ ಮೂರು ವರ್ಷಗಳಿಂದ ತಮಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಪಂಚತಾರಾ ಹೋಟೆಲ್‌ಗೆ ಬರುವಂತೆ ಆಹ್ವಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ತಾನು ಹಲವಾರು ದೂರುಗಳ ನೀಡಿದ ಹೊರತಾಗಿಯೂ ಪಕ್ಷದ ಅಧಿಕಾರಿಗಳು ಕ್ರಮಕೈಗೊಳ್ಳದೇ ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಿಯ ಹೆಸರು ಅಥವಾ ಅವರ ಪಕ್ಷದ ಹೆಸರನ್ನು ಬಹಿರಂಗಪಡಿಸಲು ನಟಿ ನಿರಾಕರಿಸಿದ್ದಾರೆಯಾದರೂ, ಆದರೆ ಕೇರಳದ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟ್ಟಿಲ್ ಅವರ ಪಾತ್ರವನ್ನು ಆರೋಪಿಸಿದೆ ಮತ್ತು ಪಾಲಕ್ಕಾಡ್ ಜಿಲ್ಲೆಯ ಅವರ ಕಚೇರಿಯ ಹೊರಗೆ ಪ್ರತಿಭಟನೆಗಳನ್ನು ಸಹ ನಡೆಸಿದೆ.
ಆದರೆ ಈ ಬಗ್ಗೆ ಮಂಕೂಟ್ಟಿಲ್ ಅಥವಾ ಕಾಂಗ್ರೆಸ್‌ನಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ ಆದರೆ ಪಕ್ಷದ ನಾಯಕತ್ವ ವರದಿಯನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.
ನಟಿ ಆರೋಪವೇನು?
ನಾನು ಸಾಮಾಜಿಕ ಮಾಧ್ಯಮದ ಮೂಲಕ ರಾಜಕಾರಣಿಯೊಂದಿಗೆ ಸಂಪರ್ಕಕ್ಕೆ ಬಂದೆ. ಮೂರು ವರ್ಷಗಳ ಹಿಂದೆ, ನಾನು ಮೊದಲು ಅವರಿಂದ ಆಕ್ಷೇಪಾರ್ಹ ಸಂದೇಶಗಳನ್ನು ಸ್ವೀಕರಿಸಿದೆ. ಹಲವು ಬಾರಿ ಪಂಚತಾರಾ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿ ಕಾಯುತ್ತಿರುವುದಾಗಿ ನೀನು ಕೂಡಲೇ ಬರುವಂತೆ ಒತ್ತಾಯಿಸಿದ್ದರು. ಅವರ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ಇಮೇಜ್ ಛಿದ್ರಗೊಂಡಿದೆ.
ನನ್ನ ದೂರಿನ ನಂತರವೂ, ಅವರಿಗೆ ಪಕ್ಷದೊಳಗೆ ಹಲವಾರು ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ. ಭದ್ರತಾ ಕಾರಣಗಳಿಂದಾಗಿ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯ ಕೊರತೆಯಿಂದಾಗಿ ದೂರನ್ನು ಮುಂದುವರಿಸುತ್ತಿಲ್ಲ. ರಾಜಕೀಯ ಪಕ್ಷವನ್ನು ಮುಜುಗರಕ್ಕೀಡು ಮಾಡಲು ಬಯಸುವುದಿಲ್ಲ. ಆದರೆ ಮಹಿಳೆಯರನ್ನು ಬೆಂಬಲಿಸಲು ಮಾತನಾಡುತ್ತಿದ್ದೇನೆ ಎಂದು ಅವರು ಹೇಳಿದರು.
ಯಾರು ಆ ನಾಯಕ?
ಮೂಲಗಳ ಪ್ರಕಾರ ನಟಿ ರೀನಿ ಜಾರ್ಜ್ ಆರೋಪಿಸಿರವಂತೆ ಆಕೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದು ಕಾಂಗ್ರೆಸ್ ನಾಯಕ ಎನ್ನಲಾಗಿದೆ. ಪಾಲಕ್ಕಾಡ್ ನ ಕಾಂಗ್ರೆಸ್ ಶಾಸಕ ಹಾಗೂ ಕೇರಳ ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮಂಕೂಟ್ಟಿಲ್ (Rahul Mamkoottathil) ಮೇಲೆ ಈ ಗಂಭೀರ ಆರೋಪ ಮಾಡಲಾಗಿದೆ. ರೀನಿ ಜಾರ್ಜ್ ಮಾತ್ರವಲ್ಲದೇ ರಾಹುಲ್ ವಿರುದ್ಧ ಬರಹಗಾರ್ತಿ ಹನಿ ಭಾಸ್ಕರನ್ ಕೂಡ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ. ರಾಹುಲ್ ಮಂಕೂಟ್ಟಿಲ್ , ಬೇರೆ ನಾಯಕರ ಹೆಂಡತಿಯರು ಮತ್ತು ಹೆಣ್ಣು ಮಕ್ಕಳಿಗೂ ಇದೇ ರೀತಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ರಿನಿ ಜಾರ್ಜ್ ಆರೋಪಿಸಿದ್ದಾರೆ.
ಈ ಬಗ್ಗೆ ನಟನನ್ನು ನಟಿ ರಿನಿ ಚಾರ್ಜ್ ಪ್ರಶ್ನಿಸಿದಾಗ, 'ನೀನು ಹೋಗಿ ಯಾರಿಗಾದರೂ ಹೇಳಬಹುದು, ಯಾರು ಗಮನ ಕೊಡಲ್ಲ ಎಂದು ಆ ನಾಯಕ, ತಮಗೆ ಹೇಳಿದ್ದರು ಎಂದು ನಟಿ ರಿನಿ ಜಾರ್ಜ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜಿನಾಮೆ
ಇನ್ನು ರಾಹುಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬರುತ್ತಲೇ ಈ ಪ್ರಕರಣದಿಂದ ಮುಜುಗರಕ್ಕೀಡಾದ ಕೇರಳ ಕಾಂಗ್ರೆಸ್ ಘಟಕ ರಾಹುಲ್ ಮಂಕೂಟ್ಟಿಲ್ ರನ್ನು ಪಕ್ಷದಲ್ಲಿನ ಎಲ್ಲ ಹುದ್ದೆಗಳಿಗೆ ರಾಜಿನಾಮೆ ನೀಡುವಂತೆ ಸೂಚಿಸಿದ್ದು, ಈ ಸೂಚನೆ ಬೆನ್ನಲ್ಲೇ ರಾಹುಲ್ ಕೂಡ ಎಲ್ಲ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ.
ಅಂತೆಯೇ ರಾಹುಲ್ ಅವರನ್ನು ಪಕ್ಷದ ಸ್ಥಾನಗಳಿಂದ ಅಥವಾ ಪಕ್ಷದಿಂದ ತೆಗೆದುಹಾಕಿದರೂ, ಅವರು ವಿಧಾನಸಭೆಯ ಸ್ವತಂತ್ರ ಸದಸ್ಯರಾಗಿ ಮುಂದುವರಿಯಬಹುದು ಎಂದು ಕಾಂಗ್ರೆಸ್ ಮೂಲವೊಂದು ತಿಳಿಸಿದೆ. ರಾಹುಲ್ ಪಾಲಕ್ಕಾಡ್‌ನ ಹಾಲಿ ಶಾಸಕರಾಗಿದ್ದು, ಆದಾಗ್ಯೂ, ಕಾಂಗ್ರೆಸ್ ಅವರ ಪಕ್ಷದ ಸದಸ್ಯತ್ವವನ್ನು ರದ್ದುಗೊಳಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
Advertisement