
ಉತ್ತರ ಪ್ರದೇಶದ ಝಾನ್ಸಿಯಲ್ಲಿ, ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬಳ ದೇಹದ ತುಂಡುಗಳು ಚೀಲದಲ್ಲಿ ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ರೋಚಕ ಸಂಗತಿಗಳು ಬಹಿರಂಗಗೊಂಡಿವೆ. ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮದುವೆ ಮಾಡಿಕೊಳ್ಳುವಂತೆ ಮಹಿಳೆ ಒತ್ತಾಯಿಸುತ್ತಿದ್ದಳು. ಇದರಿಂದಾಗಿ ಮಾಜಿ ಪ್ರಧಾನ್ ಆಕೆಯ ಕತ್ತು ಹಿಸುಕಿ ಕೊಂದು ಶವವನ್ನು ಏಳು ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಎಸೆದಿದ್ದಾನೆ. ಈ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.
ವಾಸ್ತವವಾಗಿ, ಆಗಸ್ಟ್ 13ರಂದು ತೋಡಿ ಫತೇಪುರ್ ಪ್ರದೇಶದ ಕಿಶೋರ್‌ಪುರ್ ಗ್ರಾಮದಲ್ಲಿರುವ ತನ್ನ ಜಮೀನಿಗೆ ರೈತನೊಬ್ಬ ಹೋಗಿದ್ದ. ಕೆಟ್ಟ ವಾಸನೆ ಬಂದ ನಂತರ, ಹತ್ತಿರದ ಕೆರೆಯೊಳಗೆ ನೋಡಿದಾಗ ಅದರಲ್ಲಿ ಎರಡು ಚೀಲಗಳು ಕಂಡಿವೆ. ಈ ಬಗ್ಗೆ ಆತ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಗ್ರಾಮಸ್ಥರ ಸಹಾಯದಿಂದ ಚೀಲಗಳನ್ನು ಬಾವಿಯಿಂದ ಹೊರತೆಗೆದಿದ್ದರು.
ಘಟನಾ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು ಚೀಲಗಳನ್ನು ತೆರೆದಾಗ ಜನರು ದಿಗ್ಭ್ರಮೆಗೊಂಡರು. ಎರಡೂ ಚೀಲಗಳಲ್ಲಿ ಮಹಿಳೆಯ ದೇಹದ ತುಂಡುಗಳಿದ್ದವು. ಎರಡೂ ಕೈಗಳು, ಎರಡೂ ಕಾಲುಗಳು ಮತ್ತು ಮಹಿಳೆಯ ತಲೆ ಕಾಣೆಯಾಗಿತ್ತು. ಈ ಹೃದಯ ವಿದ್ರಾವಕ ಘಟನೆಯ ನಂತರ, ಗ್ರಾಮದಲ್ಲಿ ಸಂಚಲನ ಮೂಡಿಸಿತ್ತು. ವಿವಿಧ ರೀತಿಯ ಸಂಗತಿಗಳನ್ನು ಜನರು ಮಾತನಾಡಿಕೊಳ್ಳಲು ಆರಂಭಿಸಿದರು. ಈ ಪ್ರಕರಣವು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತು.
ಈ ಪ್ರಕರಣವನ್ನು ಪರಿಹರಿಸಲು ಝಾನ್ಸಿ ಎಸ್‌ಎಸ್‌ಪಿ 8 ತಂಡಗಳನ್ನು ರಚಿಸಿದರು. ಪೊಲೀಸ್ ತಂಡಗಳು ತನಿಖೆ ಆರಂಭಿಸಿತ್ತು. ಈ ಸಮಯದಲ್ಲಿ ಆಗಸ್ಟ್ 17ರಂದು ಬಾವಿಯಲ್ಲಿ ಮತ್ತೊಂದು ಚೀಲ ಪತ್ತೆಯಾಗಿದ್ದು, ಅದರಲ್ಲಿ ಮಹಿಳೆಯ ಎರಡೂ ಕೈಗಳು ಇದ್ದವು, ಆದರೆ ಆಕೆಯ ತಲೆ ಮತ್ತು ಕಾಲುಗಳು ಕಾಣೆಯಾಗಿದ್ದವು. ತಲೆ ಇಲ್ಲದ ದೇಹವನ್ನು ಗುರುತಿಸುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಇದರ ನಂತರ, ಆಗಸ್ಟ್ 18 ರಂದು, ಮರಣೋತ್ತರ ಪರೀಕ್ಷೆಯ ನಂತರ ಮಹಿಳೆಯ ದೇಹದ ತುಂಡುಗಳನ್ನು ದಹನ ಮಾಡಲಾಯಿತು.
ಈ ಘಟನೆಯ ಆಳಕ್ಕೆ ಹೋಗಲು ಪೊಲೀಸರು ತನಿಖೆ ಮುಂದುವರೆಸಿದರು. ಪೊಲೀಸರು 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿಚಾರಿಸಿದರು ಮತ್ತು 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಹುಡುಕಿದರು. ಇದಾದ ನಂತರವೂ, ಪೊಲೀಸರಿಗೆ ಏನೂ ಸಿಗಲಿಲ್ಲ. ಮಹಿಳೆಯ ಶವ ಪತ್ತೆಯಾದ ಚೀಲದ ದಾರದ ಆಧಾರದ ಮೇಲೆ ಅಂಗಡಿಗಳನ್ನು ಸಹ ಶೋಧಿಸಲಾಗಿದೆ ಎಂದು ಝಾನ್ಸಿ ಎಸ್‌ಎಸ್‌ಪಿ ತಿಳಿಸಿದ್ದಾರೆ.
