
ಬೆಂಗಳೂರು: ಮನೆಗೆ ಅಳವಡಿಸಿದ್ದ ಗೀಸರ್ ನಲ್ಲಿ ರಹಸ್ಯ ಕ್ಯಾಮೆರಾ ಇರಿಸಿ ಮಹಿಳೆಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಸೆಕ್ಸ್ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ದುಷ್ಕರ್ಮಿಯನ್ನು ಸಾರ್ವಜನಿಕರೇ ಪತ್ತೆ ಮಾಡಿ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಹೌದು.. ಬೆಂಗಳೂರಿನ ಮಹಿಳೆಯೊಬ್ಬರು ಮನೆಯಲ್ಲಿ ಗೀಸರ್ ಕೆಟ್ಟೋಗಿದೆ ಅಂತಾ ಟೆಕ್ನಿಷಿಯನ್ ಕರೆಸಿದ್ದರೆ ಆತ ಗೀಸರ್ ಗೇ ರಹಸ್ಯ ಕ್ಯಾಮೆರಾ ಅಳವಡಿಸಿ ಮಹಿಳೆಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್ ಮಾಡುತ್ತಿದ್ದ ಎನ್ನಲಾಗಿದೆ. ಈ ವಿಚಾರದಿಂದ ತೀವ್ರ ನೊಂದಿದ್ದ ಮಹಿಳೆ ಯೂಟ್ಯೂಬರ್ ನೆರವು ಪಡೆದು ಆತನನ್ನು ಪತ್ತೆ ಮಾಡಿ ಸಾರ್ವಜನಿಕವಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಏನಿದು ಘಟನೆ?
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸಿಸುತ್ತಿರುವ ಮಹಿಳೆ ಇತ್ತೀಚೆಗೆ ತಮ್ಮ ಮನೆಯ ಗೀಸರ್ ಕೆಟ್ಟು ಹೋಗಿದೆ ಎಂದು ಟೆಕ್ನೀಷಿಯನ್ ಗೆ ಕರೆ ಮಾಡಿದ್ದರು. ಈ ವೇಳೆ ಗೀಸರ್ ರಿಪೇರಿ ಮಾಡುವ ನೆಪದಲ್ಲಿ ಬಂದ ಆತ ಮನೆಗೆ ಬಂದು ಗೀಸರ್‌ನಲ್ಲಿ ಯಾರಿಗೂ ತಿಳಿಯದಂತೆ ಹಿಡನ್ ಕ್ಯಾಮೆರಾ ಫಿಕ್ಸ್ ಮಾಡಿದ್ದಾನೆ. ಬಳಿಕ ಮಹಿಳೆಯ ಖಾಸಗಿ ದೃಶ್ಯಗಳನ್ನು ಹಿಡನ್ ಕ್ಯಾಮೆರಾದಲ್ಲಿ ಸೆರೆಹಿಡಿದು ಬಳಿಕ ಮಹಿಳೆಯ ವಾಟ್ಸರ್ ನಂಬರ್ ಗೆ ಕಳುಹಿಸಿ ಆಕೆಯನ್ನು ಬ್ಲಾಕ್ ಮೇಲ್ ಮಾಡಿದ್ದಾನೆ. ನೀನು ನನ್ನ ಜೊತೆ ಬರಬೇಕು.. ಇಲ್ಲವಾದರೆ ಈ ವಿಡಿಯೋಗಳನ್ನು ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ.
ಆತನ ಬೆದರಿಕೆಗೆ ಹೈರಾಣಾದ ಮಹಿಳೆ ಒಂದಷ್ಟು ದಿನ ಈ ವಿಚಾರವನ್ನು ಮನೆಯವರಿಗೆ ತಿಳಿಸಿಲ್ಲ. ಆದರೆ ಈತನ ಕಾಟ ಜಾಸ್ತಿಯಾದ ಹಿನ್ನಲೆಯಲ್ಲಿ ಯೂಟ್ಯೂಬರ್ ಒಬ್ಬರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಮಹಿಳೆಗೆ ನೆರವಾದ ಯೂಟ್ಯೂಬರ್
ಮಹಿಳೆ ನೆರವು ನೀಡುವಂತೆ ಕೇಳಿದ ಮನವಿಗೆ ಸ್ಪಂದಿಸಿದ ಯೂಟ್ಯೂಬರ್ ಮಂಜೇಶ್ ಯಶಸ್ (_.paagal_mike._) ಮತ್ತು ಅವರ ತಂಡ ದುಷ್ಕರ್ಮಿ ಪತ್ತೆಗೆ ಮುಂದಾಗಿದೆ.
ಜನವರಿ 24ರಂದು ಕಾಮುಕನನ್ನು ಹಿಡಿದ ಮಂಜೇಶ್ ತಂಡ
ಮಂಜೇಶ್ ಮತ್ತು ಅವರ ತಂಡ ಸಂತ್ರಸ್ಥ ಕುಟುಂಬ ಸದ್ಯಸರ ಜೊತೆ ಸೇರಿ ಕಾಮುಕನನ್ನ ಹಿಡಿಯಲು ಪ್ಲಾನ್ ರೂಪಿಸುತ್ತಾರೆ. ಇದಾದ ಬಳಿಕ ಫೋನ್‌ನಲ್ಲಿ ಮಹಿಳೆ ಜೊತೆ ಮಾತನಾಡಿದ ಕಾಮುಕ ವ್ಯಕ್ತಿ ಮಹಿಳೆಗಾಗಿ ಜನವರಿ 24 ರಂದು ಬಸ್ ನಿಲ್ದಾಣದ ಬಳಿ ಬರಲು ಹೇಳಿದ್ದಾನೆ. ಇದೇ ಸಂದರ್ಭದಲ್ಲಿ ಯುವಕರ ತಂಡ ಆತನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಇನ್ನು ಇವಿಷ್ಟೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ದುಷ್ಕರ್ಮಿಯನ್ನು ಹಿಡಿಯಲು ಮಂಜೇಶ್ ಮತ್ತು ತಂಡ ರೂಪಿಸಿದ ಯೋಜನೆ ಮತ್ತು ಬಳಿಕ ಆತನ ಪತ್ತೆ ಬಂಧನ ಎಲ್ಲವನ್ನೂ ಮಂಜೇಶ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೋದಲ್ಲಿ ಸಂತ್ರಸ್ತ ಮಹಿಳೆಯ ಕುಟುಂಬ ಸದಸ್ಯರು ಹಾಗೂ ಮಂಜೇಶ್ ಸ್ನೇಹಿತರು ಕಾಮುಕನನ್ನು ಹಿಡಿದು ನಡು ರಸ್ತೆಯಲ್ಲಿ ಧರ್ಮದೇಟು ಕೊಟ್ಟಿದ್ದಾರೆ.
ಮಾತ್ರವಲ್ಲ ಮಹಿಳೆಗೆ ಚಪ್ಪಲಿಯಿಂದ ಹೊಡೆಯುವಂತೆ ಜನರು ಹೇಳುತ್ತಾರೆ. ಆದ್ರೆ ನೊಂದ ಮಹಿಳೆ ಚಪ್ಪಲಿ ಬಿಸಾಕಿ ಕೈಯಿಂದ ಹೊಡೆಯುತ್ತಿರುವ ದೃಶ್ಯಾವಳಿಗಳು ವೈರಲ್ ಆಗಿವೆ. ಸದ್ಯ ಕಾಮುಕನಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement