

ಮುಂಬೈ: ಅರ್ಜೆಂಟಿನಾ ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಭಾರತ ಪ್ರವಾಸ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮೆಸ್ಸಿ ಆಗಮನಕ್ಕಿಂತ ಇಲ್ಲಿನ ಪ್ರಭಾವಿ ರಾಜಕಾರಣಿಗಳೇ ಹೆಚ್ಚಾಗಿ ಸದ್ದು ಮಾಡುತ್ತಿದ್ದಾರೆ.
ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸದಲ್ಲಿದ್ದು, ಡಿಸೆಂಬರ್ 13ರ ಶನಿವಾರ ಕೋಲ್ಕತ್ತಾದಲ್ಲಿ ಆರಂಭವಾಗಿದ್ದ ಅವರ ಭಾರತ ಪ್ರವಾಸ, ಬಳಿಕ ಮುಂಬೈಗೂ ತಲುಪಿತ್ತು. ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೆಸ್ಸಿಯ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು.
ಕಾರ್ಯಕ್ರಮವನ್ನು ಸರಿಯಾಗಿ ಆಯೋಜಿಸದ ಆಯೋಜಕರ ವಿರುದ್ಧ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮೈದಾನದ ಕುರ್ಚಿಗಳನ್ನು ಕಿತ್ತೆಸೆದು, ಕೈಗೆ ಸಿಕ್ಕ ವಸ್ತುಗಳನ್ನು ಹೊತ್ತೊಯ್ದರು. ಮೆಸ್ಸಿಯನ್ನು ಕಣ್ತುಂಬಿಕೊಳ್ಳಬೇಕು ಎಂದು ಬಂದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಲಾಗಲಿಲ್ಲ ಎಂದು ಆಕ್ರೋಶದಿಂದ ಭಾರಿ ಗದ್ದಲವನ್ನೇ ಸೃಷ್ಟಿ ಮಾಡಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈ ಘಟನೆಯಿಂದ ಕೋಪಗೊಂಡರು ಮತ್ತು ತನಿಖೆಗೆ ಆದೇಶಿಸಿದರು. ಆದಾಗ್ಯೂ, ಹೈದರಾಬಾದ್‌ನಲ್ಲಿ ಮೆಸ್ಸಿಯ ಕಾರ್ಯಕ್ರಮವು ಚೆನ್ನಾಗಿ ನಡೆಯಿತು. ಇದರ ನಂತರ, ಅವರ ಭಾರತ ಪ್ರವಾಸದ ಎರಡನೇ ದಿನವಾದ ಡಿಸೆಂಬರ್ 15, 2025 ರಂದು, ಮೆಸ್ಸಿ ಮುಂಬೈಗೆ ಬಂದರು. ಅವರನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ನೋಡಲು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು.
ಪ್ರೇಕ್ಷಕರಿಂದ boo, boo... ಮುಜುಗರ ತಪ್ಪಿಸಿದ ಫಡ್ನವಿಸ್ ಚಾಣಾಕ್ಷತನ!
ಇನ್ನು ಈ ಕಾರ್ಯಕ್ರಮದಲ್ಲಿ ಕೆಲ ಮುಜುಗರ ಕ್ಷಣಗಳು ಎದುರಾಯಿತಾದರೂ ಮಹಾ ಸಿಎಂ ದೇವೇಂದ್ರ ಫಡ್ನವಿಸಿ ಅವರು ಅದನ್ನು ಚಾಣಾಕ್ಷತನದಿಂದ ಎದುರಿಸಿದರು. ದೇವೇಂದ್ರ ಫಡ್ನವಿಸ್ ಭಾಷಣ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಅವರಿಗೆ ಬೂ ಬೂ ಎಂದು ಕೂಗಿದರು.
