ಮತಾಂತರ ಜಾಲ: Chhangur Baba, ಸಹಚರರ ಆಸ್ತಿಗಳ ಮೇಲೆ ಇಡಿ ದಾಳಿ

ಸ್ವಯಂ ಘೋಷಿತ ಧರ್ಮ ವೈದ್ಯ ಜಮಾಲುದ್ದೀನ್‌ ಶಾ ಅಥವಾ ಛಂಗೂರ್‌ ಬಾಬಾ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 14 ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಏಕಕಾಲದಲ್ಲಿ ದಾಳಿ ನಡೆಸಿದೆ.
ED raids 14 properties of Changur Baba, associates
ಚೆಂಗೂರ್ ಬಾಬಾ ನಿವಾಸ
Updated on

ನವದೆಹಲಿ: ಮತಾಂತರ ಜಾಲವನ್ನು ನಡೆಸುತ್ತಿದ್ದ ಮತ್ತು ವಿದೇಶಿ ನಿಧಿಯಿಂದ ಅಪಾರ ಸಂಪತ್ತು ಗಳಿಸಿದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಸ್ವಯಂ ಘೋಷಿತ ಪಾದ್ರಿ ಜಮಾಲುದ್ದೀನ್‌ ಶಾ ಅಥವಾ ಛಂಗೂರ್‌ ಬಾಬಾ ಗೆ ಸಂಬಂಧಿಸಿದ 14 ಸಂಸ್ಥೆಗಳ ಮೇಲೆ ಇಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌)ದಿಂದ ಬಂಧನಕ್ಕೊಳಪಟ್ಟಿರುವ ಸ್ವಯಂ ಘೋಷಿತ ಧರ್ಮ ವೈದ್ಯ ಜಮಾಲುದ್ದೀನ್‌ ಶಾ ಅಥವಾ ಛಂಗೂರ್‌ ಬಾಬಾ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 14 ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಏಕಕಾಲದಲ್ಲಿ ದಾಳಿ ನಡೆಸಿದೆ.

ಚೆಂಗೂರ್ ಬಾಬಾ ಪ್ರಮುಖ ಧಾರ್ಮಿಕ ಮತಾಂತರ ಜಾಲದ ಸೂತ್ರಧಾರಿ ಎಂಬ ಆರೋಪದ ನಂತರ ಉತ್ತರ ಪ್ರದೇಶದ ಬಲರಾಂಪುರದಲ್ಲಿ 12 ಸ್ಥಳಗಳಲ್ಲಿ ಮತ್ತು ಮುಂಬೈನಲ್ಲಿ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಜಾರಿ ನಿರ್ದೇಶನಾಲಯವು ಗಣನೀಯ ಪ್ರಮಾಣದ ಭೂ ದಾಖಲೆಗಳು, ಐಷಾರಾಮಿ ವಾಹನಗಳು, ಚಿನ್ನ ಮತ್ತು ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ದಾಳಿ ನಡೆಸಲಾದ ಪ್ರಮುಖ ಸ್ಥಳಗಳಲ್ಲಿ ಒಂದು ಮುಂಬೈನ ಶಹಜಾದ್‌ ಶೇಖ್‌ಗೆ ಸಂಬಂಧಿಸಿದೆ. ಅಲ್ಲಿ ತನಿಖಾಧಿಕಾರಿಗಳು ಛಂಗೂರ್‌ ಬಾಬಾ ಅವರ ಖಾತೆಗಳಿಂದ ಶೇಖ್‌ ಅವರ ಖಾತೆಗಳಿಗೆ ಒಂದು ಕೋಟಿ ರೂ.ಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ ಎಂಬುದನ್ನು ಪತ್ತೆ ಮಾಡಲಾಗಿದೆ.

ED raids 14 properties of Changur Baba, associates
"Mitti, Kajal, Darshan": ಬೃಹತ್ ಧಾರ್ಮಿಕ ಮತಾಂತರ ಜಾಲ ಬಹಿರಂಗ; ಏನಿದು Chhangur Baba ಕೋಡ್ ವರ್ಡ್ ಪ್ರಾಜೆಕ್ಟ್?

ತಾಯತ, ಉಗುರ ಮಾರುತ್ತಿದ್ದ ಚೆಂಗೂರ್ ಬಾಬಾ

ಒಂದು ಕಾಲದಲ್ಲಿ ತನ್ನ ಸೈಕಲ್‌ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದ ಛಂಗೂರ್‌ ಬಾಬಾ, ಈಗ ವಿದೇಶಿ ಮೂಲದಿಂದ ಹಣ ಸಂಗ್ರಹಿಸಲಾದ ಅತ್ಯಾಧುನಿಕ ಮತಾಂತರ ಸಿಂಡಿಕೇಟ್‌ ಅನ್ನು ನಡೆಸುತ್ತಿರುವ ಆರೋಪ ಎದುರಿಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಈ ಹಿಂದೆ ಆತನ ಸಹ ಆರೋಪಿ ನೀತು ಅಲಿಯಾಸ್‌ ನಸ್ರೀನ್‌ ಮತ್ತು ಆಕೆಯ ಪತಿ ನವೀನ್‌ ಅವರನ್ನು ವಶಕ್ಕೆ ಪಡೆದಿತ್ತು. ಛಂಗೂರ್‌ ಬಾಬಾ ಧಾರ್ಮಿಕ ನಂಬಿಕೆಯ ಸೋಗಿನಲ್ಲಿ ತನ್ನ ಚಟುವಟಿಕೆಗಳನ್ನು ಮರೆಮಾಚುತ್ತಾ ಗಣನೀಯ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಪ್ರಾಥಮಿಕ ತನಿಖೆಗಳು ಆತನೊಂದಿಗೆ ಸಂಬಂಧ ಹೊಂದಿದೆ ಎಂದು ನಂಬಲಾದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಪತ್ತೆಹಚ್ಚಿವೆ.

ಛಂಗೂರ್‌ ಬಾಬಾ ಅವರ ಆಪ್ತ ವಲಯ, ನೀತು ಅಲಿಯಾಸ್‌ ನಸ್ರೀನ್‌ ಸೇರಿದಂತೆ ಅವರ ಆಪ್ತ ಅನುಯಾಯಿಗಳು, ಸಹಚರರು ಮತ್ತು ವ್ಯವಸ್ಥಾಪಕರನ್ನು ಒಳಗೊಳ್ಳಲು ವಿಸ್ತರಿಸಿದೆ. ಅಧಿಕಾರಿಗಳು ಪ್ರಸ್ತುತ ಅವರ ಬ್ಯಾಂಕ್‌ ಖಾತೆಗಳು, ಹಣಕಾಸು ವಹಿವಾಟುಗಳು ಮತ್ತು ಸ್ಥಿರ ಆಸ್ತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವಿದೇಶಿ ವಹಿವಾಟುಗಳು ಆಪಾದಿತ ಮತಾಂತರ ಕಾರ್ಯಾಚರಣೆಗಳಿಗೆ ಸಂಬಂಧಿಸಿವೆಯೇ ಎಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ED raids 14 properties of Changur Baba, associates
ಪಾಕ್ ನ ISI ಜೊತೆಗೆ ಬಾಂಧವ್ಯ ಬಲಪಡಿಸಲು ನೇಪಾಳಕ್ಕೆ ತೆರಳಿದ್ದ Chhangur Baba; ಮತ್ತಷ್ಟು ಸ್ಪೋಟಕ ಮಾಹಿತಿ ಬಹಿರಂಗ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com