"ಗ್ಯಾರೆಂಟಿಗಳಿಂದಾಗಿ ಭಾರತದ ಕಾರ್ಮಿಕರು ಉದ್ಯೋಗದ ಮನಸ್ಥಿತಿ ಕಳೆದುಕೊಳ್ಳುತ್ತಿದ್ದಾರೆ": L&T ಅಧ್ಯಕ್ಷರ ಹೇಳಿಕೆ ಮತ್ತೊಂದು ಚರ್ಚೆಗೆ ಗ್ರಾಸ!

ನೇರ ಪ್ರಯೋಜನ ವರ್ಗಾವಣೆ ಮತ್ತು ಜನಧನ್ ಖಾತೆಗಳಂತಹ ಯೋಜನೆಗಳಿಂದಾಗಿ ಕಾರ್ಮಿಕರು ಆರಾಮದಾಯಕ ವಾತಾವರಣವನ್ನು ಬಿಟ್ಟು ಹೊರಬರಲು ಬಯಸುತ್ತಿಲ್ಲ ಎಂದು ಹೇಳಿದ್ದಾರೆ.
S. N. Subrahmanyan
ಎಲ್&ಟಿ ಅಧ್ಯಕ್ಷ ಸುಬ್ರಹ್ಮಣ್ಯನ್online desk
Updated on

ಲಾರ್ಸೆನ್ & ಟೂಬ್ರೊ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಮತ್ತೊಂದು ವಿವಾದದ ಕೇಂದ್ರದಲ್ಲಿದ್ದಾರೆ. ಈ ಬಾರಿ ಸರ್ಕಾರದ ಉಚಿತ ಯೋಜನೆಗಳ ಬಗ್ಗೆ ಮಾತನಾಡಿರುವ ಸುಬ್ರಹ್ಮಣ್ಯನ್, ಉಚಿತ ಯೋಜನೆಗಳ ಲಭ್ಯತೆಯಿಂದಾಗಿ ಕಾರ್ಮಿಕರು ಕೆಲಸ ಮಾಡಲು ಬೇರೆ ಸ್ಥಳಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಸುಬ್ರಹ್ಮಣ್ಯನ್ ಇತ್ತೀಚೆಗೆ ತಮ್ಮ ಸಂಸ್ಥೆಯ ನೌಕರರು ವಾರದಲ್ಲಿ 90 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಹೇಳುವ ಮೂಲಕ ಕೆಲಸ-ಜೀವನ ಸಮತೋಲನದ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದರು.

ಮಂಗಳವಾರ ಚೆನ್ನೈನಲ್ಲಿ ನಡೆದ CII Mystic South Global Linkages Summit (ಮಿಸ್ಟಿಕ್ ಸೌತ್ ಗ್ಲೋಬಲ್ ಲಿಂಕೇಜಸ್ ಶೃಂಗಸಭೆ) 2025 ರಲ್ಲಿ ಮಾತನಾಡಿದ ಸುಬ್ರಹ್ಮಣ್ಯನ್, ಎಂಜಿಎನ್‌ಆರ್‌ಇಜಿಎ (MGNREGA), ನೇರ ಪ್ರಯೋಜನ ವರ್ಗಾವಣೆ ಮತ್ತು ಜನಧನ್ ಖಾತೆಗಳಂತಹ ಯೋಜನೆಗಳಿಂದಾಗಿ ಕಾರ್ಮಿಕರು ಆರಾಮದಾಯಕ ವಾತಾವರಣವನ್ನು ಬಿಟ್ಟು ಹೊರಬರಲು ಬಯಸುತ್ತಿಲ್ಲ, ಇದರ ನೇರ ಪರಿಣಾಮ ಕಾರ್ಮಿಕರನ್ನು ಒಗ್ಗೂಡಿಸಲು ಕಷ್ಟವಾಗುತ್ತಿದ್ದು, ಕಟ್ಟಡ ನಿರ್ಮಾಣ ಕಾಮಗಾರಿಗಳು ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.

ಸೌಕರ್ಯಕ್ಕಾಗಿ ಆದ್ಯತೆ ನೀಡುವ ಕಾರಣದಿಂದಾಗಿ ಕಟ್ಟಡ ನಿರ್ಮಾಣ ಉದ್ಯಮದಲ್ಲಿರುವವರು ತಮ್ಮ ಊರಿಂದ ಬೇರೆಡೆಗೆ ಪ್ರಯಾಣಿಸಲು ಹಿಂಜರಿಯುತ್ತಿದ್ದಾರೆ. ಕಾರ್ಮಿಕರನ್ನು ಪಡೆಯುವುದು ಕಷ್ಟವಾಗುತ್ತಿದೆ ಎಂದು ಸುಬ್ರಹ್ಮಣ್ಯನ್ ಹೇಳಿದ್ದಾರೆ.

