ಗುಜರಾತ್: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಿಜೆಪಿ ಶಾಸಕ ಕರ್ಶಣ್‌ಭಾಯ್ ಸೋಲಂಕಿ ನಿಧನ

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿರುವ ಕಾಡಿ ವಿಧಾನಸಭಾ ಕೇತ್ರದಿಂದ 2017 ಹಾಗೂ 2022ರಲ್ಲಿ ಸೋಲಂಕಿ ಗೆಲುವು ಸಾಧಿಸಿದ್ದರು.
Gujarat BJP MLA Karshanbhai Solanki Passes Away
ಕರ್ಶಣ್‌ಭಾಯ್ ಸೋಲಂಕಿ
Updated on

ಗುಜರಾತ್ : ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗುಜರಾತ್ ಬಿಜೆಪಿ ಶಾಸಕ ಕರ್ಶಣ್‌ಭಾಯ್ ಸೋಲಂಕಿ ನಿಧನರಾಗಿದ್ದಾರ. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಮೆಹ್ಸಾನಾ ಜಿಲ್ಲೆಯ ಕಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸೋಲಂಕಿ ಅವರು, ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಕಾಡಿ ತಾಲ್ಲೂಕಿನ ನಾಗರಸನ್‌ನಲ್ಲಿ ಮಧ್ಯಾಹ್ನದ ಬಳಿಕ ನೆರವೇರಿಸಲಾಗುವುದು ಎಂದು ತಿಳಿದು ಬಂದಿದೆ.

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿರುವ ಕಾಡಿ ವಿಧಾನಸಭಾ ಕೇತ್ರದಿಂದ 2017 ಹಾಗೂ 2022ರಲ್ಲಿ ಸೋಲಂಕಿ ಗೆಲುವು ಸಾಧಿಸಿದ್ದರು. ಸೋಲಂಕಿ ಅವರ ನಿಧನಕ್ಕೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂತಾಪ ಸೂಚಿಸಿದ್ದಾರೆ.

ಕಾಡಿ ವಿಧಾನಸಭೆಯ ಭಾರತೀಯ ಜನತಾ ಪಕ್ಷದ ಶಾಸಕ ಕರ್ಶಣ್‌ಭಾಯ್ ಸೋಲಂಕಿ ಅವರ ನಿಧನಕ್ಕೆ ಸಂತಾಪಗಳು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಸ್ಥರು ಹಾಗೂ ಬೆಂಬಲಿಗರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ' ಎಂದು ಪಟೇಲ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Gujarat BJP MLA Karshanbhai Solanki Passes Away
ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ನಿಧನ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com