Bank fraud case: ಸಂಕಷ್ಟದಲ್ಲಿ ನಿರ್ಮಾಪಕ Allu Arvind; ನಟ Allu Arjun ತಂದೆಗೆ ED ವಿಚಾರಣೆ

ರಾಮಕೃಷ್ಣ ಎಲೆಕ್ಟ್ರಾನಿಕ್ಸ್ ಬ್ಯಾಂಕ್ ನಿಂದ 101.4 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಪ್ರಮುಖ ಟಾಲಿವುಡ್ ಚಲನಚಿತ್ರ ನಿರ್ಮಾಪಕ ಅಲ್ಲು ಅರವಿಂದ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
Allu Aravind-Allu Arjun
ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್
Updated on

ಹೈದರಾಬಾದ್: ಮಹತ್ವದ ಬೆಳವಣಿಗೆಯಲ್ಲಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕ ಸಂಬಂಧಿಸಿದಂತೆ ಟಾಲಿವುಡ್ ನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಮಕೃಷ್ಣ ಎಲೆಕ್ಟ್ರಾನಿಕ್ಸ್ ಬ್ಯಾಂಕ್ ನಿಂದ 101.4 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಪ್ರಮುಖ ಟಾಲಿವುಡ್ ಚಲನಚಿತ್ರ ನಿರ್ಮಾಪಕ ಅಲ್ಲು ಅರವಿಂದ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ಈ ಹಿಂದೆ ಏಜೆನ್ಸಿಯ ಮುಂದೆ ಹಾಜರಾದಾಗ ಅರವಿಂದ್ ಪ್ರಮುಖ ಹಣಕಾಸಿನ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದರು. ಇದೀಗ ಅದರ ಮುಂದುವರೆದ ಭಾಗದ ವಿಚಾರಣೆಯಲ್ಲಿ ಅಲ್ಲು ಅರವಿಂದ್ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಹೈದರಾಬಾದ್ ನ ಇಡಿ ಕಚೇರಿಗೆ ಆಗಮಿಸಿದ ಅಲ್ಲು ಅರವಿಂದ್ ಅವರನ್ನು ಅಧಿಕಾರಿಗಳು ಸುಮಾರು 3 ಗಂಟೆಗಳ ವಿಚಾರಣೆ ನಡೆಸಿದರು. ಅಂತೆಯೇ ಮುಂದಿನವಾರ ಮತ್ತೆ ವಿಚಾರಣೆಗೆ ಬರಬೇಕು ಎಂದು ಹೇಳುತ್ತಾರೆ.

Allu Aravind-Allu Arjun
40ರ ಆಸುಪಾಸಿನಲ್ಲಿ ಅಮ್ಮನಾಗುತ್ತಿರುವ ನಟಿ ಭಾವನಾ ರಾಮಣ್ಣ

ರಾಮಕೃಷ್ಣ ಎಲೆಕ್ಟ್ರಾನಿಕ್ಸ್‌ನಲ್ಲಿ 100 ಕೋಟಿ ರೂಪಾಯಿ ಸಣ್ಣ ಭ್ರಷ್ಟಾಚಾರ ನಡೆದಿದೆ. ನೂರಾರು ಕೋಟಿ ರೂಪಾಯಿ ಸ್ಕಾಮ್ ಎಂದರೆ ಈಗ ಚಿಕ್ಕದಾಗಿದೆ ಅನಿಸಬಹುದು ಆದರೆ 2017 ರಲ್ಲಿ ಅದು ದೊಡ್ಡ ಪ್ರಮಾಣದ ಹಗರಣವಾಗಿತ್ತು ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಓಪನ್ ಕ್ಯಾಶ್ ಕ್ರೆಡಿಟ್ ಸೌಲಭ್ಯವನ್ನು ದುರ್ಬಳಕೆ ಮಾಡಿ, 101 ಕೋಟಿ ರೂಪಾಯಿಗಳವರೆಗೆ ತಮ್ಮ ವೈಯಕ್ತಿಕ ಖಾತೆಗಳಿಗೆ ಬದಲಾಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 2018-19ರಲ್ಲಿ ಈ ಬ್ಯಾಂಕ್ ವಂಚನೆ ನಡೆದಿತ್ತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿತ್ತು.

ಈ ಪ್ರಮಾಣದಲ್ಲಿ ರಾಮಕೃಷ್ಣ ಎಲೆಕ್ಟ್ರಾನಿಕ್ಸ್, ರಾಮಕೃಷ್ಣ ಟೆಲಿಟ್ರಾನಿಕ್ಸ್ ಸಂಸ್ಥೆಗಳಲ್ಲಿ ಡೈರಕ್ಟರ್‌ಗಳಾಗಿ ಇರುವ ರಾಘವೇಂದ್ರ, ರವಿಕುಮಾರ್ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗಳಿದ ಇಡಿ ಅಧಿಕಾರಿಗಳು ಹೈದರಾಬಾದ್, ಕರ್ನಾಟಕ, ಕರ್ನೂಲು, ದೆಹಲಿಯ ಘಜಿಯಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸಿ, ಹಲವು ಆಸ್ತಿಗಳನ್ನು ಸೀಜ್ ಮಾಡಿದ್ದರು.

ಈಗಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರವಿಂದ್‌ರನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ 2017-19 ಮಧ್ಯದಲ್ಲಿ ನಡೆದ ಕೆಲವು ವ್ಯವಹಾರಗಳನ್ನು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಅಲ್ಲು ಅರವಿಂದ್ ಹೇಳಿದ್ದೇನು?

ಇನ್ನು ಇಡಿ ವಿಚಾರಣೆ ಕುರಿತು ಮಾತನಾಡಿದ ನಿರ್ಮಾಪಕ ಅಲ್ಲು ಅರವಿಂದ್, '2017ರಲ್ಲಿ ಒಂದು ಮೈನರ್‌ ಷೇರುದಾರನಾಗಿ ಇದ್ದ ಒಂದು ಆಸ್ತಿ ಖರೀದಿಸಿದ್ದೆ. ಆದರೆ ಆಸ್ತಿ ವಿಚಾರವಾಗಿ ತನಿಖೆ ಇದೆ ಎಂದು ತಿಳಿದಿರಲಿಲ್ಲ ಬಳಿಕ. ಬ್ಯಾಂಕ್ ಸಾಲವನ್ನು ಪಾವತಿಸಲಿಲ್ಲ. ಅಕೌಂಟ್ಸ್ ಬುಕ್‌ನಲ್ಲಿ ನನ್ನ ಹೆಸರು ಇರುವುದರಿಂದ ಇಡಿ ವಿಚಾರಣೆಗೆ ಕರೆದಿದೆ. ಜವಾಬ್ದಾರಿಯಿರುವ ನಾಗರಿಕರಿಗೆ ಹಾಜರಾಗಿ ವಿವರಣೆಯನ್ನು ನೀಡಿದ್ದೇನೆ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com