
ನವದೆಹಲಿ: ಇತ್ತೀಚಿನ ಭಾರತ ಮತ್ತು ಪಾಕಿಸ್ತಾನ ನಡುವಣ 'ಆಪರೇಷನ್ ಸಿಂಧೂರ' ಸೇನಾ ಸಂಘರ್ಷದ ನಂತರ ಭಾರತ ರಕ್ಷಣಾ ವಲಯಕ್ಕೆ ಮತ್ತಷ್ಟು ಹೆಚ್ಚಿನ ಆದ್ಯತೆ ನೀಡಿದೆ. ಅಗತ್ಯ ಸೇನಾ ಉಪಕರಣಗಳನ್ನು ಸ್ವದೇಶವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ವಿದೇಶದಿಂದಲೂ ಖರೀದಿ ಮಾಡುತ್ತಿದೆ.
LCA ಮಾರ್ಕ್ 1A ಯುದ್ಧ ವಿಮಾನಗಳನ್ನು ಖರೀದಿಸುತ್ತಿರುವ ಭಾರತ ಸೋಮವಾರ ಅದರ ಇಂಜಿನ್ ಪಡೆದಿದೆ. ಅಮೆರಿಕದಿಂದ ಎರಡನೇ GE-404 ಇಂಜಿನ್ ನನ್ನು ಭಾರತ ಪಡೆದುಕೊಂಡಿದೆ.
ಭಾರತೀಯ ಸಾರ್ವಜನಿಕ ವಲಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ 12 GE-404 ಎಂಜಿನ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.
LCA ಮಾರ್ಕ್ 1A ಫೈಟರ್ ಜೆಟ್‌ಗಳಲ್ಲಿ ಈ ಇಂಜಿನ್ ಗಳನ್ನು ಅಳವಡಿಸಲಾಗುವುದು. ಭಾರತೀಯ ವಾಯುಪಡೆಯು 83 LCA ಮಾರ್ಕ್ 1A ಯುದ್ಧ ವಿಮಾನಗಳಿಗೆ ಆರ್ಡರ್ ಮಾಡಿದೆ.
ರಕ್ಷಣಾ ಸಚಿವಾಲಯದ ಅನುಮತಿಯ ನಂತರ 97ಕ್ಕೂ ಹೆಚ್ಚಿನ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಯು ಮುಂದುವರಿದ ಹಂತದಲ್ಲಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
Advertisement