Delhi Elections 2025
ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ

'ಪಕ್ಷದ ಮೇಲಿದ್ದ ನಂಬಿಕೆಯೇ ಹೋಯ್ತು'; ಚುನಾವಣೆಗೂ ಮುನ್ನವೇ ಕೇಜ್ರಿವಾಲ್ ಗೆ ಆಘಾತ, AAP ತೊರೆದ 8 ಶಾಸಕರು!

ಆಮ್ ಆದ್ಮಿ ಪಕ್ಷದ (ಎಎಪಿ) ಏಳು ಶಾಸಕರು ರಾಜೀನಾಮೆ ನೀಡಿದ್ದು, ಇದು ಮತ್ತೆ ಸಿಎಂ ಆಗುವ ಕನಸು ಕಾಣುತ್ತಿರುವ ಅರವಿಂದ್ ಕೇಜ್ರಿವಾಲ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
Published on

ನವದೆಹಲಿ: ದೆಹಲಿ ಚುನಾವಣೆಗೆ ಕೇವಲ ಐದು ದಿನಗಳ ಅಂತರ ಇರುವಂತೆಯೇ ಇತ್ತ ಅರವಿಂದ್ ಕೇಜ್ರಿವಾಲ್ ಗೆ ಆಘಾತ ಎದುರಾಗಿದ್ದು, ಟಿಕೆಟ್ ಸಿಗದೇ ಪಕ್ಷದ ವಿರುದ್ದ ಮುನಿಸಿಕೊಂಡಿದ್ದ 8 ಶಾಸಕರು ಎಎಪಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ಹೌದು.. ಆಮ್ ಆದ್ಮಿ ಪಕ್ಷದ (ಎಎಪಿ) ಏಳು ಶಾಸಕರು ರಾಜೀನಾಮೆ ನೀಡಿದ್ದು, ಇದು ಮತ್ತೆ ಸಿಎಂ ಆಗುವ ಕನಸು ಕಾಣುತ್ತಿರುವ ಅರವಿಂದ್ ಕೇಜ್ರಿವಾಲ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜೀನಾಮೆ ನೀಡಿದ ಶಾಸಕರ ಪೈಕಿ ನರೇಶ್ ಯಾದವ್ (ಮೆಹ್ರೌಲಿ), ರೋಹಿತ್ ಕುಮಾರ್ (ತ್ರಿಲೋಕಪುರಿ), ರಾಜೇಶ್ ರಿಷಿ (ಜನಕ್ಪುರಿ), ಮದನ್ ಲಾಲ್ (ಕಸ್ತೂರ್ಬಾ ನಗರ), ಪವನ್ ಶರ್ಮಾ (ಆದರ್ಶ ನಗರ), ಮತ್ತು ಭಾವನಾ ಗೌಡ್ (ಪಾಲಂ). ಬಿಎಸ್ ಜೂನ್ (ಬಿಜ್ವಾಸನ್) ಮತ್ತು ಗಿರೀಶ್ ಸೋನಿ (ಮಾದಿಪುರ್) ಸೇರಿದ್ದಾರೆ.

ಪಾಲಂ ಕ್ಷೇತ್ರದ ಭಾವನಾ ಗೌಡ್ ತಮ್ಮ ರಾಜೀನಾಮೆ ಪತ್ರದಲ್ಲಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಬಗ್ಗೆ ತಮ್ಮ ನಿರಾಶೆ ವ್ಯಕ್ತಪಡಿಸಿದ್ದು, "ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ" ಎಂದು ಹೇಳಿದ್ದಾರೆ.

ನರೇಶ್ ಯಾದವ್ ಈ ಹಿಂದೆ ಮೆಹ್ರೌಲಿ ಅಭ್ಯರ್ಥಿಯಾಗಿದ್ದರು. ಡಿಸೆಂಬರ್‌ನಲ್ಲಿ ಕುರಾನ್ ಅಪವಿತ್ರ ಪ್ರಕರಣದಲ್ಲಿ ಪಂಜಾಬ್ ನ್ಯಾಯಾಲಯದಿಂದ ಅವರು ದೋಷಿ ಎಂದು ಸಾಬೀತಾಯಿತು ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ಚುನಾವಣೆಗೆ ಎಎಪಿ ತನ್ನ ಐದನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಾಗ, ನರೇಶ್ ಯಾದವ್ ಬದಲಿಗೆ ಮಹೇಂದರ್ ಚೌಧರಿ ಅವರನ್ನು ಎಎಪಿ ತನ್ನ ಮೆಹ್ರೌಲಿ ಅಭ್ಯರ್ಥಿಯಾಗಿ ಘೋಷಿಸಿತು. ಪಕ್ಷದ ಈ ನಡೆಯಿಂದ ನರೇಶ್ ಯಾದವ್ ಅಸಮಾಧಾನಗೊಂಡಿದ್ದರು.