"ಕಾರ್ಮಿಕರು ಅವಕಾಶಗಳಿಗಾಗಿ ಸ್ಥಳಾಂತರಗೊಳ್ಳಲು ಇಚ್ಛಿಸುತ್ತಿಲ್ಲ. ಬಹುಶಃ ಅವರ ಸ್ಥಳೀಯ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಬಹುಶಃ ಇದು ವಿವಿಧ ಸರ್ಕಾರಿ ಯೋಜನೆಗಳ ಕಾರಣದಿಂದಾಗಿರಬಹುದು" ಎಂದು ಅವರು ಹೇಳಿದರು. ಕಾರ್ಮಿಕರ ಕೊರತೆಯು ಭಾರತದ ಮೂಲಸೌಕರ್ಯ ನಿರ್ಮಾಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ವಲಸೆಗೆ ಸಂಬಂಧಿಸಿದಂತೆ ವಿಶಿಷ್ಟ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಸುಬ್ರಹ್ಮಣ್ಯನ್ ಹೇಳಿದ್ದು, ಎಲ್ & ಟಿಗೆ 4 ಲಕ್ಷ ಕಾರ್ಮಿಕರ, ಆದರೆ ಕಾರ್ಮಿಕರು ಏಕಾ ಏಕಿ ಬಿಟ್ಟುಹೋದಾಗ ಎದುರಾಗುವ ಕೊರತೆಯಿಂದಾಗಿ 16 ಲಕ್ಷ ಜನರನ್ನು ನೇಮಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಹಣದುಬ್ಬರಕ್ಕೆ ಅನುಗುಣವಾಗಿ ಕಾರ್ಮಿಕರ ವೇತನವನ್ನು ಪರಿಷ್ಕರಿಸುವ ಅಗತ್ಯದ ಬಗ್ಗೆಯೂ ಸುಬ್ರಹ್ಮಣ್ಯನ್ ಇದೇ ವೇಳೆ ಮಾತನಾಡಿದ್ದಾರೆ. ಮಧ್ಯಪ್ರಾಚ್ಯವು ಭಾರತ ನೀಡುವ ಸಂಬಳಕ್ಕಿಂತ ಮೂರರಿಂದ 3.5 ಪಟ್ಟು ಹೆಚ್ಚು ಸಂಬಳದೊಂದಿಗೆ ಕಾರ್ಮಿಕರನ್ನು ಆಕರ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.

S. N. Subrahmanyan
ಭಾನುವಾರದ ರಜೆ ಬಗ್ಗೆ ಬೇಸರ ಇದೆ, ಎಷ್ಟು ಅಂತ ಹೆಂಡ್ತಿ ಮುಖ ನೋಡ್ತಿರಾ? ವಾರಕ್ಕೆ 70 ಅಲ್ಲ 90 ಗಂಟೆ ಕೆಲಸ ಮಾಡಿ: L&T ಚೇರ್ಮನ್ ಸುಬ್ರಹ್ಮಣ್ಯನ್

ಲಾರ್ಸೆನ್ & ಟೂಬ್ರೊ ಅಧ್ಯಕ್ಷರು ಕಳೆದ ತಿಂಗಳು ತಮ್ಮ ಉದ್ಯೋಗಿಗಳು ಭಾನುವಾರವೂ ಕೆಲಸ ಮಾಡಬೇಕೆಂದು ಬಯಸುವುದಾಗಿ ಹೇಳಿದ್ದರು. "ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನಿಮ್ಮ ಹೆಂಡತಿಯನ್ನು ಎಷ್ಟು ಹೊತ್ತು ನೋಡಬಹುದು? ಬನ್ನಿ, ಕಚೇರಿಗೆ ಕೆಲಸ ಮಾಡಲು ಪ್ರಾರಂಭಿಸಿ, ನಾನೂ ಭಾನುವಾರ ಕೆಲಸ ಮಾಡುತ್ತಾರೆ ಎಂದು ಹೇಳಿದ್ದರು.

ಒಬ್ಬ ವ್ಯಕ್ತಿ ಡೆಸ್ಕ್ ನಲ್ಲಿ ದೀರ್ಘಕಾಲ ಕಳೆಯುವುದು ಮಾನಸಿಕ ಯೋಗಕ್ಷೇಮಕ್ಕೆ ಹಾನಿಕಾರಕವಾಗಿದೆ ಮತ್ತು ದಿನಕ್ಕೆ 12 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸದಲ್ಲಿ ಕಳೆಯುವ ವ್ಯಕ್ತಿಗಳು ಮಾನಸಿಕ ಯೋಗಕ್ಷೇಮದ ತೊಂದರೆಗೀಡಾದ ಅಥವಾ ಕಷ್ಟದ ಮಟ್ಟವನ್ನು ಹೊಂದಿರುತ್ತಾರೆ ಎಂದು ಸಮೀಕ್ಷೆಗಳು ಹೇಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com