
ಲಖನೌ: ಅಯೋಧ್ಯೆಯಲ್ಲಿ ದಲಿತ ಮಹಿಳೆಯನ್ನು ಹತ್ಯೆಗೈದ ಪ್ರಕರಣದಲ್ಲಿ ಪ್ರಮುಖ ಆರೋಪಿ ದಿಗ್ವಿಜಯ್ ಹಾಗೂ ಆತನ ಸಹಚರರಾದ ವಿಜಯ್ ಸಾಹು ಮತ್ತು ಹರಿರಾಮ್ ಕೋರಿ ಎಂಬುವವರನ್ನು ಸೋಮವಾರ ಬಂಧಿಸಲಾಗಿದೆ.
ಎಸ್‌ಎಸ್‌ಪಿ ರಾಜ್‌ಕರನ್ ನಯ್ಯರ್ ಅವರ ಪ್ರಕಾರ, ದಿಗ್ವಿಜಯ್ ಮತ್ತು ಸಂತ್ರಸ್ತೆ ಸಾಹ್ನವಾ ಮೂಲದವರಾಗಿದ್ದಾರೆ.
ಸಂತ್ರಸ್ತೆ ದಿಗ್ವಿಜಯ್ ಜೊತೆ ಸ್ನೇಹ ಹೊಂದಿದ್ದು, ಎರಡು ತಿಂಗಳ ಹಿಂದೆ ಆಕೆಯ ಸಹೋದರ ಆತನೊಂದಿಗೆ ಇದ್ದ ಆಕೆಯನ್ನು ನೋಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತನ್ನ ಸಹೋದರಿಯಿಂದ ದೂರವಿರುವಂತೆ ದಿಗ್ವಿಜಯ್‌ಗೆ ಎಚ್ಚರಿಕೆ ನೀಡಿದ್ದ ಸಹೋದರ, ದಿಗ್ವಿಜಯ್‌ಗೆ ತೀವ್ರವಾಗಿ ಥಳಿಸಿದ್ದನು. ಈ ಘಟನೆಯಿಂದ ಅವಮಾನಗೊಂಡ ದಿಗ್ವಿಜಯ್ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದ್ದಯ ಹೀಗಾಗಿ ಮಹಿಳೆಯನ್ನು ಕೊಂದಿದ್ದಾನೆ ಎನ್ನಲಾಗಿದೆ.
ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಕೊಲ್ಲಲಾಗಿದೆ ಎಂದು ಪೋಷಕರು ಶಂಕಿಸಿದ್ದಾರೆ. ಸಂತ್ರಸ್ತೆಯ ಸಂಬಂಧಿಕರು ನೀಡಿರುವ ಮಾಹಿತಿ ಪ್ರಕಾರ, ಆಕೆ ಭಗವದ್ ಕಥಾ ಕಾರ್ಯಕ್ರಮಕ್ಕೆ ಹೋಗಿದ್ದರು. ಆದರೆ, ಮನೆಗೆ ಹಿಂತಿರುಗಿರಲಿಲ್ಲ. ಆಕೆಗಾಗಿ ಹುಡುಕಾಟ ನಡೆಸಿದಾಗ, ಕಾಲುವೆಯಲ್ಲಿ ಆಕೆಯ ಮೃದೇಹ ಪತ್ತೆಯಾಯಿತು. ಈ ವೇಳೆ ದೇಹದ ಮೇಲೆ ಬಟ್ಟೆಯಿರಲಿಲ್ಲ ಮತ್ತು ಮೈತುಂಬಾ ಗಾಯಗಳಾಗಿದ್ದವು. ಆಕೆಯನ್ನು ನಿರ್ದಯವಾಗಿ ಕೊಲ್ಲಲಾಗಿದೆ' ಎಂದು ಹೇಳಿದ್ದಾರೆ.
22 ವರ್ಷದ ದಲಿತ ಮಹಿಳೆ ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಶನಿವಾರ ಬೆಳಗ್ಗೆ ಗ್ರಾಮದ ಹೊರಗಿನ ಕಾಲುವೆ ಬಳಿ ಮೃತದೇಹ ಪತ್ತೆಯಾಗಿತ್ತು. ಸಂತ್ರಸ್ತೆಯ ಮೃತದೇಹದ ಮೇಲೆ ಅನೇಕ ಗಾಯಗಳು ಮತ್ತು ಕೈಕಾಲುಗಳನ್ನು ಕಟ್ಟಲಾಗಿತ್ತು. ದೇಹವು ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
Advertisement