
ಮುಂಬೈ: ಇಲ್ಲಿನ ವಿರಾರ್ ಪಶ್ಚಿಮದಲ್ಲಿರುವ ಕಟ್ಟಡವೊಂದರ ಲಿಫ್ಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಬ್ಲಿಂಕಿಟ್ ಡೆಲಿವರಿ ಏಜೆಂಟ್ ವಿರುದ್ಧ ಪ್ರಕರಣ ದಾಖಲಾಗಿದೆ.
ಅಲ್ಲಿನ ನಿವಾಸಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ, ಲಿಫ್ಟ್ ಒಳಗೆ ಬರುವ ಡೆಲಿವರಿ ಏಜೆಂಟ್ ಎಡಗೈಯಲ್ಲಿ ಪಾರ್ಸೆಲ್ ಹಿಡಿದಿರುವುದು ಕಂಡುಬರುತ್ತದೆ. ಬಳಿಕ ಆತ ಕ್ಯಾಮೆರಾಗೆ ಬೆನ್ನು ತೋರಿಸಿ ಲಿಫ್ಟ್‌ನ ಮುಂಭಾಗದ ಗೇಟ್‌ಗೆ ಮೂತ್ರ ವಿಸರ್ಜಿಸಿರುವುದು ಸೆರೆಯಾಗಿದೆ.
ಮುಂಬೈನ ವಿರಾರ್ ಪಶ್ಚಿಮದಲ್ಲಿರುವ ಸಿಡಿ ಗುರುದೇವ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ.
ಕಟ್ಟಡದ ನಿವಾಸಿಗಳು ಲಿಫ್ಟ್‌ನಲ್ಲಿ ಸಮಸ್ಯೆಯನ್ನು ಗಮನಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಇದರಲ್ಲಿ ಬ್ಲಿಂಕಿಟ್ ಜಾಕೆಟ್ ಧರಿಸಿದ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯ ನಂತರ, ನಿವಾಸಿಗಳು ಬ್ಲಿಂಕಿಟ್ ಕಚೇರಿಯಲ್ಲಿ ಆರೋಪಿಯನ್ನು ಪತ್ತೆಮಾಡಿದ್ದು, ಆತನಿಗೆ ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ವಿರಾರ್ ಪಶ್ಚಿಮದ ಬೊಲಿಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
Advertisement