ಸಂಪಾದನೆ ಮಾಡುವ ಮಹಿಳೆ ಜೀವನಾಂಶಕ್ಕೆ ಅನರ್ಹ: ಅಲ್ಲಾಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು!

ನ್ಯಾಯಮೂರ್ತಿ ಮದನ್ ಪಾಲ್ ಸಿಂಗ್ ಅವರನ್ನೊಳಗೊಂಡ ಪೀಠ ಅಂಕಿತ್ ಸಹಾ ಎಂಬ ವ್ಯಕ್ತಿ ಸಲ್ಲಿಸಿದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಸಹ ಅನುಮತಿಸಿತು.
high court
ಹೈಕೋರ್ಟ್ ತೀರ್ಪು online desk
Updated on

ಅಲ್ಲಾಹಾಬಾದ್: ಜೀವನಾಂಶಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪಿನ್ನು ನೀಡಿರುವ ಅಲಹಾಬಾದ್ ಹೈಕೋರ್ಟ್ ಸಂಪಾದನೆ ಮಾಡುವ ಮಹಿಳೆ ತನ್ನನ್ನು ತಾನು ಕಾಪಾಡಿಕೊಳ್ಳಲು ಸಮರ್ಥಳಾಗಿರುತ್ತಾಳೆ ಎಂದು ಅಭಿಪ್ರಾಯಪಟ್ಟಿದೆ.

ಪರಿತ್ಯಕ್ತ ಪತ್ನಿಗೆ ಜೀವನಾಂಶ ಪಾವತಿಸಲು ವ್ಯಕ್ತಿಯೊಬ್ಬನಿಗೆ ಗೌತಮ್ ಬುದ್ಧ ನಗರದ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಈ ಮೂಲಕ ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ಆಕೆ ತನ್ನ ಜೀವನೋಪಾಯವನ್ನು ಗಳಿಸಿದ್ದಾಳೆ ಮತ್ತು ಆಕೆಯ ಅಫಿಡವಿಟ್‌ನಲ್ಲಿ ನಿಜವಾದ ಸಂಬಳವನ್ನು ಬಹಿರಂಗಪಡಿಸಿಲ್ಲ ಎಂಬ ಅಂಶವನ್ನು ಹೈಕೋರ್ಟ್ ಗಮನಿಸಿ ಈ ಆದೇಶ ಪ್ರಕಟಿಸಿದೆ.

ನ್ಯಾಯಮೂರ್ತಿ ಮದನ್ ಪಾಲ್ ಸಿಂಗ್ ಅವರನ್ನೊಳಗೊಂಡ ಪೀಠ ಅಂಕಿತ್ ಸಹಾ ಎಂಬ ವ್ಯಕ್ತಿ ಸಲ್ಲಿಸಿದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಸಹ ಅನುಮತಿಸಿತು.

"ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಮಹಿಳೆ ತಾನು ಸ್ನಾತಕೋತ್ತರ ಪದವೀಧರೆ ಮತ್ತು ಅರ್ಹತೆಯ ಮೂಲಕ ವೆಬ್ ಡಿಸೈನರ್ ಎಂದು ಒಪ್ಪಿಕೊಂಡಿದ್ದಾರೆ ಎಂದು ಸೂಚಿಸುತ್ತದೆ. ಅವರು ಕಂಪನಿಯಲ್ಲಿ ಹಿರಿಯ ಮಾರಾಟ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ತಿಂಗಳಿಗೆ 34,000 ರೂ. ಸಂಬಳ ಪಡೆಯುತ್ತಿದ್ದಾರೆ" ಎಂದು ಡಿಸೆಂಬರ್ 3 ರ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

"ಆದರೆ ಆಕೆಯ ಪಾಟಿ ಸವಾಲಿನಲ್ಲಿ, ಅವರು ತಿಂಗಳಿಗೆ 36,000 ರೂ. ಗಳಿಸುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಬೇರೆ ಯಾವುದೇ ಹೊಣೆಗಾರಿಕೆ ಇಲ್ಲದ ಪತ್ನಿಗೆ ಅಂತಹ ಮೊತ್ತವು ಅಲ್ಪ ಎಂದು ಹೇಳಲಾಗುವುದಿಲ್ಲ; ಆದರೆ ಪುರುಷನು ತನ್ನ ವಯಸ್ಸಾದ ಪೋಷಕರನ್ನು ಮತ್ತು ಇತರ ಸಾಮಾಜಿಕ ಬಾಧ್ಯತೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ" ಎಂಬುದನ್ನು ಹೈಕೋರ್ಟ್ ಗಮನಿಸಿದೆ.

