ಚಿನ್ನ ಕಳ್ಳ ಸಾಗಣೆ ಪ್ರಕರಣ: ಅಮೆರಿಕಾಗೆ ಪರಾರಿಯಾಗಿದ್ದ ಆರ್ಥಿಕ ಅಪರಾಧಿ ಮೋನಿಕಾ ಕಪೂರ್ ಸಿಬಿಐಗೆ ಹಸ್ತಾಂತರ

ಒಟ್ಟಾರೆಯಾಗಿ, ಸಿಬಿಐ ಇತ್ತೀಚಿನ ವರ್ಷಗಳಲ್ಲಿ ಪರಸ್ಪರ ಕಾನೂನು ನೆರವು ಅಥವಾ ಇಂಟರ್‌ಪೋಲ್ ಸಮನ್ವಯದ ಮೂಲಕ 100 ಕ್ಕೂ ಹೆಚ್ಚು ಪರಾರಿಯಾದ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಒಂದು ರೀತಿಯ ದಾಖಲೆಯನ್ನು ಸ್ಥಾಪಿಸಿದೆ.
Monika Kapoor
ಮೋನಿಕಾ ಕಪೂರ್
Updated on

ನವದೆಹಲಿ: ಆರ್ಥಿಕ ಅಪರಾಧಿ ಎಂದು ಹೇಳಲಾದ ಮೋನಿಕಾ ಕಪೂರ್ ಅವರನ್ನು ಬುಧವಾರ ಅಮೆರಿಕಾ ಭಾರತಕ್ಕೆ ಹಸ್ತಾಂತರಿಸಿದೆಯ. 25 ವರ್ಷಗಳಿಗೂ ಹೆಚ್ಚು ಕಾಲ ಕಾನೂನು ಕೈಯ್ಯಿಂದ ತಪ್ಪಿಸಿಕೊಂಡಿದ್ದ ಮೋನಿಕಾ ಕಪೂರ್ ಅವರನ್ನು ಸಿಬಿಐ, ಬುಧವಾರ ರಾತ್ರಿ ಅಮೆರಿಕದಲ್ಲಿ ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಅಧಿಕಾರಿಗಳೊಂದಿಗಿನ ನಿರಂತರ ಸಹಕಾರದ ಮೂಲಕ ಅಮೆರಿಕದಲ್ಲಿ ನೇಹಲ್ ಮೋದಿಯನ್ನು ಬಂಧಿಸಿದ ನಂತರ, ಇತ್ತೀಚಿನ ದಿನಗಳಲ್ಲಿ ಇದು ಸಂಸ್ಥೆಗೆ ಸಿಕ್ಕ ಎರಡನೇ ಪ್ರಮುಖ ಯಶಸ್ಸಾಗಿದೆ.

ಅಂತರರಾಷ್ಟ್ರೀಯ ಗಡಿಗಳನ್ನು ಲೆಕ್ಕಿಸದೆ ಭಾರತದಲ್ಲಿ ಅಪರಾಧ ಎಸಗಿ ಪರಾರಿಯಾಗಿರುವವರನ್ನು ತರುವ ಸಿಬಿಐನ ಬದ್ಧತೆ ಪ್ರಶಂಸೆಗೆ ಪಾತ್ರವಾಗಿದೆ. ಪರಾರಿಯಾಗಿರುವ ಆರೋಪಿಯೊಂದಿಗೆ ಸಿಬಿಐ ತಂಡ ಭಾರತಕ್ಕೆ ಮರಳುತ್ತಿದೆ. ಮೋನಿಕಾ ಅವರನ್ನು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು , ಸದ್ಯಕ್ಕೆ ವಿಚಾರಣೆ ಎದುರಿಸಲಿದ್ದಾರೆ ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಸಿಬಿಐ ಇತ್ತೀಚಿನ ವರ್ಷಗಳಲ್ಲಿ ಪರಸ್ಪರ ಕಾನೂನು ನೆರವು ಅಥವಾ ಇಂಟರ್‌ಪೋಲ್ ಸಮನ್ವಯದ ಮೂಲಕ 100 ಕ್ಕೂ ಹೆಚ್ಚು ಪರಾರಿಯಾದ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಒಂದು ರೀತಿಯ ದಾಖಲೆಯನ್ನು ಸ್ಥಾಪಿಸಿದೆ.

ಮೋನಿಕಾ ಓವರ್‌ಸೀಸ್‌ನ ಮಾಲೀಕರಾದ ಕಪೂರ್, ತನ್ನ ಸಹೋದರರಾದ ರಾಜನ್ ಖನ್ನಾ ಮತ್ತು ರಾಜೀವ್ ಖನ್ನಾ ಅವರೊಂದಿಗೆ ಪಿತೂರಿ ನಡೆಸಿ, 1998 ರಲ್ಲಿ ರಫ್ತು ದಾಖಲೆಗಳನ್ನು - ಶಿಪ್ಪಿಂಗ್ ಬಿಲ್‌ಗಳು, ಇನ್‌ವಾಯ್ಸ್‌ಗಳು ಮತ್ತು ಬ್ಯಾಂಕ್ ಪ್ರಮಾಣಪತ್ರಗಳನ್ನು ನಕಲಿ ಮಾಡಿದ್ದಾರೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

Monika Kapoor
ಸಿಬಿಐ-ಇಡಿಯಿಂದ ಗಡಿಪಾರು ಕೋರಿಕೆ: ಅಮೆರಿಕದಲ್ಲಿ ನೀರವ್ ಮೋದಿ ಸಹೋದರ ನೇಹಾಲ್ ಬಂಧನ!