ಇದೇ ವಿಚಾರವಾಗಿ ಪಕ್ಷಕ್ಕೆ ಪತ್ರ ಬರೆದಿರುವ ನರೇಶ್ ಯಾದವ್, ಎಎಪಿ ತನ್ನ "ಪ್ರಾಮಾಣಿಕ ರಾಜಕೀಯ" ಎಂಬ ಸ್ಥಾಪಕ ತತ್ವವನ್ನು ಕೈಬಿಟ್ಟಿದೆ. ಭ್ರಷ್ಟಾಚಾರವನ್ನು ಕಡಿಮೆ ಮಾಡುವ ಪ್ರತಿಜ್ಞೆಯನ್ನು ಈಡೇರಿಸುವ ಬದಲು ಪಕ್ಷವು "ಭ್ರಷ್ಟಾಚಾರದ ಜೌಗು ಪ್ರದೇಶದಲ್ಲಿ ಸಿಲುಕಿಕೊಂಡಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಹಲವಾರು ತಿಂಗಳುಗಳ ಕಾಲ ಜೈಲಿನಲ್ಲಿರಿಸಿದ್ದ ದೆಹಲಿ ಮದ್ಯ ನೀತಿ ಪ್ರಕರಣವನ್ನು ಉಲ್ಲೇಖಿಸಿರುವ ಅವರು, ಜೈಲಿಗೆ ಹೋಗಿ ಬಂದವರೂ ಟಿಕೆಟ್ ಪಡೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನರೇಶ್ ಯಾದವ್ ಅವರು ದಕ್ಷಿಣ ದೆಹಲಿಯ ಮೆಹ್ರೌಲಿ ಕ್ಷೇತ್ರವನ್ನು 10 ವರ್ಷಗಳ ಕಾಲ ಪ್ರತಿನಿಧಿಸಿದ್ದರು.

Delhi Elections 2025
ದೆಹಲಿ ಚುನಾವಣೆಗೂ ಮುನ್ನ AAP ಗೆ ಶಾಕ್: ಪಂಜಾಬ್ ಸಿಎಂ ಭಗವಂತ್ ಮಾನ್ ದೆಹಲಿಯ ಮನೆಯಲ್ಲಿ EC ಶೋಧ

ಇನ್ನು ರಾಜಿನಾಮೆ ನೀಡಿದ ಶಾಸಕರ ಪೈಕಿ ಓರ್ವರಾಗಿರುವ ತ್ರಿಲೋಕಪುರಿ ಶಾಸಕ ರೋಹಿತ್ ಕುಮಾರ್ ಮೆಹ್ರೌಲಿಯಾ ಕೂಡ ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿ X ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರದ ವಿರುದ್ಧದ ಚಳವಳಿಯ ಸಮಯದಲ್ಲಿ ದಲಿತ ಮತ್ತು ವಾಲ್ಮೀಕಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಭರವಸೆಯೊಂದಿಗೆ ಎಎಪಿಗೆ ಸೇರಿದ್ದೆ.

ಆಗ ಎಎಪಿ ಈ ಸಮುದಾಯಗಳನ್ನು ಉನ್ನತೀಕರಿಸುವುದಾಗಿ ಭರವಸೆ ನೀಡಿತು, ಆದರೆ ಗುತ್ತಿಗೆ ಆಧಾರಿತ ಕಾರ್ಮಿಕರನ್ನು ರದ್ದುಗೊಳಿಸುವುದು ಮತ್ತು ತಾತ್ಕಾಲಿಕ ಕಾರ್ಮಿಕರನ್ನು ಶಾಶ್ವತವಾಗಿ ಸೇರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವಂತಹ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ ಎಂದು ಮೆಹ್ರೌಲಿಯಾ ಕಿಡಿಕಾರಿದ್ದಾರೆ.

ಅಂತೆಯೇ ಜನಕ್‌ಪುರಿ ಶಾಸಕ ರಾಜೇಶ್ ರಿಷಿ ಕೂಡ ತಮ್ಮ ರಾಜಿನಾಮೆ ಬಳಿಕ ಪಕ್ಷದ ವಿರುದ್ಧ ಕಿಡಿಕಾರಿದ್ದು, 'ಎಎಪಿ ತನ್ನ ಮೂಲ ಮೌಲ್ಯಗಳಿಂದ ನಿರ್ಗಮಿಸುತ್ತಿದೆ. ಇದು ಪಕ್ಷದ ಹಳೆಯ ನಾಯಕರಿಗೆ ಭ್ರಮನಿರಸನ ತಂದಿದೆ. ಎಎಪಿ ಭ್ರಷ್ಟಾಚಾರ-ಮುಕ್ತ ಆಡಳಿತ ಮತ್ತು ಪಾರದರ್ಶಕತೆಯ ತತ್ವಗಳಿಗೆ ದ್ರೋಹ ಬಗೆದಿದೆ. ಪಕ್ಷವು "ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಕೊಳಚೆ ಗುಂಡಿ"ಯಾಗಿದೆ ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com