

ಬೆಂಗಳೂರು: ಬೆಂಗಳೂರಿನಲ್ಲಿ ಗೋಕಳ್ಳತನ ನಡೆದಿರುವುದು ವರದಿಯಾಗಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ 3 ಗಿರ್ ಹಸುಗಳನ್ನು ಕಳ್ಳತನ ಮಾಡಲಾಗಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೊಂದು ಹಸುವಿನ ಕತ್ತು ಕೊಯ್ದು ದುರುಳರು ವಿಕೃತಿ ಮೆರೆದಿರುವ ಘಟನೆ ನೆಲಮಂಗಲ ತಾಲೂಕಿನ ದಾಸನ ಪುರ ಹೋಬಳಿ ಗೌಡಹಳ್ಳಿ ಗ್ರಾಮನದಲ್ಲಿ ನಡೆದಿದೆ.
ಪವಾಡಸದೃಶವಾಗಿ ದಾಳಿಗೆ ಒಳಗಾದ ಹಸು ದುರುಳರಿಂದ ತಪ್ಪಿಸಿಕೊಂಡು ಬಂದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೌಡಹಳ್ಳಿ ಗ್ರಾಮದ ವಿಜಯಲಕ್ಷ್ಮಿ ಎಂಬುವವರ ಕುಟುಂಬದವರು ಹೈನುಗಾರಿಕೆ ಮಾಡುವ ಉದ್ದೇಶದಿಂದ 2 ವರ್ಷಗಳ ಹಿಂದೆ ಗುಜರಾತ್ನಿಂದ ನಾಲ್ಕು ಗಿರ್ ಹಸುಗಳನ್ನು ತರಿಸಿದ್ದರು.
ಎರಡು ದಿನಗಳ ಹಿಂದೆ ಶೆಡ್ನಲ್ಲಿದ್ದ ನಾಲ್ಕು ಗಿರ್ ಹಸುಗಳ ಕಳ್ಳತನವಾಗಿದೆ. ಈ ಕಳ್ಳತನದ ವೇಳೆ ಒಂದು ಹಸು ಗಲಾಟೆ ಮಾಡಿದ್ದು, ಹಸುವಿನ ಕತ್ತು ಕೊಯ್ಯಲಾಗಿದೆ. ಆ ಹಸು ದುಷ್ಟರಿಂದ ತಪ್ಪಿಸಿಕೊಂಡು ಓಡಿ ಬಂದಿದೆ. ಬಳಿಕ ಮಾಲೀಕರು ಬಾಕಿ ಹಸುಗಳಿಗಾಗಿ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನಲೆ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನೆಲಮಂಗಲ ಭಾಗದಲ್ಲಿ ಹಸುಗಳ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.
Advertisement