
ಶಿಲ್ಲಾಂಗ್: ಹನಿಮೂನ್ ಗೆ ಬಂದಿದ್ದ ಗಂಡನನ್ನೇ ಪ್ರಿಯತಮನೊಂದಿಗೆ ಸೇರಿ ಹತ್ಯೆ ಮಾಡಿರುವ Sonam Raghuvanshi ಸುದ್ದಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಗಂಡನ ಹತ್ಯೆಗೆ ಸೋನಂ ರೂಪಿಸಿದ್ದ ಮಾಸ್ಟರ್ ಪ್ಲಾನ್ ಇದೀಗ ರಿವೀಲ್ ಆಗಿದೆ.
ಹೌದು.. ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆರೋಪಿ ಪತ್ನಿ ಸೋನಂ ರಘುವಂಶಿಯ (Sonam Raghuvanshi) ಕರಾಳ ಮುಖಗಳು ಒಂದೊಂದಾಗಿ ಬಹಿರಂಗವಾಗುತ್ತಿದ್ದು, ಹನಿಮೂನ್ ಗೂ ಮುನ್ನ ತನ್ನ ಪ್ರಿಯತಮನಿಗೆ 'ವಿಧವೆಯಾಗಿ ನಿನ್ನ ಮದುವೆಯಾಗ್ತೇನೆ' ಎಂದು ಹೇಳಿದ್ದ ಸೋನಂ ಮಾತು ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಮದುವೆಯಾಗಿ ಕೇವಲ 11 ದಿನಗಳಲ್ಲೇ ಗಂಡನನ್ನು ಹನಿಮೂನ್ ಗಾಗಿ ಹಿಮಾಚಲ ಪ್ರದೇಶಕ್ಕೆ ಕರೆತಂದಿದ್ದ ಸೋನಂ ರಘುವಂಶಿ ತನ್ನ ಪ್ರಿಯಕರ ರಾಜ್ ಕುಶ್ವಾಹ್ ನ ಜೊತೆ ಸೇರಿ ಪತಿ ರಾಜಾ ರಘುವಂಶಿಯನ್ನು ಕೊಂದು ಹಾಕಿದ್ದಾಳೆ.
ವಿಧವೆಯಾಗಿ ನಿನ್ನ ಮದುವೆಯಾಗ್ತೇನೆ: ಸೋನಂ ಖತರ್ನಾಕ್ ಸಂಚು ರಿವೀಲ್
ಅಸಲಿಗೆ ರಾಜ ರಘುಂವಶಿಯನ್ನ (Raja Raghuvanshi) ಕೊಂದು ಇಡೀ ಪ್ರಕರಣವನ್ನ ದರೋಡೆಯಂತೆ ಬಿಂಬಿಸುವುದು ಸೋನಂ ಪ್ಲ್ಯಾನ್ ಆಗಿತ್ತು. ಸೋನಂ ಈ ಬಗ್ಗೆ ಪ್ರಿಯಕರ ರಾಜ್ ಕುಶ್ವಾಹಗೆ (Raj Kushwaha) ತಿಳಿಸಿದ್ದಳು. ರಾಜಾ ರಘವಂಶಿಯನ್ನು ಕೊಂದು ಅದನ್ನ ದರೋಡೆಯಂತೆ ಬಿಂಬಿಸೋಣ. ನಾನು ವಿಧವೆಯಾದ್ಮೇಲೆ ನನ್ನ ತಂದೆ ನನ್ನನ್ನ ನಿನಗೇ ಕೊಟ್ಟು ಮದುವೆ ಮಾಡ್ತಾರೆ ಅಂತಲೂ ಹೇಳಿದ್ದಳಂತೆ ವಂಚಕಿ ಸೋನಂ. ಇದಕ್ಕೆ ರಾಜ್ ಸಹ ಒಪ್ಪಿಕೊಂಡಿದ್ದನಂತೆ. ಬಳಿಕ ಇಬ್ಬರೂ ಸೇರಿ ಹನಿಮೂನ್ ಪ್ಲಾನ್ ಮಾಡಿದರಂತೆ.
