ThinkEdu Conclave 2025: ಇಂದಿನ ಕಾಲದಲ್ಲಿ 3 ಭಾಷೆ ಕಲಿಕೆ ಅನಿವಾರ್ಯ: RSS ಜಂಟಿ ಮಹಾ ಕಾರ್ಯದರ್ಶಿ

ನಾನು ಇಂಗ್ಲಿಷ್ ಅಥವಾ ಹಿಂದಿಯನ್ನು ವಿರೋಧಿಸುವುದಿಲ್ಲ, ಆದರೆ ವಿರೋಧಕ್ಕಾಗಿಯೇ ಹಿಂದಿಯನ್ನು ವಿರೋಧಿಸುವುದು ಮತ್ತು ಅದನ್ನು ಅಭಿಯಾನವಾಗಿ ಪರಿವರ್ತಿಸುವುದು ರಾಷ್ಟ್ರಕ್ಕೆ ಒಳ್ಳೆಯದಲ್ಲ.
Mukunda CR, RSS Joint General Secretary
ಆರ್‌ಎಸ್‌ಎಸ್ ಜಂಟಿ ಮಹಾ ಕಾರ್ಯದರ್ಶಿ ಮುಕುಂದ ಸಿಆರ್
Updated on

ಚೆನ್ನೈ: ಆಧುನಿಕ ಕಾಲದಲ್ಲಿ ಕನಿಷ್ಠ ಮೂರು ಭಾಷೆಗಳನ್ನು ಕಲಿಯುವುದು ಅಗತ್ಯವಾಗಿದ್ದು, ಒಬ್ಬರ ಮಾತೃಭಾಷೆ, ಪ್ರಾದೇಶಿಕ ಭಾಷೆ ಮತ್ತು ವೃತ್ತಿ ಭಾಷೆಗಳನ್ನು ಕಲಿಯಬೇಕು ಎಂದು ಆರ್‌ಎಸ್‌ಎಸ್ ಜಂಟಿ ಮಹಾ ಕಾರ್ಯದರ್ಶಿ ಮುಕುಂದ ಸಿಆರ್ ಹೇಳಿದ್ದಾರೆ.

13ನೇ ಥಿಂಕ್‌ಎಡು ಸಮಾವೇಶ 2025 ರಲ್ಲಿ "ಸಂಸ್ಕೃತಿ ಯೋಜನೆ: ವಿಕಸಿತ ಭಾರತೀಯರಿಗೆ ಮೌಲ್ಯಗಳು" ಎಂಬ ವಿಷಯದ ಕುರಿತು ದಿ ಸಂಡೇ ಸ್ಟ್ಯಾಂಡರ್ಡ್‌ನ ಸಲಹಾ ಸಂಪಾದಕ ರವಿಶಂಕರ್ ಅವರೊಂದಿಗೆ ಮಾತನಾಡಿದ ಮುಕುಂದ, 'ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಎರಡು ಭಾಷೆ ಅಥವಾ ಮೂರು ಭಾಷಾ ನೀತಿಯ ಬಗ್ಗೆ ಯಾವುದೇ ಅಧಿಕೃತ ನಿಲುವನ್ನು ಹೊಂದಿಲ್ಲವಾದರೂ, ಆಧುನಿಕ ಕಾಲದಲ್ಲಿ ಕನಿಷ್ಠ ಮೂರು ಭಾಷೆಗಳನ್ನು ಕಲಿಯುವುದು ಅಗತ್ಯವಾಗಿದೆ: ಒಬ್ಬರ ಮಾತೃಭಾಷೆ, ಪ್ರಾದೇಶಿಕ ಭಾಷೆ ಮತ್ತು ವೃತ್ತಿ ಭಾಷೆ ಕಲಿಯಬೇಕು ಎಂದು ಹೇಳಿದರು.

'ನಾನು ಇಂಗ್ಲಿಷ್ ಅಥವಾ ಹಿಂದಿಯನ್ನು ವಿರೋಧಿಸುವುದಿಲ್ಲ, ಆದರೆ ವಿರೋಧಕ್ಕಾಗಿಯೇ ಹಿಂದಿಯನ್ನು ವಿರೋಧಿಸುವುದು ಮತ್ತು ಅದನ್ನು ಅಭಿಯಾನವಾಗಿ ಪರಿವರ್ತಿಸುವುದು ರಾಷ್ಟ್ರಕ್ಕೆ ಒಳ್ಳೆಯದಲ್ಲ. ಅಂತೆಯೇ ಯಾರೂ ಹಿಂದಿ ಕಲಿಯಲು ಒತ್ತಾಯಿಸಬಾರದು, ಆದರೆ ಹಾಲಿ ಪರಿಸ್ಥಿತಿಯಲ್ಲಿ ಮೂರು ಭಾಷೆಗಳ ಅಗತ್ಯವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ವಿಶೇಷವಾಗಿ ಮೆಟ್ರೋ ನಗರದಲ್ಲಿ ಅಭಿವೃದ್ಧಿ ಹೊಂದಲು ಪ್ರಾದೇಶಿಕ ಭಾಷೆ, ವೃತ್ತಿ ಭಾಷೆ ಮತ್ತು ಒಬ್ಬರ ಮಾತೃಭಾಷೆಗಳನ್ನು ಕಲಿಯಬೇಕು ಎಂದು ಹೇಳಿದರು.