ಅವರು ತಮ್ಮ ಇಬ್ಬರು ಸಹೋದರರೊಂದಿಗೆ, ಆಭರಣ ತಯಾರಿಕೆ ಮತ್ತು ರಫ್ತಿಗೆ ಸುಂಕ ರಹಿತ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಆರು ಮರುಪೂರಣ ಪರವಾನಗಿಗಳನ್ನು ಪಡೆಯಲು ದಾಖಲೆಗಳನ್ನು ನಕಲಿ ಮಾಡಿದ್ದಾರೆ ಎಂದು ಸಂಸ್ಥೆ ಹೇಳಿದೆ. ಪರವಾನಗಿಗಳನ್ನು ಡೀಪ್ ಎಕ್ಸ್‌ಪೋರ್ಟ್ಸ್, ಅಹಮದಾಬಾದ್‌ಗೆ ಪ್ರೀಮಿಯಂನಲ್ಲಿ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಡೀಪ್ ಎಕ್ಸ್‌ಪೋರ್ಟ್ಸ್, ಅಹಮದಾಬಾದ್ ಈ ಪರವಾನಗಿಗಳನ್ನು ಬಳಸಿಕೊಂಡಿತು ಮತ್ತು ಸುಂಕ ರಹಿತ ಚಿನ್ನವನ್ನು ಆಮದು ಮಾಡಿಕೊಂಡಿತು, ಇದರಿಂದ ಸರ್ಕಾರಿ ಖಜಾನೆಗೆ 1.44 ಕೋಟಿ ರೂ.ಗಳಷ್ಟು ನಷ್ಟವನ್ನುಂಟುಮಾಡಿದೆ ಎಂದು ವಕ್ತಾರರು ಹೇಳಿದರು. ಮಾರ್ಚ್ 31, 2004 ರಂದು ಮೋನಿಕಾ ಕಪೂರ್ ಮತ್ತು ಆಕೆಯ ಸಹೋದರರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಆರೋಪಪಟ್ಟಿ ಸಲ್ಲಿಸಲಾಯಿತು.

ನವದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ರಾಜನ್ ಖನ್ನಾ ಮತ್ತು ರಾಜೀವ್ ಖನ್ನಾ ವಿರುದ್ಧ 2017 ರಲ್ಲಿ ದೋಷಾರೋಪಣೆ ಸಲ್ಲಿಸಿತು. ಈ ವೇಳೆ ಕಪೂರ್ ತನಿಖೆ ಮತ್ತು ವಿಚಾರಣೆಗೆ ಹಾಜರಾಗಲಿಲ್ಲ, ಮತ್ತು ಫೆಬ್ರವರಿ 13, 2006 ರಂದು ನ್ಯಾಯಾಲಯವು ಅವರನ್ನು ಘೋಷಿತ ಅಪರಾಧಿ ಎಂದು ಆದೇಶ ಹೊರಡಿಸಿತು.

ಭಾರತದಲ್ಲಿ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದ ಅವರು 1999 ರಲ್ಲಿ ಅಮೆರಿಕಕ್ಕೆ ಹೋದರು ಮತ್ತು ವೀಸಾ ಅವಧಿ ಮುಗಿದ ನಂತರವೂ ಅಲ್ಲಿಯೇ ಇದ್ದರು. ದೆಹಲಿ ವಿಶೇಷ ನ್ಯಾಯಾಲಯವು 2010 ರಲ್ಲಿ ಕಪೂರ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.

ಅಮೆರಿಕದಲ್ಲಿರುವುದನ್ನು ಖಚಿತಪಡಿಸಿಕೊಂಡ ಸಿಬಿಐ, 2012ರಲ್ಲಿ ಉಭಯ ರಾಷ್ಟ್ರಗಳ ನಡುವೆ ನಡೆದ ಒಪ್ಪಂದದನ್ವಯ ಮೋನಿಕಾರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಲ್ಲಿನ ನ್ಯಾಯಾಲಯವನ್ನು ಕೋರಿತು. ಆದರೆ ತಾನು ಅಲ್ಲಿ ಕಿರುಕುಳ ಅನುಭವಿಸುವ ಅಪಾಯ ಇರುವುದರಿಂದ ತನ್ನನ್ನು ಹಸ್ತಾಂತರಿಸದಂತೆ ಮೋನಿಕಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಈ ಮನವಿಯನ್ನು ತಿರಸ್ಕರಿಸಿದ ಅಲ್ಲಿನ ನ್ಯಾಯಾಲಯ, ಶರಣಾಗತಿ ವಾರಂಟ್‌ ಹೊರಡಿಸಿತು. ಆದರೆ ನಂತರದಲ್ಲೂ ಎದುರಾದ ಹಲವು ಕಾನೂನು ತೊಡಕುಗಳು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸಿದ ಸಿಬಿಐ, ತನ್ನ ಕಾನೂನು ಪ್ರಯತ್ನ ಮುಂದುವರಿಸಿತ್ತು. ಅಂತಿಮವಾಗಿ 2025ರ ಮಾರ್ಚ್‌ನಲ್ಲಿ ಮೋನಿಕಾರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ನ್ಯಾಯಾಲಯ ತನ್ನ ಸಮ್ಮತಿ ವ್ಯಕ್ತಪಡಿಸಿತು ಎಂದು ಸಿಬಿಐ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com