Extramarital Affair: ಅಕ್ರಮ ಸಂಬಂಧ ಉಳಿಸಿಕೊಳ್ಳಲು ಗಂಡ, ಮಕ್ಕಳು ಸೇರಿ ಇಡೀ ಕುಟುಂಬಕ್ಕೆ ವಿಷ; 'ವಿಷಕನ್ಯೆ' ಕೊನೆಗೂ ಅರೆಸ್ಟ್!

ಪತ್ನಿ ತನ್ನ ಪತಿ, ಮಕ್ಕಳು, ಅತ್ತೆ ಮತ್ತು ಮಾವರಿಗೆ ವಿಷ ಹಾಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದ್ದು, ಇದೀಗ ಹಾಸನ ಜಿಲ್ಲೆಯ ಬೇಲೂರು ಠಾಣೆ ಪೊಲೀಸರು ಆರೋಪಿ ಚೈತ್ರಾಳನ್ನು ಬಂಧಿಸಿದ್ದಾರೆ.
woman laces food with sleeping pills to murder family
ಕುಟುಂಬಕ್ಕೆ ವಿಷ ಹಾಕಿದ ಚೈತ್ರಾ
Updated on

ಹಾಸನ: ಪರ ಪುರುಷನೊಂದಿಗೆ ಸರಸಕ್ಕೆ ಅಡ್ಡಿಯಾಗಿದ್ದಾರೆಂಬ ಕಾರಣಕ್ಕೆ ಗಂಡ, ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ವಿಷ ಹಾಕಿದ್ದ ಮಹಿಳೆಯನ್ನು ಕೊನೆಗೂ ಹಾಸನ ಪೊಲೀಸರು ಬಂಧಿಸಿದ್ದಾರೆ.

ಹೌದು.. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ಪತ್ನಿ ತನ್ನ ಪತಿ, ಮಕ್ಕಳು, ಅತ್ತೆ ಮತ್ತು ಮಾವರಿಗೆ ವಿಷ ಹಾಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದ್ದು, ಇದೀಗ ಹಾಸನ ಜಿಲ್ಲೆಯ ಬೇಲೂರು ಠಾಣೆ ಪೊಲೀಸರು ಆರೋಪಿ ಚೈತ್ರಾಳನ್ನು ಬಂಧಿಸಿದ್ದಾರೆ.

ಹಾಸನ (Hassan) ಜಿಲ್ಲೆ ಬೇಲೂರು (Beluru) ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚೈತ್ರಾ ಎಂಬ 33 ವರ್ಷ ವಯಸ್ಸಿನ ಮಹಿಳೆ ತನ್ನ ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಅಂತ ಗಂಡ‌, ಮಕ್ಕಳು, ಅತ್ತೆ ಮತ್ತು ಮಾವನಿಗೆ ಸೊಸೆ ಅನ್ನದಲ್ಲಿ ವಿಷ ಹಾಕಿದ್ದಾಳೆ.

ಕೆರಳೂರು ಗ್ರಾಮದ ಗಜೇಂದ್ರ ಹಾಗೂ ಚೈತ್ರ ಮದುವೆಯಾಗಿ 10 ವರ್ಷವಾಗಿದ್ದು, ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ.

woman laces food with sleeping pills to murder family
ಪತಿಗೆ ಚಿನ್ನಾಭರಣ ಧರಿಸುವಂತೆ ಒತ್ತಾಯ, ರಿಟರ್ನ್ ಟಿಕೆಟ್ ಬುಕಿಂಗ್ ಮಾಡದ ಸೋನಮ್: 'ಹನಿಮೂನ್ ಹಂತಕಿ'ಯ ಕ್ರೈಮ್ ಹಿಸ್ಟರಿ!

