
ನವದೆಹಲಿ: ಕುಡಿದ ಅಮಲಿನಲ್ಲಿ ಪಾದಚಾರಿ ಮಾರ್ಗದಲ್ಲಿ ಮಲಗಿದ್ದವರ ಮೇಲೆ ಆಡಿ ಕಾರು ಹರಿಸಿದ ಪರಿಣಾಮ 8 ವರ್ಷದ ಬಾಲಕಿ ಸೇರಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿಯ ವಸಂತ್ ವಿಹಾರ್‌ನಲ್ಲಿ ನಡೆದಿದೆ.
ಗಾಯಾಗಳುಗಳನ್ನು ರಾಜಸ್ಥಾನ ಮೂಲದ ಲಾಧಿ (40), ಅವರ ಮಗಳು ಬಿಮ್ಲಾ (8), ಅವರ ಪತಿ ಸಬಾಮಿ ಅಲಿಯಾಸ್ ಚಿರ್ಮಾ (45) ಮತ್ತು ದಂಪತಿಗಳಾದ ರಾಮ್ ಚಂದರ್ (45) ಮತ್ತು ನಾರಾಯಣಿ (35) ಎಂದು ಗುರ್ತಿಸಲಾಗಿದೆ.
ದೆಹಲಿಯ ವಸಂತ ವಿಹಾರ್ ಪ್ರದೇಶದ ಶಿವ ಕ್ಯಾಂಪ್ ಬಳಿ ಕಾರು ಚಾಲಕನೋರ್ವ ಬುಧವಾರ ತಡರಾತ್ರಿ ಸುಮಾರು 1:45 ವೇಳೆಗೆ ವೇಗವಾಗಿ ಬಂದು ಫುಟ್‌ಪಾತ್ ನಲ್ಲಿ ಮಲಗಿದ್ದವರ ಮೇಲೆ ಹರಿಸಿದ್ದಾರೆ.
ಪರಿಣಾಮ ಎಂಟು ವರ್ಷದ ಬಾಲಕಿ ಸೇರಿ ಒಟ್ಟು ಐದು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಘಟನೆ ಸಂಭವಿಸಿದ ಕೂಡಲೇ ಸ್ಥಳೀಯರು ಸೇರಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಕಾರು ಚಾಲಕನನ್ನು ಬಂಧಿಸಲಾಗಿದೆ ಅಲ್ಲದೆ, ಚಾಲನೆ ವೇಳೆ ಮದ್ಯಪಾನ ಮಾಡಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement