TNIE ಅಂಕಣ, ಆಂತರಿಕ ಬಿಕ್ಕಟ್ಟು: ಸಂಸದ ಶಶಿ ತರೂರ್ ಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್!

ಕಳೆದ ವಾರ ರಾಹುಲ್ ಗಾಂಧಿ ಅವರೊಂದಿಗೆ ತರೂರ್ ಅವರ ವೈಯಕ್ತಿಕ ಸಭೆಯ ನಂತರ ಇದು ಈ ಸಮನ್ಸ್ ಬಂದಿದೆ.
Shashi Tharoor's TNIE column triggers controversy
ಕಾಂಗ್ರೆಸ್ ಸಂಸದ ಶಶಿ ತರೂರ್
Updated on

ನವದೆಹಲಿ: ಎಲ್‌ಡಿಎಫ್ ಸರ್ಕಾರದ ಅಭಿವೃದ್ಧಿ ಉಪಕ್ರಮಗಳನ್ನು ಶ್ಲಾಘಿಸಿ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಬರೆದಿದ್ದ ಅಭಿಪ್ರಾಯ ಲೇಖನದ ವಿವಾದ ಕಾಂಗ್ರೆಸ್ ನಲ್ಲಿ ವ್ಯಾಪಕ ಚಟುವಟಿಕೆಗಳಿಗೆ ಕಾರಣವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಕೇರಳದ ಹಿರಿಯ ನಾಯಕ ಮತ್ತು ಸಂಸದ ಶಶಿ ತರೂರ್ ಗೆ ಸಮನ್ಸ್ ಜಾರಿ ಮಾಡಿದೆ.

ವಿವಾದಿತ ಲೇಖನದ ಕುರಿತು ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಶಶಿತರೂರ್ ಗೆ ಸಮನ್ಸ್ ಜಾರಿ ಮಾಡಿದೆ. ಶುಕ್ರವಾರ ನಡೆಯಲಿರುವ ಸಭೆಯು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಹೊಸ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ನಡೆಯಲಿದೆ. ಕೇರಳ ರಾಜ್ಯದಲ್ಲಿ ನಿರ್ಣಾಯಕ ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಆಂತರಿಕ ಕಲಹವನ್ನು ಶಮನಗೊಳಿಸುವ ಮಾರ್ಗಗಳನ್ನು ಚರ್ಚಿಸುವ ಸಾಧ್ಯತೆಯಿದೆ.

ರಾಜ್ಯದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿ ತರೂರ್, ಕೋಡಿಕುನ್ನಿಲ್ ಸುರೇಶ್, ರಮೇಶ್ ಚೆನ್ನಿತ್ತಲ, ಮತ್ತು ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್, ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇತರ ಹಿರಿಯ ನಾಯಕರಾದ ಮುಲ್ಲಪ್ಪಳ್ಳಿ ರಾಮಚಂದ್ರನ್, ಯುಡಿಎಫ್ ಸಂಚಾಲಕ ಎಂ ಎಂ ಹಸನ್ ಮತ್ತು ವಿ ಎಂ ಸುಧೀರನ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

Shashi Tharoor's TNIE column triggers controversy
'ನಿಮಗೆ ನಾನು ಬೇಡ ಎಂದರೆ.. ನನಗೆ ಬೇರೆ ಅವಕಾಶಗಳಿವೆ': ಕಾಂಗ್ರೆಸ್ ಗೆ Shashi Tharoor ಬಹಿರಂಗ ಸವಾಲು!

ಕಳೆದ ವಾರ ರಾಹುಲ್ ಗಾಂಧಿ ಅವರೊಂದಿಗೆ ತರೂರ್ ಅವರ ವೈಯಕ್ತಿಕ ಸಭೆಯ ನಂತರ ಇದು ಈ ಸಮನ್ಸ್ ಬಂದಿದೆ. ರಾಷ್ಟ್ರಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿರುವುದಕ್ಕೆ ತರೂರ್ ತಮ್ಮ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಆದಾಗ್ಯೂ, ರಾಹುಲ್ ಗಾಂಧಿ ಜೊತೆಗಿನ ಸಭೆಯಲ್ಲಿ ಏನಾಯಿತು ಎಂಬುದನ್ನು ತರೂರ್ ಈ ವರೆಗೂ ಬಹಿರಂಗಪಡಿಸಿಲ್ಲ.