ಚೀಲಗಳ ಒಳಗೆ ಬಿದ್ದಿದ್ದ ಇಟ್ಟಿಗೆಗಳ ಮಣ್ಣನ್ನು ಸಹ ಪರೀಕ್ಷಿಸಲಾಯಿತು. ಅದು ಸುತ್ತಮುತ್ತಲಿನ ಪ್ರದೇಶದಿಂದ ಬಂದದ್ದು ಎಂದು ಕಂಡುಬಂದಿದೆ. ಏತನ್ಮಧ್ಯೆ, ಗುರುತಿಸುವಿಕೆಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 1000 ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಈ ಪೋಸ್ಟರ್‌ಗಳಲ್ಲಿ ಒಂದನ್ನು ನೋಡಿದ ವ್ಯಕ್ತಿಯೊಬ್ಬರು ತನ್ನ ಸಹೋದರಿ ನಾಲ್ಕು ದಿನಗಳಿಂದ ಕಾಣೆಯಾಗಿದ್ದಾಳೆ ಎಂದು ಇನ್ನೊಬ್ಬ ವ್ಯಕ್ತಿಗೆ ಮಾಹಿತಿ ನೀಡಿದರು. ಆ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿ ಆ ಮಹಿಳೆಯನ್ನು ಟಿಕಮ್‌ಗಢ ನಿವಾಸಿ ರಚನಾ ಯಾದವ್ ಎಂದು ಗುರುತಿಸಲಾಯಿತು.
ಮಹಿಳೆ ರಚನಾ ಯಾದವ್ ಅವರ ಪತಿ ಸಾವನ್ನಪ್ಪಿದ್ದಾರೆ ಎಂದು ಎಸ್‌ಪಿಪಿ ಹೇಳಿದರು. ರಚನಾಗೆ ಸೋದರ ಮಾವನೊಂದಿಗೆ ಸಂಘರ್ಷವಿತ್ತು. ಇದರಲ್ಲಿ ತೋಡಿ ಫತೇಪುರ್ ಪೊಲೀಸ್ ಠಾಣೆ ಪ್ರದೇಶದ ಮಾಹೇವಾ ಗ್ರಾಮದ ಮಾಜಿ ಪ್ರಧಾನ್ ಸಂಜಯ್ ಪಟೇಲ್ ಮಹಿಳೆಯನ್ನು ಬೆಂಬಲಿಸುತ್ತಿದ್ದನು. ಈ ಸಮಯದಲ್ಲಿ, ರಚನಾ ಯಾದವ್ ಮತ್ತು ಸಂಜಯ್ ಪಟೇಲ್ ನಡುವೆ ಸಂಬಂಧ ಬೆಳೆಯಿತು. ಮಹಿಳೆ ಮಾಜಿ ಪ್ರಧಾನ್ ಸಂಜಯ್ ಪಟೇಲ್ ಮೇಲೆ ಮದುವೆಗೆ ಒತ್ತಡ ಹೇರಲು ಪ್ರಾರಂಭಿಸಿದಳು. ಇದರಿಂದ ಬೇಸತ್ತ ಸಂಜಯ್ ಪಟೇಲ್, ತನ್ನ ಸೋದರಳಿಯ ಸಂದೀಪ್ ಪಟೇಲ್ ಮತ್ತು ಮತ್ತೊಬ್ಬ ಸ್ನೇಹಿತ ಪ್ರದೀಪ್ ಅಹಿರ್ವಾರ್ ಜೊತೆಗೂಡಿ ರಚನಾಳನ್ನು ಕೊಲೆ ಮಾಡಿದ್ದಾನೆ.
ಆಗಸ್ಟ್ 8ರಂದು ಸಂಜಯ್ ಪಟೇಲ್ ರಚನಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಎಸ್‌ಎಸ್‌ಪಿ ಬಿಬಿಜಿಟಿಎಸ್ ಮೂರ್ತಿ ಹೇಳಿದ್ದಾರೆ. ಕಾರಿನಲ್ಲಿ ಶವವನ್ನು ಬಾವಿಗೆ ತೆಗೆದುಕೊಂಡು ಹೋಗಿ, ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ತುಂಬಿಸಿ ಬಾವಿಯಲ್ಲಿ ಮತ್ತು ಸೇತುವೆಯ ಬಳಿ ಎಸೆದಿದ್ದಾನೆ. ಆರೋಪಿ ಮತ್ತು ಮೃತ ಮಹಿಳೆ ಸಂಬಂಧದಲ್ಲಿದ್ದರು. ಮಹಿಳೆ ಆರೋಪಿಯಿಂದ ಹಣ ಪಿಕುತ್ತಿದ್ದಳು. ನಂತರ ಮದುವೆಗೆ ಒತ್ತಡ ಹೇರುತ್ತಿದ್ದಳು. ಅದಕ್ಕಾಗಿಯೇ ಸಂಜಯ್ ಮತ್ತು ಅವನ ಸಹಚರರು ಕೊಲೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮೂರನೇ ಆರೋಪಿ ಪ್ರದೀಪ್ ಅಹಿರ್ವಾರ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಅವರ ಮೇಲೆ 25 ಸಾವಿರ ಬಹುಮಾನ ನೀಡಲಾಗಿದೆ. ಕೊಲೆಗಾಗಿ ಆರೋಪಿ ಸಂಜಯ್ ಕೂಡ ಪ್ರದೀಪ್‌ಗೆ ಹಣ ನೀಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ತೋಡಿ ಫತೇಪುರ್ ಪೊಲೀಸ್ ಠಾಣೆ ಪ್ರದೇಶದ ಲಖೇರಿ ನದಿಯಿಂದ ಮಹಿಳೆಯ ತಲೆಯನ್ನು ವಶಪಡಿಸಿಕೊಳ್ಳಲಾಗಿದೆ.
Advertisement