
ಮೀರತ್: ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊಟೆಲ್ ರೂಮಿನಲ್ಲಿ ಲವರ್ ಜೊತೆ ಏಕಾಂತದಲ್ಲಿದ್ದ ಪತ್ನಿಯನ್ನು ಪತಿಯೇ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ಈ ಹಿಂದೆ ಲವರ್ ಜೊತೆ OYO ರೂಮಿಗೆ ಹೋಗಿದ್ದ ಪತ್ನಿಯನ್ನು ಆಕೆಯ ಪತಿ ರೆಡ್ ಹ್ಯಾಂಡ್ ಆಗಿ ಹಿಡಿಯುತ್ತಲೇ ಮಹಿಳೆ ಕಟ್ಟಡ ರೂಮಿನಿಂದಲೇ ಜಿಗಿದು ಪರಾರಿಯಾಗಿದ್ದ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತದೇ ಉತ್ತರ ಪ್ರದೇಶದಲ್ಲಿ ಅಂತಹುದೇ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.
ಈ ಬಾರಿ ಉತ್ತರ ಪ್ರದೇಶದ ಮೀರತ್‌ನಲ್ಲಿ ಓಯೋ ರೂಮಿನಿಂದ ಮಹಿಳೆಯೊಬ್ಬರು ಪರಾರಿಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಓಯೋ ರೂಮಿನಲ್ಲಿ ಲವರ್ ಜೊತೆ ಬರ್ಡ್ ಡೇ ಪಾರ್ಟಿ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯಂತೆ ಮೀರತ್ ಸೇರಿದ ಮಹಿಳೆ ತನ್ನ ಜನ್ಮದಿನ ನಿಮಿತ್ತ ಯೊಬ್ಬರು ತನ್ನ ಲವರ್ ಜೊತೆ ಒಯೋ ರೂಮಿನಲ್ಲಿ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಪತಿ ಮತ್ತು ಮಕ್ಕಳು ಹೊಟೆಲ್ ಗೆ ಆಗಮಿಸುತ್ತಲೇ ಮಹಿಳೆ ಸೀರೆ ಕೂಡ ಧರಿಸದೇ ರೂಮಿನ ಕಿಟಕಿ ಮೂಲಕ ಹೊರಗೆ ಹಾರಿ ಪರಾರಿಯಾಗಿದ್ದಾಳೆ.
ಮಕ್ಕಳೊಂದಿಗೆ ಹೊಟೆಲ್ ರೂಮಿಗೇ ಬಂದ ಗಂಡ
ಮೀರತ್ ನಿವಾಸಿಯಾಗಿರುವ ವಿವಾಹಿತ ಮಹಿಳೆ ತನ್ನ ಗಂಡನಿಗೆ ತಿಳಿಯದೆ ಓಯೋ ಹೊಟೆಲ್ ಗೆ ಹೋಗಿದ್ದಳು. ಕೆಲವು ದಿನಗಳಿಂದ ಆಕೆಯ ನಡವಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆಕೆಯ ಪತಿ ಆಕೆಯ ಮೇಲೆ ಕಣ್ಣಿಡಲು ಪ್ರಾರಂಭಿಸಿದ್ದ. ತನ್ನ ಸ್ನೇಹಿತರು ಮತ್ತು ಸಂಬಂಧಿಗಳ ನೆರವಿನಿಂದ ಆಕೆಯನ್ನು ಆತ ಹಿಂಬಾಲಿಸಿದ್ದ. ಅಷ್ಟರಲ್ಲಿ, ಆಕೆ ಓಯೋ ಹೊಟೆಲ್ ಗೆ ಹೋಗಿರುವುದು ಪತ್ತೆಯಾಗಿದೆ. ತಕ್ಷಣ ಆಕೆಯ ಪತಿ ಮತ್ತು ಮಕ್ಕಳು ಓಯೋ ಲಾಡ್ಜ್‌ಗೆ ಹೋಗಿದ್ದಾರೆ.
ಈ ವೇಳೆ ರೂಮಿನಲ್ಲಿ ಲವರ್ ಜೊತೆ ಏಕಾಂತದಲ್ಲಿದ್ದ ಮಹಿಳೆ ತನ್ನ ರಹಸ್ಯ ಬಯಲಾಗುತ್ತದೆ ಎಂದು ಹೆದರಿ ಕಿಟಕಿಯಿಂದ ಹೊರಗೆ ಹಾರಿದ್ದಾಳೆ. ಆಕೆಯ ಪತಿಯನ್ನು ನೋಡುತ್ತಿದ್ದಂತೆ.. ಮಹಿಳೆ ಬೇರೆ ಕೋಣೆಯಿಂದ ಓಡಿಹೋಗಿದ್ದಾಳೆ. ಗೋಡೆ ಹಾರುವ ವೇಳೆ ಮಹಿಳೆಯ ಸೀರೆ ಅಸ್ತವ್ಯಸ್ಥಗೊಂಡಿದ್ದು ಅದನ್ನೂ ಲೆಕ್ಕಿಸದ ಮಹಿಳೆ ಕಾಪೌಂಡ್ ಮೇಲೆ ಏಗರಿ ಕತ್ತಲಿನಲ್ಲೇ ಪರಾರಿಯಾಗುತ್ತಾಳೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋ ವೈರಲ್
ಈ ವಿಡಿಯೋವನ್ನು official_the_original_files ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ಈ ವಿಡಿಯೋವನ್ನು 5.1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಅಂತೆಯೇ 46 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿ ಸಾವಿರಾರು ಕಮೆಂಟ್ ಗಳು ಬಂದಿವೆ.
ಇನ್ನು official_the_original_files ಖಾತೆ ಅಡ್ಮಿನ್, 'ನಾವು ನಕಲಿ ಅಥವಾ AI ವೀಡಿಯೊಗಳನ್ನು ತಯಾರಿಸುವುದಿಲ್ಲ.. ಬದಲಿಗೆ ಸಮಾಜದ ನೈಜ ಘಟನೆಗಳನ್ನು ನಿಮ್ಮ ಮುಂದೆ ತರುತ್ತೇವೆ' ಎಂದು ಹೇಳಿಕೊಂಡಿದ್ದಾರೆ.
Advertisement