ಫೋನ್ ನಿಂದ ವಿಚಾರ ಬೆಳಕಿಗೆ

ಕಳೆದ ಮೂರು ವರ್ಷಗಳಿಂದ ಸಣ್ಣ-ಪುಟ್ಟ ವಿಚಾರಕ್ಕೂ ಚೈತ್ರಾ ಗಂಡನೊಂದಿಗೆ ಜಗಳವಾಡುತ್ತಿದ್ದಳು. ಇನ್ನು ಇತ್ತೀಚೆಗೆ ಪತ್ನಿ ಚೈತ್ರಾ ಅತಿಯಾಗಿ ಫೊನ್​ನಲ್ಲಿ ಮಾತನಾಡುವುದು ಪತಿ ಗಜೇಂದ್ರರಿಗೆ ಅನುಮಾನ ತರಿಸಿತ್ತು. ಬಳಿಕ ಗಜೇಂದ್ರ ಈ ಬಗ್ಗೆ ಗಮನ ಹರಿಸಿದಾಗ ಚೈತ್ರ ಯುವಕನೊಂದಿಗೆ ಸಂಬಂಧ ಹೊಂದಿರುವುದು ತಿಳಿದು ಬಂದಿತ್ತು. ಚೈತ್ರಾಳಿಗೆ ಪುನೀತ್‌ ಎಂಬಾತ ಪರಿಚಯವಾಗಿದ್ದ.

ಇಬ್ಬರಿಗೂ ಸಲುಗೆ ಬೆಳೆದಿತ್ತು. ಹೀಗಾಗಿ ಪುನೀತ್‌ ಜೊತೆಗೆ ಚೈತ್ರಾ ಅನೈತಿಕ ಸಂಬಂಧ ಹೊಂದಿದ್ದಳು. ಕೂಡಲೆ ಎಚ್ಚೆತ್ತ ಗಜೇಂದ್ರ, ಚೈತ್ರಾ ತವರು ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ರಾಜಿ ಸಂಧಾನಕ್ಕೆ ಕೂತಾಗ, 'ನಾನು ತಪ್ಪು ಮಾಡಿದೆ. ಇನ್ಮುಂದೆ ಹೀಗಾಗಲ್ಲ' ಎಂದು ಚೈತ್ರಾ ಬೇಡಿಕೊಂಡಿದ್ದಾಳೆ. ಆಗ, ಗಜೇಂದ್ರ ಮಕ್ಕಳಿಗಾಗಿ ಮತ್ತೆ ಪತ್ನಿ ಚೈತ್ರಾ ಜೊತೆ ಸಂಸಾರ ಆರಂಭಿಸಿದ್ದಾರೆ.

ಸಂಧಾನ ನಂತರ ಮತ್ತೋರ್ವ ಯುವಕನೊಂದಿಗೆ ಪರಸಂಗ

ಇದಾದ ಕೆಲ ತಿಂಗಳ ನಂತರ ಚೈತ್ರಾ ಪಕ್ಕದ‌ ಮನೆಯ ಶಿವು ಎಂಬುವನ ಜೊತೆ ಗೆಳೆತನ ಮಾಡಿದ್ದಾಳೆ. ವಿಚಾರ ಗೊತ್ತಾಗಿ ಪ್ರಶ್ನೆ ಮಾಡಿದಾಗ, ಚೈತ್ರಾ ಮನೆಯಲ್ಲಿ ಗಲಾಟೆ ಮಾಡಿದ್ದಾಳೆ. ಅಲ್ಲದೆ, ಶಿವು ಮತ್ತು ಚೈತ್ರಾ ಒಟ್ಟಿಗೆ ಸೇರಿ ಗಜೇಂದ್ರ ಅವರ ವಿರುದ್ಧ ಕಳೆದ ವರ್ಷ ದೂರು ನೀಡಿ ಜೈಲಿಗೆ ಹೋಗುವ ಹಾಗೆ ಮಾಡಿದ್ದರು.

ಆದರೆ, ಎಲ್ಲವನ್ನೂ ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದ ಗಜೇಂದ್ರ ಅವರಿಗೆ ಅದ್ಯಾಕೋ ದಿಢೀರ್​ನೆ ಆರೋಗ್ಯ ಕೈ ಕೊಡಲು ಶುರುವಾಗಿದೆ. ಬಳಲಿಕೆ, ಸುಸ್ತು, ನಿತ್ರಾಣ, ಅತಿಯಾದ ನಿದ್ರೆ ಹೀಗೆ ಹತ್ತಾರು ಸಮಸ್ಯೆ ಶುರುವಾಗಿದೆ. ಏನಾಯಿತು ಅಂತ ಗಜೇಂದ್ರ ಆತಂಕದಲ್ಲಿರುವಾಗಲೇ, ಚೈತ್ರಾ ಮನೆಯಲ್ಲಿ ಜಗಳ ತೆಗೆದು ತವರು ಮನೆಗೆ ಹೊರಡಲು ಮುಂದಾಗಿದ್ದಾಳೆ.

