
ಗುವಾಹಟಿ: ಇಂದೋರ್ ಉದ್ಯಮಿ ರಾಜಾ ರಘುವಂಶಿ ಅವರನ್ನು ಕೊಂದ ಆರೋಪಿಗಳು ಪತ್ನಿ ಸೋನಮ್ ಮತ್ತು ಆಕೆಯ ಗೆಳೆಯನ ಮನವಿಯ ಮೇರೆಗೆ ಗುವಾಹಟಿಯ ಲಾಡ್ಜ್‌ನಲ್ಲಿ ಸ್ವಲ್ಪ ದಿನಗಳ ಹಿಂದೆ ತಂಗಿದ್ದರು. ಈ ವೇಳೆ ಪ್ರವಾಸಿಗರಂತೆ ನಟಿಸಿದ್ದಾರೆ ಎಂದು ಲಾಡ್ಜ್ ಆಡಳಿತ ಮಂಡಳಿ ತಿಳಿಸಿದೆ.
TNIE ಜೊತೆ ಮಾತನಾಡಿದ ಲಾಡ್ಜ್ ವ್ಯವಸ್ಥಾಪಕ ಹಿಮಂತ ಕಲಿತಾ, ಕೊಲೆಗಾರರಾದ ಆಕಾಶ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ಮೇ 19 ರಂದು ರಾತ್ರಿ 8:30 ಕ್ಕೆ ಚೆಕ್ ಇನ್ ಆಗಿ ಮರುದಿನ ಬೆಳಿಗ್ಗೆ 5:30 ಕ್ಕೆ ಹೊರಟು ಹೋಗಿದ್ದಾರೆ. ಈ ವೇಳೆ ಅವರು ಇಂದೋರ್‌ನ ಪ್ರವಾಸಿಗರು ಎಂದು ಹೇಳಿದರು. ಅವರಿಗೆ ಕೊಠಡಿ ನೀಡುವ ಮೊದಲು ನಾವು ಎಲ್ಲಾ ಅಗತ್ಯ ವಿಧಿವಿಧಾನಗಳನ್ನು ಅನುಸರಿಸಿದ್ದೇವೆ. ಅವರು ಆಧಾರ್ ಕಾರ್ಡ್‌ಗಳು ಸೇರಿದಂತೆ ಅವರ ಗುರುತಿನ ಪುರಾವೆಗಳನ್ನು ಒದಗಿಸಿದ್ದಾರೆ. ನಾವು ಈಗಾಗಲೇ ಪೊಲೀಸರೊಂದಿಗೆ ಎಲ್ಲಾ ದಾಖಲೆಗಳನ್ನು ಹಂಚಿಕೊಂಡಿದ್ದೇವೆ. ಗುರುತಿನ ಪುರಾವೆ ನೀಡಲು ಸಾಧ್ಯವಾಗದಿದ್ದರೆ ನಾವು ಜನರಿಗೆ ಕೊಠಡಿಗಳನ್ನು ನೀಡುವುದಿಲ್ಲ" ಎಂದು ಕಲಿತಾ ಹೇಳಿದರು.
ಜೂನ್ 3 ರಂದು, ರಘುವಂಶಿ ಅವರ ಕೊಳೆತ ದೇಹವು ಸೊಹ್ರಾ ಪ್ರದೇಶದ (ಚೆರಾಪುಂಜಿ ಎಂದೂ ಕರೆಯಲ್ಪಡುವ) ಆಳವಾದ ಕಂದಕದಿಂದ ಪತ್ತೆಯಾದ ಒಂದು ದಿನದ ನಂತರ, ಮೇಘಾಲಯ ಪೊಲೀಸರು ಗುವಾಹಟಿಯಲ್ಲಿ ಖರೀದಿಸಿ ಕೊಲೆಗೆ ಬಳಸಲಾಗಿದೆ ಎಂದು ಶಂಕಿಸಲಾದ ಮಚ್ಚನ್ನು ವಶಪಡಿಸಿಕೊಂಡರು.
