ಮಾರಣಾಂತಿಕ ಕಾರು ಅಪಘಾತದಲ್ಲಿ ರಿಷಬ್ ಪಂತ್ ಜೀವ ಉಳಿಸಿದ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಪ್ರೇಯಸಿಯೊಂದಿಗೆ ವಿಷ ಸೇವನೆ!

ಕುಟುಂಬದ ವಿರೋಧಕ್ಕೆ ಮನನೊಂದಿದ್ದ ರಜತ್ ಕುಮಾರ್ ಮತ್ತು ಅವರ 21 ವರ್ಷದ ಪ್ರೇಯಸಿ ಮನು ಕಶ್ಯಪ್ ವಿಷ ಸೇವಿಸಿದ್ದಾರೆ.
ರಿಷಬ್ ಪಂತ್
ರಿಷಬ್ ಪಂತ್
Updated on

ಮುಜಾಫರ್‌ನಗರ: 2022ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಭಾರತದ ಕ್ರಿಕೆಟಿಗ ರಿಷಬ್ ಪಂತ್ ಅವರ ಜೀವವನ್ನು ಉಳಿಸಿದ 25 ವರ್ಷದ ರಜತ್ ಕುಮಾರ್, ತನ್ನ ಪ್ರೇಯಸಿಯೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಫೆಬ್ರುವರಿ 9ರಂದು ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಬುಚಾ ಬಸ್ತಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕುಟುಂಬದ ವಿರೋಧಕ್ಕೆ ಮನನೊಂದಿದ್ದ ರಜತ್ ಕುಮಾರ್ ಮತ್ತು ಅವರ 21 ವರ್ಷದ ಪ್ರೇಯಸಿ ಮನು ಕಶ್ಯಪ್ ವಿಷ ಸೇವಿಸಿದ್ದಾರೆ. ಕಶ್ಯಪ್ ಅವರು ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟರೆ, ರಜತ್ ಕುಮಾರ್ ಸದ್ಯ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಜಾತಿ ಕಾರಣದಿಂದಾಗಿ ಎರಡೂ ಕುಟುಂಬಗಳು ಇಬ್ಬರ ಮದುವೆಯನ್ನು ಬೇರೋಬ್ಬರೊಂದಿಗೆ ಏರ್ಪಡಿಸಿದ್ದರು. ಇದುವೇ ಅವರನ್ನು ಆತ್ಮಹತ್ಯೆಗೆ ದೂಡಿದೆ ಎಂದು ಆರೋಪಿಸಲಾಗಿದೆ. ಕಶ್ಯಪ್ ಸಾವಿನ ನಂತರ, ರಜತ್ ಕುಮಾರ್ ತನ್ನ ಮಗಳನ್ನು ಅಪಹರಿಸಿ ವಿಷ ಸೇವಿಸುವಂತೆ ಮಾಡಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.

ರಜತ್ ಕುಮಾರ್ ಅವರು 2022ರ ಡಿಸೆಂಬರ್‌ನಲ್ಲಿ ಸ್ಥಳೀಯ ನಿವಾಸಿಯಾದ ನಿಶು ಕುಮಾರ್ ಅವರೊಂದಿಗೆ ಭಾರತೀಯ ಕ್ರಿಕೆಟ್ ಆಟಗಾರ ರಿಷಬ್ ಪಂತ್ ಅವರನ್ನು ಮಾರಣಾಂತಿಕ ಕಾರು ಅಪಘಾತದಿಂದ ರಕ್ಷಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು. ಪಂತ್ ದೆಹಲಿಯಿಂದ ಉತ್ತರಾಖಂಡಕ್ಕೆ ಕಾರು ಚಲಾಯಿಸುವಾಗ ರೂರ್ಕಿ ಬಳಿ ಅವರ ಮರ್ಸಿಡಿಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು.

ರಿಷಬ್ ಪಂತ್
ಬೆಂಕಿ ಹೊತ್ತಿಕೊಂಡಿದ್ದ ಕಾರಿನ ಕ್ಲಾಸ್ ಹೊಡೆದು ಹೊರಬಂದು ಜೀವ ಉಳಿಸಿಕೊಂಡ ರಿಷಬ್ ಪಂತ್: ಅಪಘಾತದ ಭೀಕರ ಚಿತ್ರಗಳು!

ಸಮೀಪದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರು ಅಪಘಾತವನ್ನು ಕಂಡು ಸಹಾಯ ಮಾಡಲು ಧಾವಿಸಿದರು. ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಪಂತ್ ಅವರನ್ನು ಹೊರಗೆಳೆದು ತುರ್ತು ವೈದ್ಯಕೀಯ ಸಹಾಯಕ್ಕಾಗಿ ವ್ಯವಸ್ಥೆ ಮಾಡಿದ್ದರು. ಅವರ ಕಾರ್ಯಕ್ಕೆ ಮೆಚ್ಚುಗೆಯ ಸಂಕೇತವಾಗಿ ಪಂತ್, ಅವರಿಬ್ಬರಿಗೂ ಸ್ಕೂಟರ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com