Accident Zone: ಜಾಗ ಒಂದೇ, 10 ದಿನಗಳ ಅಂತರದಲ್ಲಿ 2 ಅಪಘಾತ

ಆಂಧ್ರಪ್ರದೇಶದ ನೆಲ್ಲೂರು-ಮುಂಬೈ ರಾಜ್ಯ ಹೆದ್ದಾರಿಯ ತಿರುವು ಅಕ್ಷರಶಃ ಅಪಘಾತ ವಲಯವಾಗಿ ಮಾರ್ಪಟ್ಟಿದ್ದು, ಈ ಜಾಗದಲ್ಲಿ ತಿರುವಿಗೆ ಮುಂದಾದ ವಾಹನಗಳು ಒಂದಲ್ಲಾ ಒಂದು ಅಪಘಾತಕ್ಕೀಡಾಗಿವೆ.
Accidents spot
ಒಂದೇ ಜಾಗದಲ್ಲಿ 2 ಅಪಘಾತ
Updated on

ನೆಲ್ಲೂರು: ಆಂಧ್ರ ಪ್ರದೇಶದ ರಸ್ತೆಯೊಂದು ಕೇವಲ 10 ದಿನಗಳ ಅಂತರದಲ್ಲಿ ಒಂದೇ ಜಾಗದಲ್ಲಿ 2 ಅಪಘಾತಗಳಿಗೆ ವೇದಿಕೆಯಾಗುವ ಮೂಲಕ ನಿಗೂಢವಾಗಿ ಮಾರ್ಪಟ್ಟಿದೆ.

ಹೌದು.. ಆಂಧ್ರಪ್ರದೇಶದ ನೆಲ್ಲೂರು-ಮುಂಬೈ ರಾಜ್ಯ ಹೆದ್ದಾರಿಯ ತಿರುವು ಅಕ್ಷರಶಃ ಅಪಘಾತ ವಲಯವಾಗಿ ಮಾರ್ಪಟ್ಟಿದ್ದು, ಈ ಜಾಗದಲ್ಲಿ ತಿರುವಿಗೆ ಮುಂದಾದ ವಾಹನಗಳು ಒಂದಲ್ಲಾ ಒಂದು ಅಪಘಾತಕ್ಕೀಡಾಗಿವೆ. ಈ ಪೈಕಿ ಎರಡು ವಾಹನಗಳ ಅಪಘಾತ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ಜಾಗ ನಿಗೂಢತೆಗೆ ಕಾರಣವಾಗಿದೆ.

10 ದಿನಗಳ ಅಂತರದಲ್ಲಿ 2 ಅಪಘಾತ

ಇದೇ ನೆಲ್ಲೂರು-ಮುಂಬೈ ರಾಜ್ಯ ಹೆದ್ದಾರಿಯ ತಿರುವು ಪ್ರದೇಶದಲ್ಲಿ ಕೇವಲ 10 ದಿನಗಳ ಅಂತರದಲ್ಲಿ ಎರಡು ಅಪಘಾತವಾಗಿದೆ. ಇದೇ ಮೇ 5ರಂದು ಇದೇ ಜಾಗದಲ್ಲಿ ತಿರುವು ಪಡೆಯುತ್ತಿದ್ದ ಪ್ರಯಾಣಿಕರ ಆಟೋಗೆ ಎಸ್ ಯುವಿ ಕಾರೊಂದು ಢಿಕ್ಕಿಯಾಗಿತ್ತು.

Accidents spot
6 ಕೋಟಿ ರೂ ಮೌಲ್ಯದ Lamborghini ಕಾರಲ್ಲಿ ನಡು ರಸ್ತೆಯಲ್ಲೇ ಡೇಂಜರಸ್ ಸ್ಟಂಟ್! Video Viral

ಈ ವೇಳೆ ಆಟೋದಲ್ಲಿದ್ದ ಪ್ರಯಾಣಿಕರು ಚೆಲ್ಲಾಪಿಲಿಯಾಗಿದ್ದರು. ಇದಾದ ಕೇವಲ 10 ದಿನಗಳ ನಂತರ ಅಂದರೆ ನಿನ್ನೆ ಮೇ 15ರಂದು ಇದೇ ಜಾಗದಲ್ಲಿ ಮತ್ತೊಂದು ಅಪಘಾತವಾಗಿದ್ದು, ಕಾರೊಂದು ಇದೇ ತಿರುವಿನಲ್ಲಿ ಹೋಗುತ್ತಿದ್ದಾಗ ಬೈಕ್ ಸವಾರ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿ ರಭಸಕ್ಕೆ ಬೈಕ್ ಸವಾರಿನಿಗೆ ಗಾಯವಾಗಿದ್ದು ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ರಸ್ತೆ... ಪ್ರಮುಖವಾಗಿ ಈ ತಿರುವು ಪ್ರದೇಶದಲ್ಲಿ ಆಗಿಂದಾಗ್ಗೆ ಸಾಕಷ್ಟ ಅಪಘಾತಗಳು ಸಂಭವಿಸುತ್ತಿದ್ದು, ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕನಿಷ್ಠ ಪಕ್ಷ ಇಲ್ಲೊಂದು ಸ್ಪೀಡ್ ಬ್ರೇಕರ್ ಆದರೂ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com