ಪತಿಗೆ ಒತ್ತಾಯಿಸಿ ಲಕ್ಷ ಲಕ್ಷ ಚಿನ್ನಾಭರಣ ಹೇರಿಸಿದ್ದ ಸೋನಂ
ಇನ್ನು ತನ್ನ ಪತಿಯ ಕೊಲ್ಲಲು ಹನಿಮೂನ್ ಪ್ಲಾನ್ ರೂಪಿಸಿದ್ದ ಸೋನಂ ಹನಿಮೂನ್ ಗೆ ತೆರಳಲು ಪತಿ ರಾಜಾ ರಘುವಂಶಿಗೆ ಸಾಕಷ್ಟು ಚಿನ್ನಾಭರಣ ಹಾಕಿಕೊಳ್ಳಲು ಬಲವಂತ ಮಾಡಿದ್ದಳಂತೆ. ಇದು ಪತಿಗೆ ಕೊಂಚ ಅಚ್ಚರಿ ಅನಿಸಿದರೂ ಆತ ಪತ್ನಿತ ಮಾತಿನಂತೆ ಚಿನ್ನಾಭರಣಗಳನ್ನು ಧರಿಸಿಕೊಂಡು ಹನಿಮೂನ್ ಹೋಗಿದ್ದನಂತೆ. ಹೀಗೆ ರಾಜಾ ರಘವಂಶಿ ಧರಿಸಿದ್ದ ಚಿನ್ನಾಭರಣಗಳ ಮೌಲ್ಯವೇ ಕನಿಷ್ಛ 10 ಲಕ್ಷ ರೂ ದಾಟಿತ್ತು ಎನ್ನಲಾಗಿದೆ.
ಹೃದ್ರೋಗಿ ತಂದೆಗೆ ಚಳ್ಳೆ ಹಣ್ಣು
ಇನ್ನು ಹೃದ್ರೋಗಿಯಾಗಿದ್ದ ಸೋನಂ ತಂದೆ ದೇವಿ ಸಿಂಗ್, ತನ್ನ ಕಾರ್ಖಾನೆಯಲ್ಲೇ ಕೆಲಸ ಮಾಡ್ತಿದ್ದ ರಾಜ್‌ಗೆ ಕೊಟ್ಟು ಮದ್ವೆ ಮಾಡಲು ಒಪ್ಪಿಕೊಳ್ಳಲ್ಲ ಅನ್ನೋದು ಸೋನಂಗೆ ಗೊತ್ತಿತ್ತು. ಹಾಗಾಗಿಯೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದಳು. ಮೊದಲು ರಾಜಾ ರಘವಂಶಿಯನ್ನ ಮದುವೆ ಆಗಿಬಿಡೋಣ, ಅವನನ್ನು ಕೊಂದಮೇಲೆ ವಿಧವೆ ಅನ್ನೋ ಮಮಕಾರದಲ್ಲಾದ್ರೂ ರಾಜ್‌ಗೆ ತನ್ನನ್ನು ಕೊಟ್ಟು ಮದುವೆ ಮಾಡುತ್ತಾರೆ ಎಂಬುದು ಅವಳ ಪ್ಲ್ಯಾನ್ ಆಗಿತ್ತು ಎಂದು ಪೊಲೀಸ್ ವಿಚಾರಣೆ ಮೂಲಕ ತಿಳಿದುಬಂದಿದೆ.
ಆಗಿದ್ದೇನು?
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು.
ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.
ರಾಜಾ ರಘುವಂಶಿ ಕೊಲೆಗೆ ಸೋನಂ ತನ್ನ ಪ್ರಿಯಕರನೊಂದಿಗೆ ಸೇರಿ ಮಧ್ಯಪ್ರದೇಶ ಮೂಲದ ಬಾಡಿಗೆ ಕೊಲೆಗಾರರನ್ನು ನೇಮಿಸಿದ್ದಳು. ಈ ದಂಪತಿ ಎಲ್ಲೆಲ್ಲಿಗೆ ಹೋಗ್ತಿದ್ದಾರೆ ಅನ್ನೋ ಅಪ್ಡೇಟ್ ಪಡೆದುಕೊಂಡು ನೇಮಿಸಿದ್ದ ಕಾಂಟ್ರ‍್ಯಾಕ್ಟ್ ಕಿಲ್ಲರ್‌ಗಳಿಗೆ ಫೋನ್ ಮೂಲಕವೇ ಮುಂದೇನು ಮಾಡಬೇಕು ಅನ್ನೋದ್ರ ಬಗ್ಗೆ ಪ್ರಿಯಕರ ರಾಜ ಸೂಚನೆ ಕೊಡ್ತಿದ್ದ. ಸೋನಮ್ ಶಿಲ್ಲಾಂಗ್‌ನಲ್ಲಿ ಕಿಲ್ಲರ್‌ಗಳನ್ನ ಭೇಟಿಯಾದ ಬಳಿಕ ಗೈಡ್‌ಗಳ ನೆಪದಲ್ಲಿ ಚಿರಾಪುಂಜಿ ತಲುಪಿದ್ರು. ಈ ವೇಳೆ ಸೋನಮ್ ನಿರ್ಜನ ಪ್ರದೇಶಕ್ಕೆ ಕರೆದೊಯ್ದಾಗ ಅಲ್ಲಿಯೇ ಹಂತಕರು ರಘುವಂಶಿಯನ್ನ ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ.
Advertisement