ಇದು ಫಡ್ನಿವಿಸ್ ಅವರ ಮುಜುಗರಕ್ಕೆ ಕಾರಣವಾಯಿತು. ಆದರೆ ಇದನ್ನೂ ಚಾಣಾಕ್ಷತನದಿಂದ ಎದುರಿಸಿದ ಫಡ್ನವಿಸ್ ಗಣಪತಿ ಬಪ್ಪಾ.. ಎಂದು ಕೂಗುವ ಮೂಲಕ ಪ್ರೇಕ್ಷಕರ ಗಮನ ಬೇರೆಡೆ ಸೆಳೆದರು. ಈ ವೇಳೆ ಪ್ರೇಕ್ಷಕರೂ ಕೂಡ ಮೋರಿಯಾ ಎಂದು ಕೂಗಿದರು. ಈ ಮೂವರ ಮೆಸ್ಸಿ ಮುಂದೆ ಫಡ್ನವಿಸ್ ತಮಗಾದ ಮುಜುಗರವನ್ನು ಚಾಣಾಕ್ಷತನದಿಂದ ತಿರುಗಿಸಿದರು.
ಪ್ರೇಕ್ಷಕರ ಕೋಪಕ್ಕೆ ಕಾರಣವೇನು?
ಇನ್ನು ಮುಂಬೈ ಕಾರ್ಯಕ್ರಮದಲ್ಲಿ ಮೆಸ್ಸಿ ಜೊತೆಗೆ ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರನ್ನು ಸನ್ಮಾನಿಸಲಾಯಿತು. ಆದರೆ ಮೆಸ್ಸಿ ನೋಡಲು ಬಂದಿದ್ದ ಅಭಿಮಾನಿಗಳಿಗೆ ಫಡ್ನವಿಸ್ ಅವರ ಈ ನಡೆ ವಿರೋಧಕ್ಕೆ ಕಾರಣವಾಗಿತ್ತು.
ಈ ವೇಳೆ ಟೈಗರ್ ಶ್ರಾಫ್ ಅವರನ್ನು "ಯುವ ಐಕಾನ್" ಎಂದು ಬಣ್ಣಿಸಿದರೆ, ಅಜಯ್ ದೇವಗನ್ ಅವರ ಮೈದಾನ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರನ್ನು ಸನ್ಮಾನಿಸಲಾಯಿತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ಪ್ರೇಕ್ಷಕರು ಬೂಬೂ ಎಂದು ಕೂಗಿದರು. ಇಬ್ಬರೂ ನಟರು ಮೌನವಾಗಿದ್ದರು.
ಆದರೆ ಈ ವೇಳೆ ಫಡ್ನವಿಸ್ ಮಾತ್ರ ಗಣಪತಿ ಬಪ್ಪಾ.. ಎಂದು ಕೂಗಿ ಪ್ರೇಕ್ಷಕರ ಗಮನ ಬೇರೆಡೆ ಸೆಳೆದು ಅವರಿಂದ ಮೋರಿಯಾ ಎಂದು ಹೇಳಿಸಿದರು. ಆ ಮೂಲಕ ಬೂಯಿಂಗ್ ಮರೆಯಾಯಿತು.
ಇನ್ನು ಕಾರ್ಯಕ್ರಮದಲ್ಲಿ ನಟಿ ಕರೀನಾ ಕಪೂರ್ ತಮ್ಮ ಪುತ್ರರೊಂದಿಗೆ ಆಗಮಿಸಿ ಮೆಸ್ಸಿಯೊಂದಿಗೆ ಫೋಟೋಗೆ ಪೋಸ್ ನೀಡಿದರು. ಅಂತೆಯೇ ಸಚಿನ್ ತೆಂಡೂಲ್ಕರ್, ಮೆಸ್ಸಿಗೆ ಟೀಮ್ ಇಂಡಿಯಾ ಜೆರ್ಸಿಯನ್ನು ನೀಡಿದರು. ಪ್ರತಿಯಾಗಿ ಮೆಸ್ಸಿ ಅವರಿಗೆ ಫುಟ್ಬಾಲ್ ಅನ್ನು ಉಡುಗೊರೆಯಾಗಿ ನೀಡಿದರು.
Advertisement