
ಶ್ರೀನಗರ: ರಸ್ತೆ ಅಪಘಾತದಲ್ಲಿ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟಿಗ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ.
ಜಮ್ಮ ಕಾಶೀರದ ಕ್ರಿಕೆಟಿಗ ಫರೀದ್ ಹುಸೇನ್ (Fareed Khan) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರಿನ ಡೋರ್ ತಗುಲಿ ಕೆಳಗೆ ಬಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಇದೇ ಆಗಸ್ಟ್ 20 ರಂದು ಪೂಂಚ್ ಮೂಲದ ನಿವಾಸಿ ಹಾಗೂ ಕ್ರಿಕೆಟಿಗ ಫರೀದ್ ಖಾನ್ ಕೆಲಸದ ನಿಮಿತ್ತ ಬೈಕ್ನಲ್ಲಿ ಹೋಗುತ್ತಿದ್ದರು.
ಅದೇ ರಸ್ತೆ ಎಡಭಾಗದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಡೋರ್ ಓಪನ್ ಮಾಡಿದ್ದಾರೆ. ಈ ವೇಳೆ ಫರೀಕ್ ಬೈಕ್ ಅವರ ಕಾರಿನ ಡೋರ್ ಗೆ ತಗುಲಿ ಕೆಳಗೆ ಬಿದ್ದಿದ್ದಾರೆ.
ಈ ಡಿಕ್ಕಿಯ ರಭಸಕ್ಕೆ ಫರೀದ್ ಹುಸೇನ್ ನೆಲಕ್ಕುರುಳಿದ್ದಾರೆ. ತಕ್ಷಣವೇ ಸ್ಥಳೀಯರು ಕ್ರಿಕೆಟಿಗನ ನೆರವಿಗೆ ಧಾವಿಸಿದ್ದು, ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಫರೀದ್ ಹುಸೇನ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದೀಗ ಫರೀದ್ ಹುಸೇನ್ ಅವರ ಅಪಘಾತದ ದೃಶ್ಯದ ಸಿಸಿ ಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಮ್ಮು ಕಾಶ್ಮೀರದ ಕ್ರಿಕೆಟಿಗರು ಸೇರಿದಂತೆ ಅನೇಕರು ಫರೀದ್ ಹುಸೇನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Advertisement