"ಆಕೆ ಒಬ್ಬ ಸಂಪಾದನೆ ಮಾಡುತ್ತಿರುವ ಮಹಿಳೆ ಮತ್ತು ತನ್ನನ್ನು ತಾನು ಪೋಷಿಸಿಕೊಳ್ಳಲು ಸಮರ್ಥಳಾಗಿರುವುದರಿಂದ" ಆ ಮಹಿಳೆ ತನ್ನ ಪತಿಯಿಂದ ಯಾವುದೇ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಹೈಕೋರ್ಟ್ ಗಮನಿಸಿದೆ.

high court
ವಿದ್ಯಾವಂತರಾಗಿದ್ದೀರಿ, ನಿಮಗಾಗಿ ನೀವು ಭಿಕ್ಷೆ ಬೇಡಬಾರದು: ಮನೆ- BMW ಕಾರು,12 ಕೋಟಿ ರೂ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ

ವಿವಾಹಿತ ಪತ್ನಿ ಅಫಿಡವಿಟ್‌ನಲ್ಲಿ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಿಲ್ಲ ಎಂದು ಮಹಿಳೆಯ ಪತಿ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. "ಆಕೆ ತನ್ನನ್ನು ಅನಕ್ಷರಸ್ಥ ಮತ್ತು ನಿರುದ್ಯೋಗಿ ಮಹಿಳೆ ಎಂದು ಹೇಳಿಕೊಂಡಿದ್ದಾಳೆ. ಪುರುಷ ಸಲ್ಲಿಸಿದ ದಾಖಲೆಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ತೋರಿಸಿದಾಗ, ಆಕೆ ತನ್ನ ಆದಾಯವನ್ನು ಪಾಟಿ ಸವಾಲಿನ ಸಮಯದಲ್ಲಿ ಒಪ್ಪಿಕೊಂಡಿದ್ದಾಳೆ. ಹೀಗಾಗಿ, ಅವರು ಶುದ್ಧ ಕೈಗಳಿಂದ ವಿಚಾರಣಾ ನ್ಯಾಯಾಲಯದ ಮುಂದೆ ಬರಲಿಲ್ಲ ಎಂಬುದು ಸ್ಪಷ್ಟವಾಗಿದೆ" ಎಂದು ಪುರುಷನ ವಕೀಲರು ತಮ್ಮ ವಾದಗಳನ್ನು ಮಂಡಿಸುತ್ತಾ ಹೇಳಿದ್ದಾರೆ.

ನ್ಯಾಯಾಲಯ ತನ್ನ ಆದೇಶದಲ್ಲಿ, "ಸತ್ಯವನ್ನು ಗೌರವಿಸದ ಮತ್ತು ವಾಸ್ತವಿಕ ಸಂಗತಿಗಳನ್ನು ನಿಗ್ರಹಿಸುವ ದಾವೆದಾರರ ಪ್ರಕರಣಗಳನ್ನು ನ್ಯಾಯಾಲಯದಿಂದ ಹೊರಹಾಕಬೇಕು" ಎಂದು ಹೇಳಿದೆ.

ಗೌತಮ್ ಬುದ್ಧ ನಗರದ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಫೆಬ್ರವರಿ 17 ರಂದು ನೀಡಿದ್ದ ತೀರ್ಪು ಮತ್ತು ಆದೇಶವನ್ನು ವ್ಯಕ್ತಿ ಪ್ರಶ್ನಿಸಿದ್ದರು ಮತ್ತು ಆತ ಸಲ್ಲಿಸಿದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಹೈಕೋರ್ಟ್ ಅನುಮತಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com