'ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು': ಅಂಗನವಾಡಿ ಬಾಲಕನ ಬೇಡಿಕೆಗೆ ಉತ್ತರಿಸಿದ ಸಚಿವೆ!

ನೆರೆಯ ಕೇರಳದಲ್ಲಿ ಈ ಘಟನೆ ನಡೆದಿದ್ದು, ಥ್ರಾಜುಲ್ ಎಸ್ ಶಂಕರ್ (Thrajul S Sankar) ಬಾಲಕ ತನ್ನ ತಾಯಿಗೆ 'ಅಂಗನವಾಡಿಯಲ್ಲಿ ಉಪ್ಮಾ ಬದಲು ಬಿರಿಯಾನಿ (Biryani) ಮತ್ತು ಚಿಕನ್ ಫ್ರೈ ಬೇಕು' (chicken fry) ಎಂದು ಕೇಳಿದ್ದಾನೆ.
Kerala Boy Wants Anganwadi To Serve Biryani
ಅಂಗನವಾಡಿ (ಸಂಗ್ರಹ ಚಿತ್ರ)
Updated on

ತಿರುವನಂತಪುರಂ: ಅಂಗವಾಡಿಯಲ್ಲಿ ತಿನ್ನಲು ಉಪ್ಪಿಟ್ಟು ಕೊಟ್ಟಿದ್ದಕ್ಕೆ ನನಗೆ ಉಪ್ಪಿಟ್ಟು ಬೇಡ ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡಿ ಎಂದು ಪುಟ್ಟ ಬಾಲಕ ಕೇಳಿರುವ ವಿಡಿಯೋ ವೈರಲ್ ಆಗುತ್ತಿದೆ.

ನೆರೆಯ ಕೇರಳದಲ್ಲಿ ಈ ಘಟನೆ ನಡೆದಿದ್ದು, ಥ್ರಾಜುಲ್ ಎಸ್ ಶಂಕರ್ (Thrajul S Sankar) ಬಾಲಕ ತನ್ನ ತಾಯಿಗೆ 'ಅಂಗನವಾಡಿಯಲ್ಲಿ ಉಪ್ಮಾ ಬದಲು ಬಿರಿಯಾನಿ (Biryani) ಮತ್ತು ಚಿಕನ್ ಫ್ರೈ ಬೇಕು' (chicken fry) ಎಂದು ಕೇಳಿದ್ದಾನೆ. ಈ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಈ ಬಗ್ಗೆ ಕೇರಳದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಇಷ್ಟಕ್ಕೂ ವಿಡಿಯೋದಲ್ಲೇನಿದೆ?

ವೈರಲ್ ವಿಡಿಯೋದಲ್ಲಿ, ಕ್ಯಾಪ್ ಧರಿಸಿರುವ ಶಂಕು, "ನನಗೆ ಅಂಗನವಾಡಿಯಲ್ಲಿ ಉಪ್ಮಾ ಬದಲಿಗೆ ಬಿರಿಯಾನಿ ಮತ್ತು 'ಪೊರಿಚಾ ಕೋಜಿ' (ಚಿಕನ್ ಫ್ರೈ) ಬೇಕು" ಎಂದು ಹೇಳುತ್ತಿದ್ದಾನೆ. ಈ ಬಾಲಕನ ವಿನಂತಿಯು ಎಷ್ಟು ಗಮನ ಸೆಳೆಯಿತು ಎಂದರೆ ಕೆಲವರು ಅವರಿಗೆ ಬಿರಿಯಾನಿ ಮತ್ತು ಚಿಕನ್ ಫ್ರೈ ಕಳಿಸಲು ಸಹ ಮುಂದಾಗಿದ್ದಾರೆ.

Kerala Boy Wants Anganwadi To Serve Biryani
ಬೆಂಗಳೂರು: ಹಿಟ್ಟಿನೊಳಗೆ ಹುದುಗಿಸಿಟ್ಟಿದ್ದ ಕಚ್ಚಾಬಾಂಬ್ ಸ್ಫೋಟ; ತಿನ್ನಲು ಹೋದ ಎಮ್ಮೆಗೆ ಗಂಭೀರ ಗಾಯ

ಅಂಗನವಾಡಿ ಮೆನು ಚೇಂಜ್?

ಬಾಲಕ ಈ ವಿಡಿಯೋ ವೈರಲ್ ಆಗುತ್ತಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವೆ ವೀಣಾ ಜಾರ್ಜ್, 'ಮಕ್ಕಳ ಪೋಷಣೆಯನ್ನು ಖಚಿತಪಡಿಸಿಕೊಳ್ಳಲು ಅಂಗನವಾಡಿಗಳು ಈಗಾಗಲೇ ವಿವಿಧ ಆಹಾರ ಪದಾರ್ಥಗಳನ್ನು ಒದಗಿಸುತ್ತಿವೆ. ಅದಾಗ್ಯೂ ಈ ಸರ್ಕಾರದ ಅಡಿಯಲ್ಲಿ ಅಂಗನವಾಡಿಗಳ ಮೂಲಕ ಮೊಟ್ಟೆ ಮತ್ತು ಹಾಲು ನೀಡುವ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯದಲ್ಲಿ ಸ್ಥಳೀಯ ಸಂಸ್ಥೆಗಳು ಅಂಗನವಾಡಿಗಳಲ್ಲಿ ವಿವಿಧ ಆಹಾರಗಳನ್ನು ಒದಗಿಸುತ್ತಿವೆ ಎಂದು ಹೇಳಿದ್ದಾರೆ.

ಅಲ್ಲದೆ ಶಂಕು ಅವರ ಸಲಹೆಯನ್ನು ಆಧರಿಸಿ ಅಂಗನವಾಡಿ ಮೆನುವನ್ನು ಪರಿಷ್ಕರಿಸಲು ಸರ್ಕಾರ ಪರಿಗಣಿಸುತ್ತದೆ ಎಂದೂ ವೀಣಾ ಜಾರ್ಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com