ಮೂವರು ಆರೋಪಿಗಳು ಲಾಡ್ಜ್‌ಗೆ ಭೇಟಿ ನೀಡಿದಾಗ ಅವರ ಬಳಿ ಬ್ಯಾಗ್‌ಪ್ಯಾಕ್‌ಗಳಿದ್ದವು. "ಆದರೆ ಅವರ ಬಳಿ ಯಾವುದೇ 'ಮಚ್ಚು ಇರುವುದು ನಮಗೆ ಕಂಡುಬಂದಿಲ್ಲ. ಅವರ ನಡವಳಿಕೆಯಲ್ಲಿ ಯಾವುದೇ ಅನುಮಾನಾಸ್ಪದ ಅಂಶ ಇರಲಿಲ್ಲ" ಎಂದು ಅವರು ಹೇಳಿದರು. "ಮೇಘಾಲಯ ಪೊಲೀಸರು ನನಗೆ ಕರೆ ಮಾಡಿದ್ದಾರೆ. ನಾನು ಶಿಲ್ಲಾಂಗ್‌ಗೆ ಹೋಗುತ್ತಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
ಅಸ್ಸಾಂ ಪೊಲೀಸರ ಸಹಾಯದಿಂದ ಮೇಘಾಲಯ ಪೊಲೀಸ್ ತಂಡವು ಬುಧವಾರ ಗುವಾಹಟಿಯ ಪಾನ್ ಬಜಾರ್ ಪ್ರದೇಶದಲ್ಲಿರುವ ಲಾಡ್ಜ್ ಮೇಲೆ ದಾಳಿ ನಡೆಸಿತು. ಅವರು ಮೂವರು ತಂಗಿದ್ದ ಕೊಠಡಿಯನ್ನು ಶೋಧಿಸಿ ಲಾಡ್ಜ್ ನೌಕರರ ಹೇಳಿಕೆಗಳನ್ನು ದಾಖಲಿಸಿಕೊಂಡರು. ಶಿಲ್ಲಾಂಗ್ ನ್ಯಾಯಾಲಯವು ಬುಧವಾರ ಮೂವರು ಆರೋಪಿಗಳನ್ನು ಸೋನಮ್ ಮತ್ತು ಆಕೆಯ ಗೆಳೆಯ ರಾಜ್ ಕುಶ್ವಾಹ ಜೊತೆಗೆ ಎಂಟು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಮೇಘಾಲಯ ಪೊಲೀಸರು ಸೋನಮ್ ಳನ್ನು ಆಕೆಯ ತವರು ಇಂದೋರ್‌ಗೆ ಕರೆತರುವ ಸಾಧ್ಯತೆಯಿದೆ, ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಮೇಘಾಲಯ ಪೊಲೀಸರು ತಮ್ಮ ತನಿಖೆಯನ್ನು 'ಆಪರೇಷನ್ ಹನಿಮೂನ್' ಎಂದು ಹೆಸರಿಸಿದ್ದಾರೆ.
ರಾಜಾ (29) ಮತ್ತು ಸೋನಮ್ (24) ಮೇ 11 ರಂದು ಇಂದೋರ್‌ನಲ್ಲಿ ವಿವಾಹವಾದರು ಮತ್ತು ಮೇ 23 ರಂದು ಮೇಘಾಲಯಕ್ಕೆ ತಮ್ಮ ಮಧುಚಂದ್ರ ಪ್ರವಾಸದ ಸಮಯದಲ್ಲಿ ನಾಪತ್ತೆಯಾದರು. ಜೂನ್ 2 ರಂದು ಸೊಹ್ರಾ ಪ್ರದೇಶದ ಜಲಪಾತದ ಬಳಿಯ ಆಳವಾದ ಕಂದಕದಲ್ಲಿ ರಾಜಾ ಅವರ ಶವ ಪತ್ತೆಯಾಗಿದೆ.
ಮೇಘಾಲಯದಲ್ಲಿ ಆರಂಭದಲ್ಲಿ ಕಾಣೆಯಾಗಿದ್ದ ಸೋನಮ್, ಭಾನುವಾರ ರಾತ್ರಿ ಉತ್ತರ ಪ್ರದೇಶದ ಘಾಜಿಪುರದಲ್ಲಿ ಕಾಣಿಸಿಕೊಂಡರು, ಅಲ್ಲಿ ರಘುವಂಶಿಯ ಹತ್ಯೆಯಲ್ಲಿ ಅವರ ಸಹಚರರಾದ ಆಕಾಶ್ (19), ವಿಶಾಲ್ (22) ಮತ್ತು ಆನಂದ್ ಅವರನ್ನು ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಆರೋಪಿಸಿ ಬಂಧಿಸಿದರು.
