ದಶಕಗಳ ಕಾಲ ಭಾರತಕ್ಕೆ USAID ನೆರವು: ಸರ್ಕಾರಕ್ಕೆ ಶ್ವೇತಪತ್ರ ಹೊರಡಿಸಲು ಕಾಂಗ್ರೆಸ್ ಆಗ್ರಹ

USAID ಗೆ ಸಂಬಂಧಿಸಿದ US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಕಾಂಗ್ರೆಸ್ "ಅಸಂಬದ್ಧ" ಎಂದು ಕರೆದಿದೆ.
Jairam Ramesh
ಜೈರಾಮ್ ರಮೇಶ್ online desk
Updated on

ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು USAID (ಯುಎಸ್ ಏಡ್) ಹಣಕಾಸು ನೆರವು ನೀಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಭಾರತ ಸರ್ಕಾರ ಈ ವಿಷಯವಾಗಿ ಶ್ವೇತಪತ್ರ ಪ್ರಕಟಿಸಬೇಕು ಎಂದು ಆಗ್ರಹಿಸಿದೆ.

ದಶಕಗಳಲ್ಲಿ ಭಾರತದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ US ಏಜೆನ್ಸಿಯ ಬೆಂಬಲದ ಕುರಿತು ಶ್ವೇತಪತ್ರವನ್ನು ಹೊರಡಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

USAID ಗೆ ಸಂಬಂಧಿಸಿದ US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಕಾಂಗ್ರೆಸ್ "ಅಸಂಬದ್ಧ" ಎಂದು ಕರೆದಿದೆ. "ಮತದಾರರ ಮತದಾನ"ಕ್ಕಾಗಿ ಭಾರತಕ್ಕೆ USD 21 ಮಿಲಿಯನ್ ನೀಡುವ ಉದ್ದೇಶವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ ನಂತರ ವಿರೋಧ ಪಕ್ಷದ ಹೇಳಿಕೆ ಬಂದಿದೆ.

"ಭಾರತದಲ್ಲಿ ಮತದಾನ ಹೆಚ್ಚಿಸಲು ನಾವು USD 21 ಮಿಲಿಯನ್ ಖರ್ಚು ಮಾಡಬೇಕೇ? ಈ ರೀತಿಯ ನೆರವು ನೀಡುವುದರಿಂದ ಅಧಿಕಾರದಲ್ಲಿ ತಮಗೆ ಬೇಕಾದವರನ್ನು ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ" ಎಂದು ಟ್ರಂಪ್ ಹೇಳಿದ್ದಾರೆ.

X ಪೋಸ್ಟ್‌ನಲ್ಲಿ ಬರೆದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ-ಪ್ರಭಾರ ಸಂವಹನ ಜೈರಾಮ್ ರಮೇಶ್, "USAID ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಲ್ಲಿದೆ. ಇದನ್ನು ನವೆಂಬರ್ 3, 1961 ರಂದು ಸ್ಥಾಪಿಸಲಾಯಿತು. US ಅಧ್ಯಕ್ಷರು ಈ ಕುರಿತ ಹೇಳಿಕೆಗಳು ಅಸಂಬದ್ಧವಾಗಿವೆ." ಎಂದು ಹೇಳಿದ್ದಾರೆ.

ಇಂತಹ ಹೇಳಿಕೆಗಳು ಅಸಂಬದ್ಧವಾಗಿದ್ದರೂ, ಭಾರತ ಸರ್ಕಾರ ದಶಕಗಳಲ್ಲಿ ಭಾರತದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ USAID ನೀಡಿದ ಬೆಂಬಲವನ್ನು ವಿವರಿಸುವ ಶ್ವೇತಪತ್ರವನ್ನು ಆದಷ್ಟು ಬೇಗ ಹೊರತರಬೇಕು" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಫೆಬ್ರವರಿ 16 ರಂದು, ಬಿಲಿಯನೇರ್ ಸ್ಪೇಸ್‌ಎಕ್ಸ್ ಸಿಇಒ ಮಸ್ಕ್ ನೇತೃತ್ವದ ಸರ್ಕಾರಿ ದಕ್ಷತೆ ಇಲಾಖೆ (DOGE), "ಯುಎಸ್ ತೆರಿಗೆದಾರರ ಡಾಲರ್‌ಗಳಲ್ಲಿ ಅನವಶ್ಯಕವಾಗಿ ಖರ್ಚು ಮಾಡಲಾಗುತ್ತಿರುವ ಅಂಶಗಳನ್ನು ಪಟ್ಟಿ ಮಾಡಿತು ಮತ್ತು ಆ ಪಟ್ಟಿಯಲ್ಲಿ "ಭಾರತದಲ್ಲಿ ಮತದಾರರ ಮತದಾನಕ್ಕಾಗಿ USD 21M" ಸೇರಿದೆ.

DOGE ನ ಈ ಕ್ರಮದ ಬೆನ್ನಲ್ಲೇ ಭಾರತ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿಗೆ ಸಿಗುತ್ತಿದ್ದ ಹಣಕಾಸಿನ ನೆರವನ್ನು ಸ್ಥಗಿತಗೊಳಿಸಲಾಗಿತ್ತು.

Jairam Ramesh
ಭಾರತಕ್ಕೆ ಎಲೋನ್ ಮಸ್ಕ್ ಶಾಕ್: 21 ಮಿಲಿಯನ್ ಡಾಲರ್ ನೆರವು ನಿಲ್ಲಿಸಿದ DOGE!

ಮಂಗಳವಾರ ಮಾರ್-ಎ-ಲಾಗೊದಲ್ಲಿ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುವಾಗ ಟ್ರಂಪ್, "ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು 21 ಮಿಲಿಯನ್ ಡಾಲರ್ ನೀಡಲಾಗುತ್ತಿತ್ತು. ನಾವು ಭಾರತಕ್ಕೆ 21 ಮಿಲಿಯನ್ ಡಾಲರ್ ಏಕೆ ನೀಡುತ್ತಿದ್ದೇವೆ? ಅವರಿಗೆ ಅಲ್ಲಿ ಬಹಳಷ್ಟು ಹಣ ಸಿಕ್ಕಿತು. ನಮ್ಮ ವಿಷಯದಲ್ಲಿ ಭಾರತ ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಒಂದಾಗಿದೆ. ಅವರ ಸುಂಕಗಳು ತುಂಬಾ ಹೆಚ್ಚಿರುವುದರಿಂದ ನಮ್ಮ ವ್ಯಾಪಾರ ಅಲ್ಲಿಗೆ ಹೋಗಲು ಸಾಧ್ಯವಿಲ್ಲ" ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com