

ಚೆನ್ನೈ: ಚೆನ್ನೈ ರೆಸ್ಟೋರೆಂಟ್ ಒಂದರಿಂದ ಪಡೆದ ಆಹಾರದ ಬಿಲ್‌ಗೆ NRI ಹುಡುಗನ ಪ್ರತಿಕ್ರಿಯೆಯ ರೀಲ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವೀಡಿಯೊದಲ್ಲಿ, ಹುಡುಗ ಡಿಸೆಂಬರ್ 7, 2025 ರಂದು ಗೀತಮ್ ರೆಸ್ಟೋರೆಂಟ್‌ನಿಂದ ಪಡೆದ ಬಿಲ್ ಅನ್ನು ವಿಶ್ಲೇಷಿಸುತ್ತಿರುವುದನ್ನು ಕಾಣಬಹುದು.
ಆತ ತನ್ನ ತಾಯಿಯೊಂದಿಗೆ ರೆಸ್ಟೋರೆಂಟ್ ನಿಂದ ನಿರ್ಗಮಿಸಿದ ನಂತರ ಈ ರೀತಿ ಹೇಳುತ್ತಿರುವುದಾಗಿ ಕಂಡುಬರುತ್ತದೆ. ತಾನು ತಿಂದಿದ್ದ ಊಟಕ್ಕೆ ಅವರು ಪಾವತಿಸಿದ ಮೊತ್ತವನ್ನು ಅರಿತುಕೊಂಡಾಗ ಆತ ನಿಜಕ್ಕೂ ಆಘಾತಕ್ಕೊಳಗಾಗುತ್ತಾನೆ. ಅವರು ಆರ್ಡರ್ ಮಾಡಿದ ಹಲವು ಆಹಾರ ಪದಾರ್ಥಗಳನ್ನು ಪಟ್ಟಿ ಮಾಡುತ್ತಾ ಹೋಗುತ್ತಾನೆ.
ಬಿಲ್‌ನಲ್ಲಿ ಬೇಬಿ ಕಾರ್ನ್ ಮಂಚೂರಿಯನ್, ಬೋಂಡಾ, ದಹಿ ಪಾಪ್ಡಿ, ವಿಶೇಷ ಫಲೂಡಾ, ಇಡ್ಲಿ, ಪನೀರ್ ಮಸಾಲಾ ದೋಸೆ ಮತ್ತು ವೆಜ್ ನೂಡಲ್ಸ್ ಸೇರಿವೆ. ಆತ ತಿನಿಸುಗಳನ್ನು ಎಣಿಸುತ್ತಾನೆ. ಅವುಗಳಲ್ಲಿ ಏಳರ ಬೆಲೆ ಕೇವಲ 30 ನ್ಯೂಜಿಲೆಂಡ್ ಡಾಲರ್ (ರೂ. 1,502) ತಿಳಿದು ಶಾಕ್ ಆಗುತ್ತಾನೆ. ನ್ಯೂಜಿಲೆಂಡ್ ನಲ್ಲಿ ಕೇವಲ 2-3 ಐಟಂಗಳಿಗೆ 200 ಡಾಲರ್ ಇರುತ್ತದೆ. ಆದರೆ ಇದಕ್ಕೆ ಹೋಲಿಸಿದಾಗ ಭಾರತದಲ್ಲಿ ಬೆಲೆಗಳು ಅಗ್ಗವಾಗಿದೆ ಎಂಬುದಾಗಿ ಹೇಳುತ್ತಾನೆ.
ಈ ವೈರಲ್ ವಿಡಿಯೋಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಇವರಲ್ಲಿ ಒಬ್ಬರು ಭಾರತದ ಜನರ ಸ್ಯಾಲರಿ ಸ್ಲೀಪ್ ನ್ನು ಆತನಿಗೆ ತೋರಿಸಲು ಬಯಸುವುದಾಗಿ ಹೇಳಿಕೊಂಡಿದ್ದರೆ, ಮತ್ತೋರ್ವ ಮತ್ತೆ ಆತ ನ್ಯೂಜಿಲೆಂಡ್ ಗೆ ಹೋಗಲ್ಲಅಂತಾ ಜೋಕ್ ಮಾಡಿದ್ದಾರೆ.
Advertisement