
ಗುವಾಹಟಿ: ಪತ್ನಿಯಿಂದ ವಿಚ್ಛೇದನ ಪಡೆದ ಅಸ್ಸಾಂ ನಿವಾಸಿಯೊಬ್ಬರು ಹಾಲಿನಿಂದ ಸ್ನಾನ ಮಾಡಿ ಸಂಭ್ರಮಿಸಿರುವ ಘಟನೆ ನಡೆದಿದೆ.
ಕೆಳ ಅಸ್ಸಾಂನ ನಲ್ಬಾರಿ ಜಿಲ್ಲೆಯ ನಿವಾಸಿ ಮಾಣಿಕ್ ಅಲಿ ಎಂಬುವವರು ಪತ್ನಿಯಿಂದ ವಿಚ್ಛೇದನ ಪಡೆದ ಬಳಿಕ ಹಾಲಿನಿಂದ ಸ್ನಾನ ಮಾಡಿದ್ದಾರೆ. ಈ ವಿಡಿಯೋದಲ್ಲಿ, ಅಲಿ ತಮ್ಮ ಮನೆಯ ಹೊರಗೆ ನಿಂತು ನಾಲ್ಕು ಬಕೆಟ್ ಹಾಲಿನ ಮೂಲಕ ಸ್ನಾನ ಮಾಡಿ ವಿಚ್ಛೇದನವನ್ನು ಸಂಭ್ರಮಿಸಿರುವುದನ್ನು ಕಾಣಬಹುದು.
ಅಲಿ ಅವರು ಈ ಆಚರಣೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಮತ್ತು 'ನಾನು ಇಂದಿನಿಂದ ಮುಕ್ತನಾಗಿದ್ದೇನೆ' ಎಂದು ಘೋಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
'ಅವಳು ಆಗ್ಗಾಗ್ಗೆ ತನ್ನ ಪ್ರೇಮಿಯೊಂದಿಗೆ ಓಡಿಹೋಗುತ್ತಲೇ ಇದ್ದಳು. ನಮ್ಮ ಕುಟುಂಬದ ನೆಮ್ಮದಿಗಾಗಿ ನಾನು ಮೌನವಾಗಿದ್ದೆ. ವಿಚ್ಛೇದನ ಸಿಕ್ಕಿದೆ ಎಂದು ನನ್ನ ವಕೀಲರು ನಿನ್ನೆ ನನಗೆ ತಿಳಿಸಿದರು. ಆದ್ದರಿಂದ, ಇಂದು ನಾನು ನನ್ನ ಸ್ವಾತಂತ್ರ್ಯವನ್ನು ಆಚರಿಸಲು ಹಾಲಿನಲ್ಲಿ ಸ್ನಾನ ಮಾಡುತ್ತಿದ್ದೇನೆ' ಎಂದು ಅಲಿ ವಿಡಿಯೋದಲ್ಲಿ ಹೇಳಿದ್ದಾರೆ.
ಸ್ಥಳೀಯರ ಪ್ರಕಾರ, ದಂಪತಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಲು ನಿರ್ಧರಿಸುವ ಮುನ್ನ ಅಲಿ ಅವರ ಪತ್ನಿ ಕನಿಷ್ಠ ಎರಡು ಬಾರಿ ಓಡಿಹೋಗಿದ್ದರು.
Advertisement