Bihar Election: ಮಹಿಳೆಯರಿಗೆ Rahul Gandhi ಚಿತ್ರ ಇರುವ sanitary pad ಹಂಚಿಕೆ; ನಕಲಿ ಎಂದ ನೆಟ್ಟಿಗರು! Video

ಬಿಹಾರ ಕಾಂಗ್ರೆಸ್ ಘಟಕದಿಂದ ಈ ಸ್ಯಾನಿಟರಿ ಪ್ಯಾಡ್ ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ಸ್ಯಾನಿಟರಿ ಪ್ಯಾಡ್ ಗಳೊಳಗೆ ರಾಹುಲ್ ಗಾಂಧಿ ಅವರ ಚಿತ್ರ ಇರುವುದು ವಿವಾದಕ್ಕೆ ಕಾರಣವಾಗಿದೆ.
Free sanitary pad packs with Rahul Gandhis photo sparks row
ಬಿಹಾರದಲ್ಲಿ ರಾಹುಲ್ ಗಾಂಧಿ ಚಿತ್ರ ಇರುವ ಸ್ಯಾನಿಟರಿ ಪ್ಯಾಡ್ಸ್ ಹಂಚಿಕೆ
Updated on

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮಹಿಳೆಯರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಚಿತ್ರ ಇರುವ ಸ್ಯಾನಿಟರಿ ಪ್ಯಾಡ್ ಗಳ (sanitary pad) ಹಂಚಿಕೆ ವಿಚಾರ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.

ಬಿಹಾರ ಕಾಂಗ್ರೆಸ್ ಘಟಕದಿಂದ ಈ ಸ್ಯಾನಿಟರಿ ಪ್ಯಾಡ್ ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ಸ್ಯಾನಿಟರಿ ಪ್ಯಾಡ್ ಗಳೊಳಗೆ ರಾಹುಲ್ ಗಾಂಧಿ ಅವರ ಚಿತ್ರ ಇರುವುದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಕೆಲ ನೆಟ್ಟಿಗರು ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಅವರ ಚಿತ್ರವನ್ನು ಮುದ್ರಿಸಲಾಗಿದೆ. ಆದರೆ ಸ್ಯಾನಿಟರಿ ಪ್ಯಾಡ್ ಮೇಲಿನ ಚಿತ್ರ ನಕಲಿ. ಅದನ್ನು ಎಡಿಟ್ ಮಾಡಿ ವಿಡಿಯೋ ವೈರಲ್ ಮಾಡಲಾಗಿದೆ ಎಂದು ವಾದಿಸುತ್ತಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಂತೆಯೇ ಕಾಂಗ್ರೆಸ್ ಪಕ್ಷ ಮಹಿಳಾ ಮತದಾರರನ್ನು ಸೆಳೆಯಲು ರಾಹುಲ್ ಗಾಂಧಿ (Rahul Gandhi) ಅವರ ಚಿತ್ರವಿರುವ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ ಯೋಜನೆಯನ್ನು ಘೋಷಿಸಿದೆ.

`ಪ್ರಿಯದರ್ಶಿನಿ ಉಡಾನ್ ಯೋಜನಾ’ ಎಂಬ ಈ ಯೋಜನೆಯಡಿ, ಬಿಹಾರದಲ್ಲಿ 5 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಈ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ಈ ಯೋಜನೆಯು ಋತುಸ್ರಾವದ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

ಬಿಹಾರ ಕಾಂಗ್ರೆಸ್‌ನ ಅಧ್ಯಕ್ಷ ರಾಜೇಶ್ ಕುಮಾರ್ ಅವರು ಶುಕ್ರವಾರ ಪಾಟ್ನಾದ ಸದಾಕತ್ ಆಶ್ರಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು. ಈ ಕಾರ್ಯಕ್ರಮವನ್ನು ಮಹಿಳಾ ಕಾಂಗ್ರೆಸ್‌ನ ಮೂಲಕ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

Free sanitary pad packs with Rahul Gandhis photo sparks row
ಉತ್ತರಾಧಿಕಾರಿ ನೇಮಕ ಗೊಂದಲದ ನಡುವೆ ಇನ್ನೂ '30-40 ವರ್ಷ ಬದುಕುವ ವಿಶ್ವಾಸ' ವ್ಯಕ್ತಪಡಿಸಿದ ದಲೈ ಲಾಮಾ

ಪ್ಯಾಡ್ ಮ್ಯಾನ್ ಚಿತ್ರದ ಸ್ಪೂರ್ತಿ

ಸ್ಯಾನಿಟರಿ ಪ್ಯಾಡ್‌ಗಳ ಪ್ಯಾಕೆಟ್‌ಗಳ ಮೇಲೆ ರಾಹುಲ್ ಗಾಂಧಿ ಅವರ ಚಿತ್ರದ ಜೊತೆಗೆ, ಕಾಂಗ್ರೆಸ್‌ನ ಚುನಾವಣಾ ಭರವಸೆಯಾದ `ಮಾಯಿ ಬೆಹನ್ ಮಾನ್ ಯೋಜನಾ’ ಅಡಿಯಲ್ಲಿ ಅಗತ್ಯವಿರುವ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ಆರ್ಥಿಕ ನೆರವು ನೀಡುವ ಘೋಷಣೆಯೂ ಇದೆ. ಈ ಯೋಜನೆಯನ್ನು ಅಕ್ಷಯ್ ಕುಮಾರ್ ಅಭಿನಯದ `ಪ್ಯಾಡ್‌ಮ್ಯಾನ್’ ಚಿತ್ರದಿಂದ ಸ್ಫೂರ್ತಿಗೊಂಡಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ವಿವಾದ ಏಕೆ?