Mukunda CR, RSS Joint General Secretary
ThinkEdu Conclave 2025: 2040 ವೇಳೆಗೆ ವಿಶ್ವಗುರು ಸ್ಥಾನಮಾನ ಗುರಿ ಸಾಧಿಸಲು ಬದಲಾವಣೆಗಳ ಅಗತ್ಯವಿದೆ- ಸುಬ್ರಮಣಿಯನ್ ಸ್ವಾಮಿ

ಅಂತೆಯೇ ಭಾಷೆಯ ಆಧಾರದ ಮೇಲೆ ರಾಜ್ಯಗಳ ವಿಭಜನೆಯ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಮುಕುಂದ, 'ಈ ವಿಧಾನವು ಕೆಲವು ರೀತಿಯಲ್ಲಿ ಕೆಲಸ ಮಾಡಿದ್ದರೂ, ಏಕೀಕರಿಸುವ ಶಕ್ತಿಯಾಗಿ ಅದರ ಪಾತ್ರವು ಚರ್ಚಾಸ್ಪದವಾಗಿದೆ. ಆಗ, ಅದು ಸರಿಯಾದ ವಿಧಾನ ಎಂದು ನಂಬಿದವರು ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಭಜಿಸಿದರು. ಅದು ಕೆಲಸ ಮಾಡುತ್ತಿದೆಯೇ? ಹೌದು, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ, ಅಲ್ಲಿ ಭಾಷಾ ಆದ್ಯತೆಗಳನ್ನು ಚೆನ್ನಾಗಿ ಪರಿಹರಿಸಲಾಗಿದೆ. ಆದಾಗ್ಯೂ, ಈ ವಿಧಾನವು ಒಗ್ಗೂಡಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದು ಚರ್ಚಾಸ್ಪದವಾಗಿದೆ. ಉದಾಹರಣೆಗೆ, ತೆಲುಗು ಮಾತನಾಡುವ ಜನರು ಎರಡು ಪ್ರತ್ಯೇಕ ರಾಜ್ಯಗಳಾಗಿ ವಿಭಜನೆಯಾಗಿದ್ದಾರೆ, ಆದರೆ ಹಿಂದಿ ಮಾತನಾಡುವ ರಾಜ್ಯಗಳು ಹಲವಾರು ಇವೆ, ”ಎಂದು ಮುಕುಂದ್ ಹೇಳಿದರು.

ಭಾಷಾ ಆಧಾರಿತ ವಿಭಜನೆಯು ಭಾಷಾ ಬೆಳವಣಿಗೆಗೆ ಸಹಾಯ ಮಾಡಿದೆ ಎಂದು ಅವರು ಒತ್ತಿ ಹೇಳಿದರು. ಆದರೆ ಅದು ಯಾವಾಗಲೂ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ದೇಶದಲ್ಲಿ ವೈವಿಧ್ಯತೆಯನ್ನು ಅನುಭವಿಸಬೇಕು ಮತ್ತು ಗೌರವಿಸಬೇಕು ಎಂದು ಮುಕುಂದ ಅಭಿಪ್ರಾಯಪಟ್ಟರು.

“ಪ್ರತಿಯೊಂದು ಭಾಷೆ, ಧರ್ಮ ಮತ್ತು ಪಂಥವು ತನ್ನದೇ ಆದ ಸ್ಥಳವನ್ನು ಹೊಂದಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಇತರರ ಸ್ಥಳವನ್ನು ಸಹ ಗೌರವಿಸಬೇಕು. ಶಿಕ್ಷಣಕ್ಕೆ ಸಮಗ್ರ ವಿಧಾನದ ಅಗತ್ಯವನ್ನು ಎತ್ತಿ ತೋರಿಸುತ್ತಾ, ವ್ಯಕ್ತಿಗಳು ಮೂರು ಮೂಲಗಳ ಮೂಲಕ ಶಿಕ್ಷಣ ಪಡೆಯುತ್ತಾರೆ. ಕುಟುಂಬ, ಶಾಲೆ ಮತ್ತು ಸಮುದಾಯ. ಸಾಮಾನ್ಯವಾಗಿ, ಶಾಲೆಗಳು ಮಾತ್ರ ಶಿಕ್ಷಣ ನೀಡುವ ಕೆಲಸವನ್ನು ಹೊಂದಿವೆ ಎಂದು ನಂಬಲಾಗಿದೆ, ಆದರೆ ಅದು ಸಂಪೂರ್ಣ ಸತ್ಯ ಅಲ್ಲ. ಶಾಲಾ ಶಿಕ್ಷಣ ಮುಖ್ಯ ಆದರೆ ಅದುವೇ ಅಂತಿಮವಲ್ಲ” ಎಂದು ಮುಕುಂದ್ ಹೇಳಿದರು.

