'ನಿಮಗೆ ನಾನು ಬೇಡ ಎಂದರೆ.. ನನಗೆ ಬೇರೆ ಅವಕಾಶಗಳಿವೆ': ಕಾಂಗ್ರೆಸ್ ಗೆ Shashi Tharoor ಬಹಿರಂಗ ಸವಾಲು!

ಶಶಿತರೂರ್ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಬಿಕ್ಕಟ್ಟು ಇದೀಗ ತೀವ್ರ ಸ್ವರೂಪ ಪಡೆಯುವತ್ತ ಸಾಗಿದ್ದು, ಈ ಹಿಂದೆ ಎಡಿಎಫ್ ಸರ್ಕಾರವನ್ನು ಹೊಗಳಿದ್ದ ಶಶಿತರೂರ್ ಇದೀಗ ನೇರವಾಗಿ ಕಾಂಗ್ರೆಸ್ ಪಕ್ಷಕ್ಕೇ ಬಹಿರಂಗ ಸವಾಲೆಸೆಯುತ್ತಿದ್ದಾರೆ.
Shashi Tharoor
ಶಶಿತರೂರ್
Updated on

ತಿರುವನಂತಪುರ: ಪಕ್ಷಕ್ಕೆ ನಾನು ಬೇಡ ಎಂದರೆ ನನಗೆ ಬೇರೆ ಬೇರೆ ಅವಕಾಶಗಳಿವೆ ಎಂದು ಹೇಳುವ ಮೂಲಕ ಸಂಸದ ಶಶಿತರೂರ್ ಎಐಸಿಸಿಗೆ ಬಹಿರಂಗ ಸವಾಲೆಸೆದಿದ್ದಾರೆ.

ಶಶಿತರೂರ್ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಬಿಕ್ಕಟ್ಟು ಇದೀಗ ತೀವ್ರ ಸ್ವರೂಪ ಪಡೆಯುವತ್ತ ಸಾಗಿದ್ದು, ಈ ಹಿಂದೆ ಎಡಿಎಫ್ ಸರ್ಕಾರವನ್ನು ಹೊಗಳಿದ್ದ ಶಶಿತರೂರ್ ಇದೀಗ ನೇರವಾಗಿ ಕಾಂಗ್ರೆಸ್ ಪಕ್ಷಕ್ಕೇ ಬಹಿರಂಗ ಸವಾಲೆಸೆಯುತ್ತಿದ್ದಾರೆ. ಬುಧವಾರ ಬಿಡುಗಡೆಯಾಗಲಿರುವ ಇಂಡಿಯನ್ ಎಕ್ಸ್‌ಪ್ರೆಸ್‌ನ ಮಲಯಾಳಂ ಭಾಷೆಯ ಪಾಡ್‌ಕ್ಯಾಸ್ಟ್ 'ವರ್ತಮಾನಂ' ನಲ್ಲಿ ಕೇರಳದಲ್ಲಿ ಕಾಂಗ್ರೆಸ್ ನಾಯಕರ ಅನುಪಸ್ಥಿತಿಯನ್ನು ಅವರು ಟೀಕಿಸಿದರು. ಪಾಡ್‌ಕ್ಯಾಸ್ಟ್‌ನ ಟೀಸರ್ ಈಗಾಗಲೇ ಹೊರಬಂದಿದ್ದು, ಟೀಸರ್ ನಲ್ಲೇ ಕಾಂಗ್ರೆಸ್ ವಿರುದ್ಧ ಶಶಿತರೂರ್ ಕಿಡಿಕಾರಿರುವುದು ಬೆಳಕಿಗೆ ಬಂದಿದೆ.

'ಕಾಂಗ್ರೆಸ್ ಪಕ್ಷವು ಶಶಿ ತರೂರ್ ಅವರ ಸೇವೆಗಳನ್ನು ಬಯಸದಿದ್ದರೆ, ನನಗೆ ಮಾಡಲು ಬೇರೆ ಕೆಲಸಗಳಿವೆ. ರಾಜ್ಯದ ಅಭಿವೃದ್ಧಿಯ ಬಗ್ಗೆ ತಮ್ಮನ್ನು ತಾವು ವ್ಯಕ್ತಪಡಿಸುವ ಹಕ್ಕನ್ನು ಜನರು ಬೆಂಬಲಿಸಿದ್ದಾರೆ. ಪಕ್ಷ ನನ್ನನ್ನು ಬಯಸಿದರೆ ನಾನು ಪಕ್ಷಕ್ಕಾಗಿ ಇರುತ್ತೇನೆ. ಇಲ್ಲದಿದ್ದರೆ, ನನಗೆ ನನ್ನದೇ ಆದ ಕೆಲಸಗಳಿವೆ. ಸಮಯ ಕಳೆಯಲು ನನಗೆ ಯಾವುದೇ ಆಯ್ಕೆ ಇಲ್ಲ ಎಂದು ನೀವು ಭಾವಿಸಬಾರದು. ನನಗೆ ಆಯ್ಕೆಗಳಿವೆ. ನನ್ನ ಪುಸ್ತಕಗಳು, ಭಾಷಣಗಳು, ಪ್ರಪಂಚದಾದ್ಯಂತ ಮಾತುಕತೆಗಾಗಿ ಆಹ್ವಾನಗಳು ನನ್ನ ಬಳಿ ಇವೆ ಎಂದು ಹೇಳಿದರು.

