INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ 85% ಗೆ ಏರಿಕೆ!: Tejashwi Yadav

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ. ಜನರು ತಮ್ಮ ಹಕ್ಕುಗಳನ್ನು ಕಾಪಾಡಲು ಒಂದಾಗಬೇಕು.
Tejashwi Yadav
ಮೈತ್ರಿಕೂಟದ ನಾಯಕರೊಂದಿಗೆ ತೇಜಸ್ವಿ ಯಾದವ್
Updated on

ಪಾಟ್ನಾ: ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾವನ್ನು ಶೇ.85ಕ್ಕೆ ಏರಿಕೆ ಮಾಡುವುದಾಗಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav) ಹೇಳಿದ್ದಾರೆ.

ಬಿಹಾರದ ಮೋತಿಹಾರಿಯಲ್ಲಿ ನಡೆಯುತ್ತಿರುವ ಮತದಾರರ ಅಧಿಕಾರ ಯಾತ್ರೆಯ ಅಂಗವಾಗಿ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ತೇಜಸ್ವಿಯಾದವ್, 'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ. ಜನರು ತಮ್ಮ ಹಕ್ಕುಗಳನ್ನು ಕಾಪಾಡಲು ಒಂದಾಗಬೇಕು ಎಂದು ಹೇಳಿದರು.

ಈಗ ಮತ ಕಳ್ಳತನ.. ಮುಂದೆ ಸರ್ಕಾರದ ಕ್ರಮಗಳು ಕ್ರಮೇಣ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಬಹುದು.

ಮೊದಲು, ಅವರು ನಿಮ್ಮ ಮತವನ್ನು, ನಂತರ ನಿಮ್ಮ ಪಡಿತರವನ್ನು, ನಂತರ ನಿಮ್ಮ ಪಿಂಚಣಿಯನ್ನು ಮತ್ತು ಅಂತಿಮವಾಗಿ ನಿಮ್ಮ ಆಸ್ತಿಗಳನ್ನು ಕಸಿದುಕೊಳ್ಳುತ್ತಾರೆ. ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದಿಂದ ಬದಲಾಯಿಸಲಾಗುತ್ತದೆ ಎಂದರು.

Tejashwi Yadav
ಬಿಹಾರ ಗ್ರಾಮವೊಂದರ ಎಲ್ಲಾ ಜನರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ: ರಾಹುಲ್ ಗಾಂಧಿ

ಮೀಸಲಾತಿ ಕೋಟಾ 85%ಕ್ಕೆ ಏರಿಕೆ

ಇದೇ ವೇಳೆ ಮೀಸಲಾತಿ ಸೌಲಭ್ಯಗಳನ್ನು ಹೆಚ್ಚಿಸುವ ತಮ್ಮ ಪಕ್ಷದ ಭರವಸೆಯನ್ನು ಪುನರುಚ್ಛರಿಸಿದ ತೇಜಸ್ವಿ ಯಾದವ್, 'ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾವನ್ನು ಶೇ.85ಕ್ಕೆ ಏರಿಕೆ ಮಾಡುತ್ತೇವೆ ಎಂದರು. ಅಂತೆಯೇ ಜನರ ಹಕ್ಕುಗಳ ಅಡಿಪಾಯ ಸಂವಿಧಾನ ಎಂದು ಕರೆದ ತೇಜಶ್ವಿ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಯಸಿದರೆ ಅಧಿಕಾರದಲ್ಲಿರುವವರನ್ನು ತೆಗೆದುಹಾಕುವಂತೆ ನಾಗರಿಕರನ್ನು ಒತ್ತಾಯಿಸಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟೀಕಿಸಿದ ಅವರು, "ಚಾಚಾ ಸಿಲುಕಿಕೊಂಡಿದ್ದಾರೆ... ಅವರು ಮೊದಲಿನಂತೆಯೇ ಇಲ್ಲ... ಅವರು ಇನ್ನು ಮುಂದೆ ಮುಖ್ಯಮಂತ್ರಿಯಾಗುವುದಿಲ್ಲ" ಎಂದು ಟೀಕಿಸಿದರು.

ನನ್ನದೂ ಲಾಲೂಜಿ ರಕ್ತ

ಇದೇ ವೇಳೆ, 'ಇವರು ನನ್ನ ದೇಹದಲ್ಲೂ ಹರಿಯುತ್ತಿರುವುದು ಲಾಲೂ ಪ್ರಸಾದ್ ಯಾದವ್ ಅವರ ರಕ್ತ ಎಂಬುದನ್ನು ಮರೆತಿದ್ದಾರೆ. ಲಾಲೂ ಜಿ ಸಕ್ರಿಯವಾಗಿಲ್ಲದಿದ್ದರೂ ಅವರ ಪರವಾಗಿ ನಾನು ಹೋರಾಡುತ್ತೇನೆ. ಲಾಲೂ ಪ್ರಸಾದ್ ಯಾದವ್ ತಗ್ಗಿರಬಹುದು. ಅವರ ಮಕ್ಕಳಾದ ನಾವು ಎದ್ದಿದ್ದೇವೆ. ನಾವು ಹೋರಾಟಗಾರರು... ಸಹೋದರರೇ ಎಲ್ಲರೂ ಒಂದಾಗಿ. ಇಲ್ಲದಿದ್ದರೆ, ಅವರು ನಿಮ್ಮ ಅಸ್ತಿತ್ವವನ್ನು ಕೊನೆಗೊಳಿಸುತ್ತಾರೆ ಎಂದು ಕಿಡಿಕಾರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com