ವಿವಾಹಿತ ಹಿಂದೂ ಮಹಿಳೆ ಮೇಲೆ ನಿರಂತರ ಅತ್ಯಾಚಾರ, ಮತಾಂತರಕ್ಕೆ ಒತ್ತಾಯ; ಕೊನೆಗೂ ದುಷ್ಕರ್ಮಿ ಬಂಧನ!

ಹಿಂದೂ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ಇಮ್ರಾನ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
Rape
ಸಾಂದರ್ಭಿಕ ಚಿತ್ರ
Updated on

ಘಾಜಿಯಾಬಾದ್: ವಿವಾಹಿತ ಹಿಂದೂ ಮಹಿಳೆಯೊಬ್ಬರ ಮೇಲೆ ನಿರಂತರ ಅತ್ಯಾಚಾರವೆಸಗಿ ಆಕೆಯನ್ನು ಮತಾಂತರ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಇಮ್ರಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಇಮ್ರಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಹಿಂದೂ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ಇಮ್ರಾನ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ ವಿವಾಹಿತ ಮಹಿಳೆ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದ. ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದ. ಆರೋಪಿಯು ಜನವರಿ 9 ರಂದು ತನ್ನೊಂದಿಗೆ ಬರಲು ಮಹಿಳೆಗೆ ಆಮಿಷವೊಡ್ಡಿದ್ದ, ಆಕೆಯನ್ನು ಬಲವಂತಾಗಿ ಕರೆದೊಯ್ದಿದ್ದ. ಈ ಬಗ್ಗೆ ಮಾಹಿತಿ ಪಡೆದ ಪತಿಯ ದೂರಿನ ಮೇರೆಗೆ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡು ಆರೋಪಿ ಇಮ್ರಾನ್‌ ಎಂಬಾ ನನ್ನು ಬಂಧಿಸಿದ್ದು, ಮಹಿಳೆಯನ್ನು ರಕ್ಷಿಸಿದ್ದಾರೆ.

ಇಮ್ರಾನ್ ತನ್ನ ಧರ್ಮ ಗುರುಗಳಿಗೆ ಆಕೆಯನ್ನು ಪರಿಚಯಿಸಿ ನಮಾಜ್ ಮಾಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಇದಲ್ಲದೆ ಸಂತ್ರಸ್ತೆ ಚಿನ್ನಾಭರಣ ಮತ್ತು ನಗದು ಸಹಿತ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ. ಜನವರಿ 24 ರಂದು ಸೆಕ್ಷನ್ 87 ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.

Rape
ಗೀಸರ್ ನಲ್ಲಿ ರಹಸ್ಯ ಕ್ಯಾಮೆರಾ; ಸ್ನಾನದ Video ತೋರಿಸಿ ಬ್ಲಾಕ್ ಮೇಲ್.. ದುಷ್ಕರ್ಮಿಗೆ ಬಿತ್ತು ಧರ್ಮದೇಟು!

ದೂರಿನಲ್ಲೇನಿದೆ?

ಖೋಡಾ ನಿವಾಸಿಯಾಗಿರುವ ಇಮ್ರಾನ್ ತನ್ನ ಹೆಂಡತಿಗೆ ತಮ್ಮ ಮದುವೆಗೂ ಮುಂಚೆಯಿಂದಲೂ ಪರಿಚಯವಿದ್ದಾನೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ. ಹಲವು ತಿಂಗಳುಗಳಿಂದ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ . ಜನವರಿ 9ರ ರಾತ್ರಿ ಮಹಿಳೆ ಮನೆಯಿಂದ ನಾಪತ್ತೆಯಾಗಿದ್ದಳು. ಪತಿ ಆಕೆಯನ್ನು ಹುಡುಕಲು ಪ್ರಯತ್ನಿಸಿ ವಿಫಲವಾದ ನಂತರ ಅವರು ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದರು. ಮನೆಯಲ್ಲೂ ಆಕೆ ಇಸ್ಲಾಂ ಧರ್ಮದ ಕಡೆಗೆ ಒಲವು ತೋರಿಸಲು ಶುರು ಮಾಡಿದ್ದಳು, ಇದು ಪತಿಯ ಅನುಮಾನಕ್ಕೆ ಕಾರಣವಾಗಿತ್ತು.

ಪತಿ ಇಮ್ರಾನ್ ಫೋನ್ ನಂಬರ್ ಮುಂತಾದ ಮಾಹಿತಿ ನೀಡಿದ್ದು ಆತನ ಬಂಧನಕ್ಕೆ ಕಾರಣವಾಯಿತು. ಇಮ್ರಾನ್ ತನ್ನನ್ನು ದೆಹಲಿ ಮತ್ತು ಗಾಜಿಯಾಬಾದ್‌ನ ದರ್ಗಾಗಳಿಗೆ ಕರೆದೊಯ್ದಿದ್ದಾಗಿ ಮಹಿಳೆ ತಿಳಿಸಿದ್ದಾಳೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಆದರೆ ಆತ ಮತಾಂತರ ಆರೋಪ ತಳ್ಳಿ ಹಾಕಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ನಗರ) ರಾಜೇಶ್ ಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com