ಏರ್ ಇಂಡಿಯಾ ವಿಮಾನ ದುರಂತ: ತಪ್ಪಾದ ಶವ ಹಸ್ತಾಂತರ ಆರೋಪ; ಬ್ರಿಟಿಷ್ ಮಾಧ್ಯಮದ ವರದಿ ತಳ್ಳಿ ಹಾಕಿದ ಭಾರತ

ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟ್ಟಿದ್ದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ವೈದ್ಯರ ವಸತಿ ಕಟ್ಟಡಕ್ಕೆ ಅಪ್ಪಳಿಸಿತ್ತು.
External Affairs Ministry spokesperson Randhir Jaiswal
MEA ವಕ್ತಾರ ರಣಧೀರ್ ಜೈಸ್ವಾಲ್
Updated on

ನವದೆಹಲಿ: ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಬ್ರಿಟನ್ ನ (ಯುಕೆ) ಎರಡು ಕುಟುಂಬಗಳಿಗೆ ಬೇರೆಯವರ ಮೃತದೇಹ ನೀಡಲಾಗಿದೆ ಎಂಬ ಬ್ರಿಟಿಷ್ ಮಾಧ್ಯಮ ವರದಿಯನ್ನು ಭಾರತ ಬುಧವಾರ ತಳ್ಳಿಹಾಕಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಎಲ್ಲಾ ಮೃತದೇಹಗಳನ್ನು ಅತ್ಯಂತ ವೃತ್ತಿಪರತೆಯಿಂದ ಮತ್ತು ಮೃತರ ಘನತೆಗೆ ಧಕ್ಕೆಯಾಗದ ಹಾಗೆ ಗೌರವದಿಂದ ನಿರ್ವಹಿಸಲಾಗಿದೆ ಎಂದು ಹೇಳಿದೆ.

ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟ್ಟಿದ್ದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ವೈದ್ಯರ ವಸತಿ ಕಟ್ಟಡಕ್ಕೆ ಅಪ್ಪಳಿಸಿತ್ತು. ಪರಿಣಾಮ ಅದರಲ್ಲಿದ್ದ 241 ಪ್ರಯಾಣಿಕರು ಮತ್ತು ಅಪಘಾತಕ್ಕೀಡಾದ ಸ್ಥಳದಲ್ಲಿದ್ದ 19 ಜನರು ಸಾವನ್ನಪ್ಪಿದರು. ಒಬ್ಬ ಪ್ರಯಾಣಿಕ ಬದುಕುಳಿದಿದ್ದಾನೆ. ಮೃತರಲ್ಲಿ 53 ಮಂದಿ ಬ್ರಿಟಿಷ್ ಪ್ರಜೆಗಳೂ ಸೇರಿದ್ದಾರೆ.

ಬ್ರಿಟಿಷ್ ಮಾಧ್ಯಮಗಳ ವರದಿ ನೋಡಿದ್ದು, ಬ್ರಿಟನ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಅಲ್ಲದೆ ದುರಂತದ ನಂತರ ಸಂಬಂಧಪಟ್ಟ ಅಧಿಕಾರಿಗಳು ಶಿಷ್ಟಾಚಾರ ಮತ್ತು ತಾಂತ್ರಿಕ ನೆರವಿನ ಮೂಲಕವೇ ಮೃತರ ಗುರುತು ಪತ್ತೆ ಮಾಡಿದ್ದಾರೆ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಮೃತದೇಹದ ಹಸ್ತಾಂತರ ವೇಳೆ ತಪ್ಪಾದ ಶವ ಕೊಡಲಾಗಿದೆ. ಇದರಿಂದ ಕುಟುಂಬಸ್ಥರು ಇನ್ನಷ್ಟು ನೋವನ್ನು ಅನುಭವಿಸುತ್ತಿದ್ದಾರೆ ಎಂಬ ಡೈಲ್ ಮೇಲ್ ಸುದ್ದಿ ಸಂಸ್ಥೆ ವರದಿ ಕುರಿತು ಜೈಸ್ವಾಲ್ ಪ್ರತಿಕ್ರಿಯಿಸಿದ್ದಾರೆ.

External Affairs Ministry spokesperson Randhir Jaiswal
'ಪೈಲಟ್ ಎಡವಟ್ಟಿನಿಂದಲೇ ಏರ್ ಇಂಡಿಯಾ ವಿಮಾನ ಪತನ ವರದಿ': Wall Street Journal, Reuters ವಿರುದ್ಧ ಭಾರತೀಯ ಪೈಲಟ್‌ಗಳ ಒಕ್ಕೂಟ ಲೀಗಲ್ ನೋಟಿಸ್!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com