woman laces food with sleeping pills to murder family
ಮೇಘಾಲಯ ಹನಿಮೂನ್ ಹತ್ಯೆ: ಪತಿ ಕೊಲೆಗೆ ಅನೈತಿಕ ಸಂಬಂಧ ಕಾರಣ; ಪತ್ನಿ, ಪ್ರೇಮಿ ಸೇರಿ ಐವರ ಬಂಧನ

ಚೈತ್ರಾ ಬ್ಯಾಗ್ ನಲ್ಲಿ ನಿದ್ರೆ ಮಾತ್ರೆಗಳು ಪತ್ತೆ

ಈ ಜಗಳದ ವೇಳೆ ಚೈತ್ರಾಳ ಬ್ಯಾಗ್ ಪರಿಶೀಲನೆ ನಡೆಸಿದಾಗ ಸತ್ಯ ಬಯಲಾಗಿದ್ದು, ಕದ್ದು ಮುಚ್ಚಿ ಮಾತನಾಡಲು ಮೊಬೈಲ್, ಬ್ಯಾಗ್ ಒಳಗೆ ಮಾತ್ರೆಗಳು ಸಿಕ್ಕಿವೆ. ಇವೆಲ್ಲವನ್ನೂ ತೆಗೆದುಕೊಂಡು ಗಜೇಂದ್ರ, ಪತ್ನಿ ಚೈತ್ರಾಳನ್ನು ಬಿಟ್ಟು ಒಬ್ಬರೇ ವೈದ್ಯರ ಬಳಿಗೆ ಹೋಗಿದ್ದಾರೆ. ಈ ಮಾತ್ರೆಗಳು ಆರೋಗ್ಯವಂತರು ಬಳಸುವುದಲ್ಲ ಎಂದು ವೈದ್ಯರು ಹೇಳಿದ್ದಾರೆ.

ಇಡೀ ಕುಟುಂಬ ಮುಗಿಸಲು ಚೈತ್ರಾ ಮಾಸ್ಚರ್ ಪ್ಲಾನ್?

ಈ ಮಾತ್ರೆಗಳನ್ನು ತಿಂಗಳುಗಳಿಂದ ಸ್ವಲ್ಪ ಸ್ವಲ್ಪವೇ ಗಂಡ, ಮಕ್ಕಳು, ಅತ್ತೆ ಮತ್ತು ಮಾವನಿಗೆ ನೀಡಿದ್ದ ಚೈತ್ರಾ ಐದೂ ಜನರನ್ನು ಮುಗಿಸುವ ಪ್ಲಾನ್ ಮಾಡಿದ್ದಳು ಎಂಬ ಭಯಾನಕ ಸತ್ಯ ಗಜೇಂದ್ರ ಅವರ ಅರಿವಿಗೆ ಬಂದಿದೆ. ಕೂಡಲೆ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಾದ ಗಜೇಂದ್ರ, ಇತನ ಮಕ್ಕಳು ಚಿಕಿತ್ಸೆ ಪಡೆದು ಹೊರ ಬಂದಿದ್ದಾರೆ.

ಕೊನೆಗೂ 'ವಿಷಕನ್ಯೆ' ಚೈತ್ರ ಅರೆಸ್ಟ್

ಈ ಪ್ರಕರಣ ಸಂಬಂಧ ಹಾಸನದ ಬೇಲೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಕೊಲೆ ಯತ್ನ ಕೇಸ್​ನಲ್ಲಿ ಚೈತ್ರಾ ಜೈಲು ಪಾಲಾಗಿದ್ದಾಳೆ. ಚೈತ್ರಾ ಪ್ರಿಯಕರನ ವಿರುದ್ಧವೂ ಕೇಸ್ ದಾಖಲಾಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com