
ಚೆನ್ನೈ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ನಮ್ಮ ಒಂದೇ ಒಂದು ಗುರಿ ಕೂಡ ವಿಫಲಗೊಂಡಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಶುಕ್ರವಾರ ಹೇಳಿದ್ದಾರೆ.
ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅಜಿತ್ ದೋವಲ್ ಅವರು, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಶ್ಲಾಘಿಸಿದರು.
ಗಡಿಯಾಚೆಗಿನ ಬೆದರಿಕೆಗಳನ್ನು ತಟಸ್ಥಗೊಳಿಸುವಲ್ಲಿ ಭಾರತದ ಸಾಮರ್ಥ್ಯ ಮತ್ತು ತಾಂತ್ರಿಕ ಸಾಮರ್ಥ್ಯಗಳ ಬಗ್ಗೆ ನಮಗೆ ಹೆಮ್ಮೆಯಿದೆ. ಉಗ್ರರ ವಿರುದ್ಧ ನಾವು ನಡೆಸಿದ ಆಪರೇಷನ್ ಸಿಂಧೂರ್ ಮೇ 7 ರಂದು ಬೆಳಗಿನ ಜಾವ 1 ಗಂಟೆಯಿಂದ ಕೇವಲ 23 ನಿಮಿಷಗಳ ಕಾಲ ನಡೆಯಿತು. ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಹೊಡೆದುರುಳಿಸಲು ನಾವು ನಿರ್ಧರಿಸಿದ್ದೆವು. ನಮ್ಮ ಯಾವುದ ಗುರಿ ವಿಫಲಗೊಂಡಿಲ್ಲ. ನಮ್ಮ ಗುರಿಯನ್ನು ಹೊರತುಪಡಿಸಿ ಬೇರೆಲ್ಲಿಯೂ ನಾವು ದಾಳಿ ಮಾಡಿಲ್ಲ ಎಂದು ಹೇಳಿದರು.
ಭಾರತದ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಆದರೆ, ಇದರಿಂದ ಭಾರತಕ್ಕೆ ಯಾವುದೇ ಹಾನಿಯಾಗಿಲ್ಲ. ಹಾನಿಯಾಗಿದೆ ಹೇಳುತ್ತಿರುವವರು ಯಾವುದೇ ಹಾನಿಯನ್ನು ತೋರಿಸುವ ಒಂದೇ ಒಂದು ಫೋಟೋ ತೋರಿಸಲಿ ಎಂದು ಸವಾಲು ಹಾಕಿದರು.
Advertisement