Odisha: Anti-rabies ಇಂಜೆಕ್ಷನ್'ಗಾಗಿ 20 ಕಿ.ಮೀ ನಡೆದು ಸಾಗಿದ 95 ವರ್ಷದ ವೃದ್ಧ ಮಹಿಳೆ!

ಗ್ರಾಮದ ಮಂಗಳಬರಿ ಮಹಾರ ಎಂಬ ವೃದ್ಧ ಮಹಿಳೆಗೆ ಬೀದಿ ನಾಯಿಯೊಂದು ಕಚ್ಚಿತ್ತು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಅಂತಿಮ ಇಂಜೆಕ್ಷನ್ ಪಡೆಯಬೇಕಿತ್ತು.
woman
ವೃದ್ಧ ಮಹಿಳೆ.
Updated on

ನುಪಾದ: ಮುಷ್ಕರದಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡ ಪರಿಣಾಮ ರೇಬೀಸ್ ವಿರೋಧಿ ಇಂಜೆಕ್ಷನ್ ಪಡೆಯಲು 95 ವರ್ಷದ ವೃದ್ಧ ಮಹಿಳೆಯೊಬ್ಬರು ಸುಮಾರು 20 ಕಿ.ಮೀವರೆಗೂ ನಡೆದು ಸಾಗಿದ ಘಟನೆಯೊಂದು ಒಡಿಶಾದ ನುಪಾದಾದ ಸಿನಾಪಾಲಿ ಬ್ಲಾಕ್‌ನಲ್ಲಿರುವ ಸಿಕಾಬಹಲ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಂಗಳಬರಿ ಮಹಾರ ಎಂಬ ವೃದ್ಧ ಮಹಿಳೆಗೆ ಬೀದಿ ನಾಯಿಯೊಂದು ಕಚ್ಚಿತ್ತು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಅಂತಿಮ ಇಂಜೆಕ್ಷನ್ ಪಡೆಯಬೇಕಿತ್ತು. ಆದರೆ. ಸಾರಿಗೆ ಸೌಲಭ್ಯವಿಲ್ಲ ಕಾರಣ, ಮಂಗಳಬರಿ ಮತ್ತು ಅವರ ಮಗ ಗುರುದೇವ್ ಮಹಾರ ಸಿನಾಪಾಲಿ ಅವರು ಸಮುದಾಯ ಆರೋಗ್ಯ ಕೇಂದ್ರವನ್ನು ತಲುಪಲು ಅನಿವಾರ್ಯವಾಗಿ ನಡೆದು ಸಾಗಬೇಕಾಯಿತು.

ಘಟನೆ ನನ್ನ ಗಮನಕ್ಕೆ ಬಂದಿದೆ. ಮುಷ್ಕರಕ್ಕೆ ಕರೆ ನೀಡಿರುವ ಸಂಘಟನೆಗಳೇ ಈ ಪರಿಸ್ಥಿತಿಗೆ ಕಾರಣ. ವೃದ್ಧ ಮಹಿಳೆಯನ್ನು ನಡೆಸಿಕೊಂಡು ಹೋಗುವ ಬದಲು ಕುಟುಂವು ಇತರರ ವಾಹನದ ಸಹಾಯ ಪಡೆದು ಕರೆದೊಯ್ಯಬಹುದಿತ್ತು ಎಂದು ಸಿನಾಪಾಲಿ ಬಿಡಿಒ ಕರ್ಮಿ ಓರಮ್ ಅವರು ಹೇಳಿದ್ದಾರೆ.

ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷೆ ದುರ್ಗಾ ಚರಣ್ ಬಿಶಿ ಅವರು ಮಾತನಾಡಿ, ಪ್ರತಿಭಟನೆ ನಡೆಸುತ್ತಿದ್ದರೂ, ನಾವೇನು ಅಗತ್ಯ ಸೇವೆಗಳಿಗೆ ಅಡ್ಡಿಪಡಿಸಿಲ್ಲ. ಬಾಧಿತ ಕುಟುಂಬವಾಗಲಿ ಅಥವಾ ಆಡಳಿತವಾಗಲಿ ಈ ನಿರ್ದಿಷ್ಟ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿಸಿಲ್ಲ. ನಮಗೆ ತಿಳಿಸಿದ್ದರೆ, ನಾವು ಖಂಡಿತವಾಗಿಯೂ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದ್ದೆವು ಎಂದು ತಿಳಿಸಿದ್ದಾರೆ.

woman
93ರ ಹರಯದಲ್ಲಿ ಪತ್ನಿಗೆ ಮಂಗಳಸೂತ್ರ ಖರೀದಿ; ಅಂಗಡಿ ಮಾಲೀಕನ ಹೃದಯ ಶ್ರೀಮಂತಿಕೆಗೆ ವೃದ್ಧ ದಂಪತಿ ಆನಂದ ಬಾಷ್ಪ; Video

ಇಂತಹ ಪರಿಸ್ಥಿತಿ ನಿಭಾಯಿಸಲು ನಮ್ಮಲ್ಲಿ ಅಗತ್ಯ ಸೌಲಭ್ಯಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೆ, ಪ್ರತಿಭಟಿಸುವ ಸಂಘಟನೆಗಳನ್ನು ದೂಷಿಸುವುದು ಸಮರ್ಥನೀಯವಲ್ಲ ಎಂದು ಕಿಡಿಕಾರಿದ್ದಾರೆ.

ಈ ನಡುವೆ ಘಟನೆ ಸಂಬಂಧ ಹಲವರು ಕುಟುಂಬದ ವಿರುದ್ಧವೂ ಕಿಡಿಕಾರಿದ್ದು, ಆ್ಯಂಬುಲೆನ್ಸ್'ಗೆ ಕರೆ ಮಾಡಬಹುದಿತ್ತು ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೃದ್ಧ ಮಹಿಳೆಯ ಪುತ್ರ ಗುರುದೇವ್ ಅವರು, ಲಸಿಕೆಗಾಗಿ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಬಹುದೇ ಎಂಬುದು ನಮಗೆ ತಿಳಿದಿರಲಿಲ್ಲ. ದ್ವಿಚಕ್ರ ವಾಹನವನ್ನು ಸಹಾಯಕ್ಕೆ ಪಡೆಯಬಹುದಿತ್ತು. ಆದರೆ, ನನ್ನ ತಾಯಿಗೆ ಅದರ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಬೇರೆ ಯಾವುದೇ ವಾಹನಗಳೂ ನಮಗೆ ಸಿಗಲಿಲ್ಲ. ಹೀಗಾಗಿ, ನಡೆಯುವುದೊಂದೆ ನಮಗಿದ್ದ ಆಯ್ಕೆಯಾಗಿತ್ತು ಎಂದು ಹೇಳಿದ್ದಾರೆ.

ಸಿನಾಪಾಲಿ ಸಿಎಚ್‌ಸಿಯ ವೈದ್ಯಾಧಿಕಾರಿ ಶ್ರೀಮಾನ್ ಸಾಹೂ ಅವರು ಮಾತನಾಡಿ, ಆಂಬ್ಯುಲೆನ್ಸ್ ಸೇವೆಗಳಿರುವುದು ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆತರೆಲು ಮಾತ್ರ, ಮನೆಗಳಿಗೆ ಹಿಂತಿರುಗಿಸಲು ಸಾಧ್ಯವಾಗುವುದಿಲ್ಲ. ಅಂತಹ ಸೇವೆಗಳು ಇತರೆ ತುರ್ತು ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com