
ನವದೆಹಲಿ: ಭಾರತ ವಸ್ತುಗಳ ಮೇಲೆ ಶೇಕಡಾ 50ರವರೆಗೆ ಅಮೆರಿಕದ ಸುಂಕ ಜಾರಿಗೆ ಬಂದಿದೆ. ಅಮೆರಿಕದ ಪರಸ್ಪರ ಸುಂಕ ಆಡಳಿತದ ಅಡಿಯಲ್ಲಿ ಭಾರತದ ಜವಳಿ ಉದ್ಯಮದ ಮೇಲೆ ತೀವ್ರ ಹೊಡೆತ ಬೀಳುವ ಸಾಧ್ಯತೆಯಿದೆ. 45 ದಶಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಉದ್ಯಮಕ್ಕೆ ಹೊಡೆತವನ್ನು ತಗ್ಗಿಸಲು ಭಾರತ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಭಾರತದ ಜವಳಿ ರಫ್ತುಗಳನ್ನು ವೈವಿಧ್ಯಗೊಳಿಸುವ ಪ್ರಯತ್ನಗಳ ಬೇರೆ ದೇಶಗಳ ಜೊತೆ ಸಂಪರ್ಕ ಸಾಧಿಸಲು 40 ಪ್ರಮುಖ ಆಮದು ದೇಶಗಳನ್ನು ಗುರುತಿಸಲಾಗಿದೆ ಎಂದು ಸರ್ಕಾರಿ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(New Indian Express) ಪತ್ರಿಕೆಗೆ ತಿಳಿಸಿದೆ.
ಉತ್ತರ ಅಮೆರಿಕಾ, ಯುರೋಪ್, ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಓಷಿಯಾನಿಯಾದಲ್ಲಿ ಹರಡಿರುವ ಈ ಮಾರುಕಟ್ಟೆ ಒಟ್ಟಾಗಿ ಜವಳಿ ಮತ್ತು ಉಡುಪುಗಳಿಗೆ ಜಾಗತಿಕ ಬೇಡಿಕೆಯ ಸುಮಾರು ನಾಲ್ಕನೇ ಮೂರು ಭಾಗದಷ್ಟು ಹೊಂದಿವೆ.
ಈ ಆರ್ಥಿಕತೆಗಳಲ್ಲಿ ಭಾರತದ ಶೇಕಡಾ 5ರಿಂದ 6ರಷ್ಟು ಮಾರುಕಟ್ಟೆ ಪಾಲನ್ನು ವಿಸ್ತರಿಸಲು ಮೀಸಲಾದ ಸಂಪರ್ಕ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ, ವಿಶೇಷವಾಗಿ ಉಡುಪು, ಗೃಹ ಜವಳಿ, ತಾಂತ್ರಿಕ ಜವಳಿ ಮತ್ತು ಕರಕುಶಲ ವಸ್ತುಗಳ ಮೇಲೆ ಒತ್ತು ನೀಡಲಾಗಿದೆ ಎಂದು ಸರ್ಕಾರಿ ಮೂಲವೊಂದು ತಿಳಿಸಿದೆ.
ವಾಣಿಜ್ಯ ಗುಪ್ತಚರ ಮತ್ತು ಅಂಕಿಅಂಶಗಳ ನಿರ್ದೇಶನಾಲಯ (DGCIS) ಪ್ರಕಾರ, ಜವಳಿ ರಫ್ತು ಕಳೆದ ಜುಲೈ ತಿಂಗಳಲ್ಲಿ 3.10 ಬಿಲಿಯನ್ ಡಾಲರ್ ತಲುಪಿದೆ, ಇದು ವರ್ಷದಿಂದ ವರ್ಷಕ್ಕೆ 5.37 ಶೇಕಡಾ ಏರಿಕೆಯಾಗಿದೆ. ಏಪ್ರಿಲ್ ಮತ್ತು ಜುಲೈ ನಡುವೆ, ಸಂಚಿತ ರಫ್ತು 12.18 ಬಿಲಿಯನ್ ಡಾಲರ್ ಆಗಿದ್ದು, ಕಳೆದ ವರ್ಷದ ಇದೇ ಅವಧಿಗಿಂತ ಶೇಕಡಾ 3.87ರಷ್ಟು ಹೆಚ್ಚಾಗಿದೆ.
ಇತ್ತೀಚೆಗೆ ಸಹಿ ಹಾಕಲಾದ ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಸೇರಿದಂತೆ ಪಾಲುದಾರ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳ (FTA) ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ. ರಫ್ತು ಉತ್ತೇಜನಾ ಮಂಡಳಿಗಳು, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಮನ್ವಯದೊಂದಿಗೆ, ಭಾರತವನ್ನು ಗುಣಮಟ್ಟದ, ಸುಸ್ಥಿರ ಮತ್ತು ನವೀನ ಜವಳಿಗಳಿಗೆ ವಿಶ್ವಾಸಾರ್ಹ ಮೂಲವಾಗಿ ಇರಿಸಲು ಉದ್ದೇಶಿತ ಪ್ರಚಾರ ಮುನ್ನಡೆಸುತ್ತವೆ. ಕೆಲವು ಸಾಂಪ್ರದಾಯಿಕ ಮಾರುಕಟ್ಟೆಗಳ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರವು ಭಾರತೀಯ ರಫ್ತಿನ ಮೇಲೆ ಶೇ. 50 ರಷ್ಟು ಸುಂಕಗಳನ್ನು ವಿಧಿಸಿರುವುದು ಅಮೆರಿಕ-ಭಾರತ ವ್ಯಾಪಾರ ಸಂಬಂಧ ಮತ್ತು ಕಾರ್ಯತಂತ್ರದ ಪಾಲುದಾರಿಕೆಗೆ ತೀವ್ರ ಆಘಾತವನ್ನುಂಟು ಮಾಡಿದೆ, ಇದನ್ನು ವಿಶಾಲ ಅರ್ಥದಲ್ಲಿ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಮೂಲಾಧಾರವೆಂದು ಪರಿಗಣಿಸಲಾಗಿತ್ತು.
ಅಮೆರಿಕದ ಅನುಭವಿ ಮಾಜಿ ಅಧಿಕಾರಿಗಳು ಮತ್ತು ದೀರ್ಘಕಾಲದಿಂದ ಭಾರತ ವ್ಯಾಪಾರ ಮತ್ತು ಇತರ ಸಂಬಂಧಗಳನ್ನು ಗುರುತಿಸಿಕೊಂಡು ಬಂದಿರುವ ಗುಂಪು ಅಮೆರಿಕದ ಬಲವಂತದ ವಿಧಾನವು ಶಾಶ್ವತ ಹಾನಿಯನ್ನುಂಟುಮಾಡಬಹುದು ಎಂದು ಎಚ್ಚರಿಸುತ್ತಿದೆ.
Advertisement