
ನವದೆಹಲಿ: ಭಾರತದಲ್ಲಿ 29,500 ಕ್ಕೂ ಹೆಚ್ಚು ಡ್ರೋನ್‌ಗಳು ನೋಂದಾಯಿಸಲ್ಪಟ್ಟಿವೆ. ರಾಷ್ಟ್ರ ರಾಜಧಾನಿಯಲ್ಲಿ ಅತಿ ಹೆಚ್ಚು 4,882 ಡ್ರೋನ್ ಗಳು ನೊಂದಾಯಿಸಲ್ಪಿಟ್ಟಿದ್ದರೆ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 4,588 ಮತ್ತು 4,132 ಡ್ರೋನ್ ಗಳಿವೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಜನವರಿ 29 ರವರೆಗೆ ಪರಿಷ್ಕರಿಸಿದ ಮಾಹಿತಿಯಂತೆ 29,501 ನೋಂದಾಯಿತ ಡ್ರೋನ್‌ಗಳಿವೆ.
ನಾಗರಿಕ ವಿಮಾನಯಾನ ಸಚಿವಾಲಯವು ಈ ವಾರ ರಾಜ್ಯಸಭೆಯಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, ಹೆಚ್ಚಿನ ಸಂಖ್ಯೆಯ ನೋಂದಾಯಿತ ಡ್ರೋನ್‌ಗಳನ್ನು ಹೊಂದಿರುವ ಇತರ ರಾಜ್ಯಗಳಲ್ಲಿ ಹರಿಯಾಣ (3,689), ಕರ್ನಾಟಕ (2,516), ತೆಲಂಗಾಣ (1,928), ಗುಜರಾತ್ (1,338) ಮತ್ತು ಕೇರಳ (1,318) ಡ್ರೋನ್ ಗಳು ಸೇರಿವೆ.
ಇಲ್ಲಿಯವರೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿವಿಧ ಮಾನವರಹಿತ ವಿಮಾನ ವ್ಯವಸ್ಥೆಯ ಮಾದರಿಗಳು ಅಥವಾ ಡ್ರೋನ್‌ಗಳಿಗೆ 96 ಪ್ರಕಾರದ ಪ್ರಮಾಣಪತ್ರಗಳನ್ನು ನೀಡಿದೆ. ಅವುಗಳಲ್ಲಿ 65 ಮಾದರಿಗಳು ಕೃಷಿ ಉದ್ದೇಶಕ್ಕಾಗಿವೆ.
ಪ್ರತಿ ನೋಂದಾಯಿತ ಡ್ರೋನ್‌ಗೆ ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಿಂದ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಇದನ್ನು DGCA ನಿರ್ವಹಿಸುತ್ತದೆ. DGCAಯಿಂದ ಮಾನ್ಯತೆಗೊಂಡ ರಿಮೋಟ್ ಪೈಲಟ್ ತರಬೇತಿ ಸಂಸ್ಥೆಗಳು 22,466 ರಿಮೋಟ್ ಪೈಲಟ್ ಪ್ರಮಾಣಪತ್ರಗಳನ್ನು ನೀಡಿವೆ.
ರಾಜ್ಯಸಭೆಯಲ್ಲಿ ಲಿಖಿತವಾಗಿ ಈ ಮಾಹಿತಿ ಹಂಚಿಕೊಂಡ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್, ಕೇಂದ್ರ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ. ಸಚಿವಾಲಯವು ಕಳೆದ ವರ್ಷ ಆಗಸ್ಟ್‌ನಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಡ್ರೋನ್‌ನ ನೋಂದಣಿ ಮತ್ತು ಮರು ನೋಂದಣಿ ಅಥವಾ ವರ್ಗಾವಣೆಗಾಗಿ ಪಾಸ್‌ಪೋರ್ಟ್‌ನ ಅಗತ್ಯವನ್ನು ರದ್ದುಗೊಳಿಸಲಾಯಿತು ಎಂದು ತಿಳಿಸಿದರು.
Advertisement