
ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಖೇಡ್ಲಿ ಪಟ್ಟಣದಲ್ಲಿ ಒಂಬತ್ತು ವರ್ಷದ ಮಗುವಿನ ತಂದೆಯನ್ನು ಆತನ ಎದುರೇ ಕೊಲೆ ಮಾಡಲಾಗಿದೆ. ಪೊಲೀಸರ ಪ್ರಕಾರ, ಈ ಕೊಲೆಯನ್ನು ಮಗುವಿನ ತಾಯಿಯ ಪ್ರಿಯಕರ ಮತ್ತು ಅವನ ನಾಲ್ವರು ಸಹಚರರು ಮಾಡಿದ್ದಾರೆ. ಕೊಲೆಗೆ ಪ್ರತ್ಯಕ್ಷದರ್ಶಿಯಾಗಿರುವ ಈ ಮಗು, ಘಟನೆಯ ಸಮಯದಲ್ಲಿ ತನ್ನ ತಾಯಿ ಮೌನವಾಗಿ ನಿಂತಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಜೂನ್ 7ರ ರಾತ್ರಿ ಬೀದಿ ವ್ಯಾಪಾರಿ ಕಾಶಿರಾಮ್ ಪ್ರಜಾಪತ್ ಎಂಬಾತ ತನ್ನ ಬಾಡಿಗೆ ಸಹಚರರ ಸಹಾಯಿಂದ ಟೆಂಟ್ ವ್ಯವಹಾರ ನಡೆಸುತ್ತಿದ್ದ ವೀರು ಜಾತವ್ ಎಂಬಾತನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಕೂಗಾಡುವ ಶಬ್ದ ಕೇಳಿ ಎಚ್ಚರವಾಯಿತು ಎಂದು ಮಗು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಾಶಿರಾಮ್ ತನ್ನ ತಂದೆಯ ಬಾಯಿಯನ್ನು ದಿಂಬಿನಿಂದ ಉಸಿರುಗಟ್ಟಿಸುತ್ತಿರುವುದನ್ನು ನಾನು ನೋಡಿದೆ. ಆದರೆ ನನ್ನ ತಾಯಿ ಅನಿತಾ ಹತ್ತಿರದಲ್ಲಿ ನಿಂತು ನೋಡುತ್ತಿದ್ದಳು. ನಾನು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಕಾಶಿರಾಮ್ ನನ್ನನ್ನು ಎತ್ತಿಕೊಂಡು ಸುಮ್ಮನಿರಲು ಬೆದರಿಕೆ ಹಾಕಿದ್ದನು ಎಂದು ಬಾಲಕ ಹೇಳಿರುವುದಾಗಿ ಖೇಡ್ಲಿ ಪೊಲೀಸ್ ಠಾಣೆಯ ಉಸ್ತುವಾರಿ ಧೀರೇಂದ್ರ ಸಿಂಗ್ ತಿಳಿಸಿದ್ದಾರೆ.
ಘಟನೆಯ ರಾತ್ರಿ ನನ್ನ ತಂದೆ ತಡವಾಗಿ ಮನೆಗೆ ಬಂದು ಮಲಗಲು ಹೋಗುವ ಮೊದಲು ತನ್ನ ಫೋನ್ ಅನ್ನು ಚಾರ್ಜ್ ಮಾಡಲು ಕೇಳಿದರು ಎಂದು ಹುಡುಗ ಹೇಳಿದನು. ನನ್ನನ್ನು ಬೇಗ ಮಲಗಿಕೊಳ್ಳುವಂತೆ ತಾಯಿ ಹೇಳಿದರು. ರಾತ್ರಿ ಬಾಲಕನಿಗೆ ಶಬ್ದ ಕೇಳಿಸಿತು. ಕಾಶಿರಾಮ್ ಮತ್ತು ಇತರ ನಾಲ್ವರನ್ನು ಒಳಗೆ ಕರೆತಂದಿದ್ದು ತಾಯಿಯೇ ಬಾಗಿಲು ತೆರೆಯುವುದನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, ಅನಿತಾ ಮತ್ತು ವೀರು ಜಾತವ್ ಇಬ್ಬರೂ ಇಬ್ಬರೂ ಪ್ರೇಮ ವಿವಾಹವಾಗಿದ್ದು ಈಗಾಗಲೇ ವಿಚ್ಛೇದನ ಪಡೆದಿದ್ದರು. ಅನಿತಾ ದಿನಸಿ ಅಂಗಡಿ ನಡೆಸುತ್ತಿದ್ದರು. ಅಲ್ಲಿ ಕಾಶಿರಾಮ್ ಕಚೋರಿ ಇತ್ಯಾದಿಗಳನ್ನು ಮಾರಾಟ ಮಾಡುತ್ತಿದ್ದನು. ಕ್ರಮೇಣ ಅವರ ಸಂಬಂಧ ಬಲವಾಯಿತು. ಇಬ್ಬರೂ ಸೇರಿ ವೀರುನನ್ನು ಕೊಲ್ಲಲು ಸಂಚು ರೂಪಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ಕೈಲಾಶ್ ಚಂದ್ ಅವರು, "ಘಟನೆಯನ್ನು ಯೋಜಿತ ರೀತಿಯಲ್ಲಿ ನಡೆಸಲಾಯಿತು. ಈ ಕೆಲಸಕ್ಕಾಗಿ ಕಾಶಿರಾಮ್ ನಾಲ್ಕು ಜನರಿಗೆ 2 ಲಕ್ಷ ರೂ.ಗಳನ್ನು ನೀಡಿದ್ದನು. ಕೊಲೆಯಾದ ರಾತ್ರಿ, ಅನಿತಾ ಅವರಿಗೆ ಬಾಗಿಲು ತೆರೆದರು. ತನ್ನ ಪತಿಯನ್ನು ಕತ್ತು ಹಿಸುಕಿ ಕೊಲ್ಲುವಾಗ ಅವಳು ಮೂಕ ಪ್ರೇಕ್ಷಕಳಾಗಿದ್ದಳು ಎಂದು ಹೇಳಿದರು. ಸದ್ಯ ಅನಿತಾಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Advertisement