ಈ ವಾರದ ಆರಂಭದಲ್ಲಿ, ಕೇರಳ ರಾಜ್ಯ ಘಟಕದಲ್ಲಿ ನಾಯಕತ್ವದ ನಿರ್ವಾತದ ಬಗ್ಗೆ ತರೂರ್ ಅವರ ಸಾರ್ವಜನಿಕ ಟೀಕೆ ಮತ್ತು 2026 ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದ ಮುಖವಾಗಿ ಅವರನ್ನು ಬಿಂಬಿಸಿಕೊಳ್ಳುತ್ತಿರುವುದು ಪಕ್ಷವನ್ನು ಕೆರಳಿಸಿದೆ. ಏತನ್ಮಧ್ಯೆ, TNIE ಜೊತೆ ಮಾತನಾಡಿದ ಹಿರಿಯ ನಾಯಕರೊಬ್ಬರು, ಸಭೆಯು ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷದ ಸಿದ್ಧತೆಗಳ ಮೇಲೆ ಕೇಂದ್ರೀಕರಿಸುತ್ತದೆ. ನಾಯಕತ್ವವು ಬಣಗಳ ನಡುವಿನ ಕಲಹ ಮತ್ತು ಉನ್ನತ ನಾಯಕರ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆಯೂ ಚರ್ಚಿಸಬಹುದು ಎಂದು ಹೇಳಿದರು.

Shashi Tharoor's TNIE column triggers controversy
ಕಾಂಗ್ರೆಸ್ ಜೊತೆ ಬಿರುಕು ಮೂಡಿರುವ ವದಂತಿ; ರಹಸ್ಯ ಪೋಸ್ಟ್ ಹಂಚಿಕೊಂಡ ಶಶಿ ತರೂರ್

ಇಂಡಿಯನ್ ಎಕ್ಸ್‌ಪ್ರೆಸ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದ ತಿರುವನಂತಪುರಂ ಸಂಸದರು ಪಕ್ಷಕ್ಕೆ ತಮ್ಮ ಸೇವೆಗಳು ಅಗತ್ಯವಿಲ್ಲದಿದ್ದರೆ ತಮಗೆ ಇತರ 'ಆಯ್ಕೆಗಳು' ಇವೆ ಎಂದು ಹೇಳಿದ್ದರು. ಅವರ ಈ ಹೇಳಿಕೆಗಳು ಈಗಾಗಲೇ ಸದಸ್ಯರಲ್ಲಿ ತೀವ್ರ ಒಳಜಗಳವನ್ನು ಎದುರಿಸುತ್ತಿರುವ ಕಾಂಗ್ರೆಸ್ ಶಿಬಿರದಲ್ಲಿ ಗರಿಗಳನ್ನು ಕೆರಳಿಸಿವೆ. ನಾಲ್ಕು ಬಾರಿ ಸಂಸದರಾಗಿರುವ ಅವರು ರಾಜ್ಯ ಘಟಕದಿಂದ ಟೀಕೆಗೆ ಗುರಿಯಾಗಿದ್ದರು.

ಆದಾಗ್ಯೂ, ತರೂರ್ ತಮ್ಮ ಲೇಖನದಲ್ಲಿ ಯಾವುದೇ ರಾಜಕೀಯ ಉಲ್ಲೇಖಗಳಿಲ್ಲ ಮತ್ತು ಅವರ ಗಮನವು ಕೇರಳದ ಉದ್ಯಮಶೀಲ ಬೆಳವಣಿಗೆಯ ಮೇಲೆ ಮಾತ್ರ ಎಂದು ಹೇಳಿಕೊಂಡರು. ಆಡಳಿತಾರೂಢ ಸಿಪಿಐ (ಎಂ) ಅವರ ಹೇಳಿಕೆಗಳನ್ನು ಪೂರ್ಣ ಹೃದಯದಿಂದ ಸ್ವಾಗತಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com