Shashi Tharoor
ಕಾಂಗ್ರೆಸ್ ಜೊತೆ ಬಿರುಕು ಮೂಡಿರುವ ವದಂತಿ; ರಹಸ್ಯ ಪೋಸ್ಟ್ ಹಂಚಿಕೊಂಡ ಶಶಿ ತರೂರ್

ಅಂತೆಯೇ 2024 ರ ರಾಷ್ಟ್ರೀಯ ಚುನಾವಣೆಗಳು ಕಾಂಗ್ರೆಸ್ ಪುನರುಜ್ಜೀವನವನ್ನು ಕಂಡವು, ಆದರೆ ನಂತರದ ರಾಜ್ಯ ಚುನಾವಣೆಗಳಲ್ಲಿ ಅದು ಪ್ರತಿಫಲಿಸಲಿಲ್ಲ. ಕೇರಳದಲ್ಲಿ ಕಾಂಗ್ರೆಸ್ ತನ್ನ ಆಕರ್ಷಣೆಯನ್ನು ವಿಸ್ತರಿಸಬೇಕಾಗಿದೆ, ಇಲ್ಲದಿದ್ದರೆ ಸತತ ಮೂರನೇ ಬಾರಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ತನ್ನ ಬದ್ಧ ಬೆಂಬಲ ನೆಲೆಯ ಬೆಂಬಲದೊಂದಿಗೆ ಮಾತ್ರ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ . ರಾಷ್ಟ್ರೀಯ ಮಟ್ಟದಲ್ಲಿ, ಕಾಂಗ್ರೆಸ್ ಮತಗಳು ಸುಮಾರು 19% ರಷ್ಟಿತ್ತು. ನಮ್ಮ ಸ್ವಂತ ಮತ ನೆಲೆಯೊಂದಿಗೆ ನಾವು ಚೆನ್ನಾಗಿರುತ್ತೇವೆಯೇ? ನಾವು 26-27% ಹೆಚ್ಚುವರಿ ಪಡೆದರೆ ಮಾತ್ರ ನಾವು ಅಧಿಕಾರಕ್ಕೆ ಬರಬಹುದು. ಕಳೆದ ಎರಡು ಚುನಾವಣೆಗಳಲ್ಲಿ ನಮ್ಮನ್ನು ಬೆಂಬಲಿಸದವರು ನಮಗೆ ಬೇಕು. ನಾನು ಅಮೆರಿಕದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದೆ ಮತ್ತು ಬಹಳಷ್ಟು ಹಣವನ್ನು ಸಂಪಾದಿಸುತ್ತಿದ್ದೆ. ನಾನು ಈ ದೇಶಕ್ಕೆ ಸೇವೆ ಸಲ್ಲಿಸಲು ಹಿಂತಿರುಗಿದೆ" ಎಂದು ಅವರು ಹೇಳಿದರು.

Shashi Tharoor
Invest Karnataka 2025: ಮೋದಿ ಸರ್ಕಾರದ ಉಚಿತ ಆಹಾರ ಧಾನ್ಯ ವಿತರಣೆ ಯೋಜನೆ ವಿಫಲ- ಶಶಿ ತರೂರ್

ತರೂರ್ ವಿವಾದ

ತಮ್ಮ ತವರು ರಾಜ್ಯ ಕೇರಳದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ತರೂರ್, ಕೇರಳದಲ್ಲಿ ಸಿಪಿಎಂ ನೀತಿಗಳು ಮತ್ತು ರಾಜ್ಯದ ಬೆಳವಣಿಗೆಯನ್ನು ಶ್ಲಾಘಿಸುವ ಮೂಲಕ ತಮ್ಮ ದೇ ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕಾಗಿ ಅವರ ವಿರುದ್ಧ ಟೀಕೆಗಳು ಬಂದಿವೆ. ಇತ್ತೀಚೆಗೆ ಎಲ್‌ಡಿಎಫ್ ಸರ್ಕಾರವು ಕೇರಳ ಆರ್ಥಿಕತೆಯನ್ನು ನಿರ್ವಹಿಸುತ್ತಿರುವುದನ್ನು ಪತ್ರಿಕೆಯ ಲೇಖನದಲ್ಲಿ ಶ್ಲಾಘಿಸಿದ ನಂತರ ಕೇರಳ ಕಾಂಗ್ರೆಸ್ ವಿದ್ಯಾಮಾನಗಳು ಗರಿಗೆದರಿದ್ದವು. ಎಡಪಂಥೀಯರು ಅವರ ಹೇಳಿಕೆಗಳನ್ನು ಸ್ವಾಗತಿಸಿದರೆ, ಅವರದ್ದೇ ಪಕ್ಷದ ನಾಯಕರು ಅದರ ವಿರುದ್ಧ ಅಪಸ್ವರ ತೆಗೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com