ಗುವಾಹಟಿಯ ಕಾಮಾಕ್ಯ ದೇವಸ್ಥಾನದಲ್ಲಿ ನೈವೇದ್ಯ ಅರ್ಪಿಸಿದ ನಂತರವೇ ಮದುವೆಯನ್ನು ಪೂರ್ಣಗೊಳಿಸಲು ಅವಕಾಶ ನೀಡುವುದಾಗಿ ರಾಜಾ ಅವರಿಗೆ ಸೋನಮ್ ಹೇಳಿದ್ದಳು ಎಂದು ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅದರ ಪ್ರಕಾರ, ರಾಜಾ ತಮ್ಮ ಹನಿಮೂನ್‌ಗಾಗಿ ಗುವಾಹಟಿ ಮತ್ತು ಪಕ್ಕದ ಮೇಘಾಲಯಕ್ಕೆ ಪ್ರವಾಸವನ್ನು ಯೋಜಿಸಿದ್ದರು, ಆದರೆ ಸೋನಮ್ ಮತ್ತು ಆಕೆಯ ಗೆಳೆಯ ಕುಶ್ವಾಹ ಅವರು ಈಶಾನ್ಯ ರಾಜ್ಯದ ಕಾಡಿನಲ್ಲಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.
"ಸೋನಮ್ ತನ್ನ ಪತಿಯನ್ನು ನೋಂಗ್ರಿಯಾಟ್‌ನ ಆಳವಾದ ಕಾಡಿಗೆ ಕರೆದೊಯ್ಯುವಂತೆ ಒತ್ತಾಯಿಸಿದಳು, ಅವಳು ನೇಮಿಸಿಕೊಂಡ ಹಿಟ್‌ಮ್ಯಾನ್‌ಗಳು ಮಾರ್ಗದಲ್ಲಿ ಆತನನ್ನು ಕೊಲ್ಲಲು ಒಳ್ಳೆಯ ಅವಕಾಶ ಸಿಗುತ್ತದೆ ಎಂದುಕೊಂಡಿದ್ದಳು, ಆದರೆ ಮೇ 22 ಮತ್ತು ಮೇ 23 ರಂದು ನೋಂಗ್ರಿಯಾಟ್‌ಗೆ ಟ್ರೆಕ್ಕಿಂಗ್ ಮಾಡುವ ಪ್ರವಾಸಿಗರ ಸಂಖ್ಯೆ ತುಂಬಾ ಇದ್ದ ಕಾರಣ, ಅಲ್ಲಿ ಅವನನ್ನು ಕೊಲ್ಲಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಅಂತಿಮವಾಗಿ ವೈಸಾವ್ಡಾಂಗ್ ಜಲಪಾತದ ಬಳಿ ಅವನನ್ನು ಕೊಂದು, ಅವನ ದೇಹವನ್ನು ಆಳವಾದ ಕಂದಕಕ್ಕೆ ಎಸೆದರು ಎಂದು ಪೊಲೀಸ್ ಅಧಿಕಾರಿ ಹೇಳಿದರು.
ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಪೂರ್ವ ಖಾಸಿ ಹಿಲ್ಸ್ ಎಸ್‌ಪಿ ಸೈಯೆಮ್, ಗುತ್ತಿಗೆ ಹಂತಕರು ಮೇ 19 ರಂದು ಗುವಾಹಟಿಗೆ ಆಗಮಿಸಿ ತಮ್ಮ ಹೋಟೆಲ್‌ನ ಹೊರಗಿನಿಂದ ಮಚ್ಚನ್ನು ಖರೀದಿಸಿ ನಂತರ ಶಿಲ್ಲಾಂಗ್‌ಗೆ ರಸ್ತೆ ಮೂಲಕ ಪ್ರಯಾಣಿಸಿದರು ಎಂದು ಹೇಳಿದರು.
ಕೊಲೆ ನಡೆದ ದಿನವಿಡೀ ಸೋನಮ್ ತನ್ನ ಗೆಳೆಯನೊಂದಿಗೆ ಸಂಪರ್ಕದಲ್ಲಿದ್ದಳು, ಅದರ ಜೊತೆಗೆ ರಾಜ್ ಮೂವರು ಗುತ್ತಿಗೆ ಕೊಲೆಗಾರರೊಂದಿಗೆ ಸಂಪರ್ಕದಲ್ಲಿದ್ದ ಎಂದು ಅವರು ಹೇಳಿದರು. ರಾಜಾ ಕೊಲ್ಲಲ್ಪಟ್ಟಾಗ ಸೋನಮ್ ಇದ್ದಳು" ಎಂದು ಅಧಿಕಾರಿ ಹೇಳಿದರು.
ಏತನ್ಮಧ್ಯೆ, ರಾಜಾ ಅವರ ದೇಹವನ್ನು ಹೊರತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಶೋಧ ಮತ್ತು ರಕ್ಷಣಾ ತಂಡವನ್ನು ಮೇಘಾಲಯ ಸರ್ಕಾರವು ಸನ್ಮಾನಿಸಿತು.
Advertisement