Mukunda CR, RSS Joint General Secretary
ThinkEdu Conclave 2025: ಸಂಸತ್‌ನಲ್ಲಿ ಚರ್ಚೆಯ ಗುಣಮಟ್ಟ ಕುಸಿತ, ಕಲಾಪಕ್ಕೆ ಆಗಾಗ ಅಡ್ಡಿ- ಶಶಿ ತರೂರ್

ಶಾಲಾ ಪಠ್ಯಕ್ರಮದಲ್ಲಿ ಧಾರ್ಮಿಕ ಗ್ರಂಥಗಳು ಮತ್ತು ಮಹಾಕಾವ್ಯಗಳನ್ನು ಸೇರಿಸುವ ಬಗ್ಗೆ ಪ್ರಶ್ನಿಸಿದಾಗ, 'ಸರ್ಕಾರದಲ್ಲಿ ಆರ್‌ಎಸ್‌ಎಸ್‌-ಸಮಾನ ಮನಸ್ಸಿನ ವ್ಯಕ್ತಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಘವು ನಮ್ಮ ಧರ್ಮಗ್ರಂಥಗಳನ್ನು ನಮ್ಮ ಪೂರ್ವಜರಿಂದ ರವಾನಿಸಲಾದ ಅಮೂಲ್ಯ ಪರಂಪರೆ ಎಂದು ನೋಡುತ್ತದೆ ಮತ್ತು ಅದನ್ನು ಭವಿಷ್ಯದ ಪೀಳಿಗೆಯೊಂದಿಗೆ ಹಂಚಿಕೊಳ್ಳಬೇಕು. ಅದರ ಬಗ್ಗೆ ಎರಡನೇ ಪ್ರಶ್ನೆಯಿಲ್ಲ. ಆದಾಗ್ಯೂ, ಇದನ್ನು ಜನರಲ್ ಝಡ್‌ಗೆ ಅನುಗುಣವಾಗಿ ಪ್ರಸ್ತುತಪಡಿಸಬೇಕು. ಇದನ್ನು ಉತ್ತೇಜಿಸಲು ಆರ್‌ಎಸ್‌ಎಸ್ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ, ಆದರೆ ಒಂದು ಪೀಳಿಗೆಗೆ ಶಿಕ್ಷಣ ನೀಡಲು ಶಾಲೆಗಳು ಮಾತ್ರವಲ್ಲದೆ ವಿಶಾಲ ಸಮುದಾಯವನ್ನೂ ಒಳಗೊಂಡ ಸಹಯೋಗದ ಪ್ರಯತ್ನದ ಅಗತ್ಯವಿದೆ ಎಂದು ಅವರು ಹೇಳಿದರು.

ಪಠ್ಯಕ್ರಮದ ನಿರ್ಧಾರಗಳಲ್ಲಿ ಸರ್ಕಾರದ ಪಾತ್ರವನ್ನು ಒಪ್ಪಿಕೊಂಡ ಮುಕುಂದ್, “ಶಾಲಾ ಪಠ್ಯಕ್ರಮದ ಬಗ್ಗೆ ನಿರ್ಧರಿಸುವುದು ಸರ್ಕಾರದ ಕೆಲಸ, ಆದರೆ ಇಂದು ಸರ್ಕಾರದಲ್ಲಿ ಆರ್‌ಎಸ್‌ಎಸ್‌ನಂತೆಯೇ ಅದೇ ದೃಷ್ಟಿಕೋನವನ್ನು ಹೊಂದಿರುವ ಜನರಿದ್ದಾರೆ. ಅವರು ಅದನ್ನು ತರಲು ಪ್ರಯತ್ನಿಸುತ್ತಿದ್ದಾರೆ ಎಂದರು. ಅಂತೆಯೇ ಸಮಗ್ರ ಶಿಕ್ಷಣದ ಮೇಲೆ ಕೇಂದ್ರೀಕರಿಸಿದ್ದಕ್ಕಾಗಿ ಮುಕುಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com