ಇನ್ನು ಕಾಂಗ್ರೆಸ್ ಪಕ್ಷದ ಈ ಯೋಜನೆ ಸದುದ್ದೇಶದ್ದೇ ಆದರೂ ಸ್ಯಾನಿಟರಿ ಪ್ಯಾಡ್‌ಗಳ ಪ್ಯಾಕೆಟ್‌ಗಳ ಮೇಲೆ ರಾಹುಲ್ ಗಾಂಧಿ ಅವರ ಚಿತ್ರ ಹಾಕಿಸಿರುವುದು ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರ ಚಿತ್ರವನ್ನು ಸ್ಯಾನಿಟರಿ ಪ್ಯಾಡ್‌ಗಳ ಪ್ಯಾಕೆಟ್‌ಗಳ ಮೇಲೆ ಮುದ್ರಿಸಿರುವುದನ್ನು ಬಿಜೆಪಿ ಮತ್ತು ಜೆಡಿಯು ತೀವ್ರವಾಗಿ ಖಂಡಿಸಿದೆ.

ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿ, 'ರಾಹುಲ್ ಗಾಂಧಿ ಅವರ ಚಿತ್ರವನ್ನು ಸ್ಯಾನಿಟರಿ ಪ್ಯಾಡ್‌ನ ಮೇಲೆ ಮುದ್ರಿಸುವುದು ಬಿಹಾರದ ಮಹಿಳೆಯರಿಗೆ ಅವಮಾನ ಮಾಡಿದಂತಾಗಿದೆ. ಕಾಂಗ್ರೆಸ್ ಮಹಿಳಾ ವಿರೋಧಿ ಪಕ್ಷವಾಗಿದೆ. ಬಿಹಾರದ ಮಹಿಳೆಯರು ಕಾಂಗ್ರೆಸ್ ಮತ್ತು ಆರ್‌ಜೆಡಿಗೆ ಪಾಠ ಕಲಿಸಲಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಮತ್ತು ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಕೂಡ ಈ ನಿರ್ಧಾರವನ್ನು ಖಂಡಿಸಿದ್ದು, 'ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವುದು ಒಳ್ಳೆಯ ಕಾರ್ಯವಾಗಿದೆ. ಆದರೆ ಅದರ ಮೇಲೆ ರಾಹುಲ್ ಗಾಂಧಿ ಅವರ ಚಿತ್ರವನ್ನು ಮುದ್ರಿಸಿರುವುದು ಸಂಪೂರ್ಣವಾಗಿ ಅನುಚಿತವಾಗಿದೆ ಎಂದು ಅವರು ಹೇಳಿದ್ದಾರೆ.

ಜೆಡಿಯು ವಕ್ತಾರ ನೀರಜ್ ಕುಮಾರ್ ಮಾತನಾಡಿ, ಈ ಕಾರ್ಯಕ್ರಮವು ಚುನಾವಣಾ ತಂತ್ರಗಾರಿಕೆಯಾಗಿದೆ. ಕಾಂಗ್ರೆಸ್‌ನ ಈ ನಡೆಯನ್ನು ಮಾನಸಿಕ ದಿವಾಳಿತನ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ತಿರುಗೇಟು

ಇನ್ನು ಸ್ಯಾನಿಟರಿ ಪ್ಯಾಡ್ ಟೀಕೆಗಳಿಗೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್‌ನ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಾಂಬಾ, 'ಆಧುನಿಕ ಯುಗದಲ್ಲಿ ಸವಾಲು ರಾಹುಲ್ ಗಾಂಧಿ ಚಿತ್ರವನ್ನು ಸ್ಯಾನಿಟರಿ ಪ್ಯಾಡ್‌ನ ಮೇಲೆ ಏಕೆ ಮುದ್ರಿಸಲಾಯಿತು ಎಂಬುದಲ್ಲ. ಬಿಹಾರದಲ್ಲಿ ಇಂದಿಗೂ ಮಹಿಳೆಯರು ಋತುಸ್ರಾವದ ಸಮಯದಲ್ಲಿ ಬಟ್ಟೆಯನ್ನು ಬಳಸಿಕೊಂಡು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿರುವುದೇ ಮೂಲ ಸಮಸ್ಯೆಯಾಗಿದೆ. ಬಿಜೆಪಿಯ ಚಿಂತನೆ ಯಾವಾಗಲೂ ಮಹಿಳಾ ವಿರೋಧಿಯಾಗಿದೆ' ಎಂದು ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com