

ನವದೆಹಲಿ: ಭಾರತದಲ್ಲಿ ವಾಸಿಸುತ್ತಿರುವ ರಷ್ಯಾದ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅನುಭವವನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಕ್ಸೆನಿಯಾ ಶಕಿರ್ಜಿಯಾನೋವಾ ಎಂಬ ಮಹಿಳೆ, ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ದೇಶದ ಬಗ್ಗೆ ಕೆಲವು ಕಟ್ಟು ಕಥೆಗಳನ್ನು ತಳ್ಳಿಹಾಕಿದ್ದು, ಹಲವು ತಪ್ಪು ಕಲ್ಪನೆಗಳನ್ನು ಬಗೆಹರಿಸಿದ್ದಾರೆ.
ಕಾರಿನಲ್ಲಿ ಸ್ಯಾಂಡ್ ವೀಚ್ ಸೇವಿಸುತ್ತಾ ಮಾತನಾಡುವ, ಶಕಿರ್ಜಿಯಾನೋವಾ, ಕಳೆದ ಮೂರು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದು, ಕೆಲವು ತಪ್ಪು ಕಲ್ಪನೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳುವ ಮೂಲಕ ಮಾತು ಮುಂದುವರೆಸುತ್ತಾರೆ. ಈ ವಿಡಿಯೋಗೆ 67 ಸಾವಿರಕ್ಕೂ ಹೆಚ್ಚು ವೀವ್ಹ್ ಹಾಗೂ 2,000ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.
ಮಿಥ್ಸ್ Vs ರಿಯಾಲಿಟಿ:
1. ಭಾರತೀಯ ಸೂರ್ಯನು ವಿದೇಶಿಯರನ್ನು ತೀವ್ರವಾಗಿ ಬದಲಾಯಿಸುತ್ತಾನೆ ಎಂಬ ಕಲ್ಪನೆಯನ್ನು ಶಕಿರ್ಜಿಯಾನೋವಾ ತಳ್ಳಿಹಾಕಿದ್ದು, ಭಾರತೀಯ ಸೂರ್ಯನು ತೀವ್ರವಾಗಿ ಸುಡುವುದಾಗಿ ಎಲ್ಲರೂ ಹೇಳಿದ್ದರೂ ಸಹ ಇನ್ನೂ ನಾನು ಕಂದುಬಣ್ಣವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.
2. ಭಾರತೀಯ ಆಹಾರದಲ್ಲಿ ಬಳಸುವ ಎಣ್ಣೆಯ ಬಗ್ಗೆ ಎಚ್ಚರಿಕೆಯ ಹೊರತಾಗಿ ನನ್ನ ತೂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
3. ಪ್ರಯಾಣಿಕಳಾಗಿ ಒಮ್ಮೆ ಕೂಡ ಬೈಕ್ ಓಡಿಸಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
4. ದಿನವೂ ಸೀರೆ ಉಡದೇ ಇರುವುದಕ್ಕೆ 'ಶಾಕಿಂಗ್ ಎಂದು ಹೇಳುತ್ತಾ, ನನಗೆ ಗೊತ್ತು ಎಂದು ಜೋಕ್ ಮಾಡಿದ್ದಾರೆ.
5. "ಆಧ್ಯಾತ್ಮಿಕತೆಯತ್ತ ಹೆಚ್ಚಿನ ಒಲವು ತೋರಲಿಲ್ಲ. ಪ್ರತಿ ಉಪಚಾರದಿಂದ ನಾಪತ್ತೆಯಾಗಲಿಲ್ಲ ಎಂದಿದ್ದಾರೆ.
6. ಖಂಡಿತವಾಗಿಯೂ "ದಿನಕ್ಕೆ ಐದು ಬಾರಿ" ಮಸಾಲಾ ಚಾಯ್ ಕುಡಿಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಭಾರತವು ನನ್ನನ್ನು ಸ್ಟೀರಿಯೊಟೈಪ್ ಆಗಿ ಬದಲಾಯಿಸಿಲ್ಲ. ಭಾರತದಲ್ಲಿಯೇ ಉಳಿದಿದ್ದೇನೆ. ನಾನು ನಾನಾಗಿಯೇ ಇದ್ದೀನಿ ಎಂದು ವಿಡಿಯೋದ ಕೊನೆಯಲ್ಲಿ ತಿಳಿಸಿದ್ದಾರೆ.
ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಾಹಾ! ಪ್ರಾಮಾಣಿಕತೆಗೆ ಧನ್ಯವಾದಗಳು! ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿರುವ ಬೇರೆ ದೇಶದವರನ್ನು ನೋಡುವುದು ಸಂತೋಷವಾಗಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ.
Advertisement