ನರಭಕ್ಷಕ ಹುಲಿ ಹೊಟ್ಟೆಯೊಳಗೆ ಮಹಿಳೆಯ ಕಿವಿಯೋಲೆ, ಕೂದಲು, ಬಟ್ಟೆ ಪತ್ತೆ!

ಎರಡು ದಿನಗಳ ಹಿಂದೆ ಕಾಫಿ ಬೀಜ ಸಂಗ್ರಹಿಸಲು ತೆರಳಿದ್ದ ರಾಧಾ ಎಂಬ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ, ಕೊಂದು ಹಾಕಿ ಎಳೆದೊಯ್ದಿತ್ತು.
man-eater tiger killed
ಹುಲಿ (ಸಾಂದರ್ಭಿಕ ಚಿತ್ರ)
Updated on

ವಯನಾಡು: ಮಹಿಳೆಯೊಬ್ಬರನ್ನು ಕೊಂದು ತಿಂದಿದ್ದ ನರಭಕ್ಷಕ ಹುಲಿಯೊಂದರ ಹೊಟ್ಟೆಯಲ್ಲಿ ಕಿವಿಯೋಲೆ, ಕೂದಲು, ಬಟ್ಟೆ ಪತ್ತೆಯಾಗಿದೆ.

ಹೌದು.. ಕೇರಳದ ವಯನಾಡಿನ ಪಿಲಕಾವುವಿನ ಜನನಿಬಿಡ ಪ್ರದೇಶದ ಮನೆಯೊಂದರ ಹಿಂದೆ ಸತ್ತು ಬಿದ್ದಿದ್ದ ಹುಲಿಯ ಹೊಟ್ಟೆಯಲ್ಲಿ ಮಹಿಳೆಯೊಬ್ಬರ ಕಿವಿಯೋಲೆ, ಕೂದಲು ಮತ್ತು ಬಟ್ಟೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹುಲಿ ಕಳೆದ ಎರಡು ದಿನಗಳ ಹಿಂದೆ ಕಾಫಿ ಬೀಜ ಸಂಗ್ರಹಿಸಲು ತೆರಳಿದ್ದ ರಾಧಾ ಎಂಬ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ, ಕೊಂದು ಹಾಕಿ ಎಳೆದೊಯ್ದಿತ್ತು. ಇದೀಗ ಹುಲಿ ಸಾವಿಗೀಡಾಗಿದ್ದು, ಇದೀಗ ಹುಲಿಯ ಹೊಟ್ಟೆಯಲ್ಲಿ ಮಹಿಳೆ ದೇಹದ ಭಾಗಗಳು ಪತ್ತೆಯಾಗಿದೆ.

ಸುಮಾರು ನಾಲ್ಕರಿಂದ ಐದು ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೋಮವಾರ ಬೆಳಗ್ಗೆ ವನ್ಯಜೀವಿ ಸಿಬ್ಬಂದಿಯ ತಂಡ ಗುರುತಿಸಿ ಬೆನ್ನಟ್ಟಿದ್ದರು. ನಂತರ ಪಿಲಕಾವುವಿನ ಜನನಿಬಿಡ ಪ್ರದೇಶದ ಮನೆಯೊಂದರ ಹಿಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಹುಲಿ ಸಾವಿಗೀಡಾಗಿದೆ ಎಂದು ಖಚಿತ ಪಡಿಸಿಕೊಂಡ ಅಧಿಕಾರಿಗಳು ಅದರ ಮರಣೋತ್ತರ ಪರೀಕ್ಷೆ ನಡೆಸಿದರು. ಈ ವೇಳೆ ಹುಲಿ ಹೊಟ್ಟೆಯಲ್ಲಿ ಮಹಿಳೆಯ ಕಿವಿಯೋಲೆ, ಕೂದಲು ಮತ್ತು ಬಟ್ಟೆ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಇನ್ನು ಹುಲಿ ಸಾವಿಗೆ ಕಾರಣವಾದ ಅಂಶಗಳ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ಹುಲಿಯ ಕುತ್ತಿಗೆಯಲ್ಲಿ ಹೊಸತಾದ ಮತ್ತು ಆಳವಾದ ಗಾಯಗಳು ಪತ್ತೆಯಾಗಿದೆ. ಈ ಗಾಯಗಳೇ ಅದರ ಸಾವಿಗೆ ಕಾರಣವಾಗಿರಬಹುದು. ಹುಲಿ ಮತ್ತೊಂದು ಹುಲಿಯೊಂದಿಗೆ ಕಾಳಗ ನಡೆಸಿದ್ದು, ಈ ಕಾಳಗದ ವೇಳೆ ಹುಲಿ ಗಾಯಗೊಂಡಿರಬಹುದು ಎಂದು ಹೇಳಿದ್ದಾರೆ.

man-eater tiger killed
ರಣಥಂಬೋರ್ ಮೀಸಲು ಅರಣ್ಯದಲ್ಲಿ ಹುಲಿ ಶವ ಪತ್ತೆ; ಕಾದಾಟದಲ್ಲಿ ಸಾವು ಶಂಕೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com